ಕನಕಪುರ: ಮಾನವೀಯ ಮೌಲ್ಯಗಳನ್ನು ಬಿತ್ತುವ ಜಾನಪದ ಕಲೆಗಳು ನಮ್ಮೆಲ್ಲರ ಸಾಧನೆಗೆ ಸ್ಫೂರ್ತಿ ನೀಡುತ್ತವೆ ಎಂದು ಕಾಮನ್ ಮ್ಯಾನ್ ಚಲನಚಿತ್ರ ನಿರ್ಮಾಪಕ ನಟ ಡಾ.ಎನ್.ನರಸಿಂಹಮೂರ್ತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಮಟೆ ವಾದನ, ಪೂಜಾ ಕುಣಿತ, ಚರ್ಮ ವಾದ್ಯ, ಪಟದ ಕುಣಿತ, ಕೊಂಬು ಕಹಳೆ, ವೀರಗಾಸೆ, ಚಿಲಿಪಿಲಿ ಗೊಂಬೆ ಕಂಸಾಳೆ, ಸೋಮನ ಕುಣಿತ, ಜಾನಪದ ನೃತ್ಯ, ಸೋಬಾನೆ, ರಂಗಗೀತೆ, ಸಮೂಹ ಗಾಯನ ಹಾಗೂ ಕವಿಗೋಷ್ಠಿ ನಡೆಯಿತು.
ಸಾಧಕರಾದ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಾಡೆದೊಡ್ಡಿ ಕಬ್ಬಾಳೇಗೌಡ, ಪ್ರಾಂಶುಪಾಲ ಡಾ.ಸತೀಶ್ , ಯುನಿಟಿ ಲೀಡ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ಅನ್ನದಾನಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಭೋಜರಾಜ್, ಪ್ರಾಂಶುಪಾಲ ಡಾ.ಕೆ.ಜಿ. ಸತೀಶ್, ಲಯನ್ ಎ.ಟಿ.ರವಿ,ಪಿ ರೂಪ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಚಂದ್ರ, ಉಪನ್ಯಾಸಕ ಚಂದ್ರಾಜ್, ಹನಿಯೂರು ಲೋಕೇಶ್, ಹರೀಶ್, ಟ್ರಸ್ಟ್ ಕಾರ್ಯದರ್ಶಿ ಎಂ.ನಾಗೇಶ, ಪಿ.ಪುನೀತ್, ಮರಿಸ್ವಾಮಿ, ಪ್ರೇಮ ಹಾಜರಿದ್ದರು.
ಕನಕಪುರದ ಆದಿತ್ಯ ಕಾಲೇಜಿನಲ್ಲಿ ರಾಜ್ಯ ಮಟ್ಟದ ಜನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.