ಜೀವನ ಮೌಲ್ಯಗಳ ಹೂರಣವೇ ಜನಪದ ಸಾಹಿತ್ಯ: ಗವಿಸಿದ್ದಯ್ಯ ಹಳ್ಳಿಕೇರಿಮಠ

KannadaprabhaNewsNetwork |  
Published : Oct 21, 2025, 01:00 AM IST
ಕಾರ್ಯಕ್ರಮದಲ್ಲಿ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿದರು. | Kannada Prabha

ಸಾರಾಂಶ

ಶಿಷ್ಟ ಸಾಹಿತ್ಯದ ಉಗಮಕ್ಕೆ ಜನಪದವೇ ಮೂಲ. ಗ್ರಾಮೀಣ ಜನ ತಮ್ಮ ಜೀವಾನುಭವಗಳನ್ನು ಎರಕ ಹೊಯ್ದು ಜನಪದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ.

ಗದಗ: ಕನ್ನಡ ಸಂಸ್ಕೃತಿಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ದೈನದಿಂದ ಬದುಕು, ಹಬ್ಬ ಹರಿದಿನಗಳು, ಕೃಷಿ ಚಟುವಟಿಕೆಗಳು, ಭಕ್ತಿಭಾವ, ಪೌರಾಣಿಕ ಸನ್ನಿವೇಶಗಳನ್ನು ಇದು ಒಳಗೊಂಡಿದೆ. ಒಟ್ಟಾರೆ ಇದು ಜೀವನ ಮೌಲ್ಯಗಳ ಹೂರಣದಿಂದ ಕೂಡಿದೆ ಎಂದು ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ತಿಳಿಸಿದರು.

ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ದಿ. ನಾರಾಯಣಭಟ್ ಶಿವಪೂರ ಅವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸದಲ್ಲಿ ಯುವಜನತೆ ಮತ್ತು ಜನಪದ ಸಾಹಿತ್ಯ ಕುರಿತು ಮಾತನಾಡಿದರು.

ಕಸಾಪ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಮಾತನಾಡಿ, ದಿ. ನಾರಾಯಣಭಟ್ ಶಿವಪೂರ ಅವರು ಶ್ರಮ ಸಂಸ್ಕೃತಿ ಮೂಲಕ ಗದಗ ಪರಿಸರದಲ್ಲಿ ಹೋಟೆಲೋದ್ಯಮವನ್ನು ಪ್ರಾರಂಭಿಸಿ ಮಾದರಿ ಜೀವನವನ್ನು ನಡೆಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿಷ್ಟ ಸಾಹಿತ್ಯದ ಉಗಮಕ್ಕೆ ಜನಪದವೇ ಮೂಲ. ಗ್ರಾಮೀಣ ಜನ ತಮ್ಮ ಜೀವಾನುಭವಗಳನ್ನು ಎರಕ ಹೊಯ್ದು ಜನಪದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಉತ್ತರ ಕರ್ನಾಟಕದ ಜನಪದ ಸಂಸ್ಕೃತಿ ವಿಶಿಷ್ಟವಾದುದು. ಜಾನಪದ ಪ್ರಕಾರಗಳ ಕಲಿಕೆ ಶಿಕ್ಷಣದ ಒಂದು ಭಾಗವಾಗಿ ಸರ್ಕಾರ ಅಳವಡಿಸಿದಾಗ ಇಂದಿನ ಪೀಳಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ನಾರಾಯಣಭಟ್ ಶಿವಪೂರ ಅವರ ಸಾಮಾಜಿಕ ಸೇವೆಯ ಕುರಿತು ಡಾ. ಆರ್.ಎನ್. ಗೋಡಬೋಲೆ, ಡಾ. ವಾಣಿ ಶಿವಪೂರ ಹಾಗೂ ಡಾ. ಅನಂತ ಶಿವಪೂರ ಮಾತನಾಡಿದರು.ಈ ಸಂದರ್ಭದಲ್ಲಿ ಅಶೋಕ ಹಾದಿ ಅವರನ್ನು ಗೌರವಿಸಲಾಯಿತು. ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಆರ್.ಡಿ. ಕಪ್ಪಲಿ, ಬಿ.ಬಿ. ಹೊಳಗುಂದಿ, ರತ್ನಕ್ಕ ಪಾಟೀಲ, ರಾಜೇಶ್ವರಿ ಬಡ್ನಿ, ಉಮಾದೇವಿ ಕಣವಿ, ಬಸವರಾಜ ಗಣಪ್ಪನವರ, ಯಲ್ಲಪ್ಪ ಹಂದ್ರಾಳ, ಪ್ರಸನ್ನಕುಮಾರ ಇನಾಮದಾರ, ಚಂದ್ರಶೇಖರ ಐಲಿ, ರಾಜಶೇಖರ ಕರಡಿ, ಮಲ್ಲಿಕಾರ್ಜುನ ನಿಂಗೋಜಿ, ಜೆ.ಎ. ಪಾಟೀಲ, ಅಶೋಕ ಸತ್ಯರೆಡ್ಡಿ, ಗಂಗವ್ವ ಮುದಗಲ್, ಚನವೀರಪ್ಪ ದುಂದೂರ, ಸತೀಶ ಕುಲಕರ್ಣಿ, ಬಿ.ಎಸ್. ಹಿಂಡಿ, ಶರಣಪ್ಪ ಹೊಸಂಗಡಿ, ಬಸವರಾಜ ನೆಲಜೇರಿ, ಅಂಬಿಕಾ ಶಿವಪೂರ, ಸತೀಶಕುಮಾರ ಚನ್ನಪ್ಪಗೌಡ್ರ, ಕೆ.ಎನ್‌. ಶಿವಪೂರ, ಕಾರ್ತಿಕ ಶಿವಪೂರ, ಸರಸ್ವತಿ ಶಿವಪೂರ, ಎಂ.ಎಫ್. ಡೋಣಿ ಮೊದಲಾದವರು ಇದ್ದರು. ಮಂಜುಳಾ ವೆಂಕಟೇಶಯ್ಯ ಕವನ ವಾಚಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

PREV

Recommended Stories

ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ: ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ
ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಬೆಳೆಸಬೇಕಿದೆ: ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ