ಶ್ರೀರಂಗಪಟ್ಟಣ : ಕಲೆ, ಸಂಸ್ಕೃತಿ ಮೂಲಕ ಸಾಮರಸ್ಯ ಮೂಡಿಸಿರುವ ಜಾನಪದ: ಚ.ನಾರಾಯಣಸ್ವಾಮಿ ಅಭಿಪ್ರಾಯ

KannadaprabhaNewsNetwork |  
Published : Aug 25, 2024, 02:11 AM ISTUpdated : Aug 25, 2024, 09:51 AM IST
23ಕೆಎಂಎನ್ ಡಿ20 | Kannada Prabha

ಸಾರಾಂಶ

ಸಮಾಜದಲ್ಲಿ ನೈತಿಕತೆ ಮತ್ತು ನೀತಿ, ನಿಯಮಗಳನ್ನು ಬೆಳೆಸಿ, ಸದೃಢ ದೇಹ ಮತ್ತು ಸದೃಢ ಮನಸ್ಸನ್ನು ರೂಪಿಸುವ ಶಕ್ತಿಯನ್ನು ಜಾನಪದ ಕಲೆ ಹೊಂದಿದೆ. 

  ಶ್ರೀರಂಗಪಟ್ಟಣ : ಜಾನಪದ ಪರಿಷತ್ತು ಕಲೆ, ಸಂಸ್ಕೃತಿ ಮತ್ತು ಪರಂಪರೆ ಮೂಲಕ ಸಮುದಾಯದಲ್ಲಿ ಸಾಮರಸ್ಯ ಮೂಡಿಸಿ ಜೊತೆಗೆ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದು ಕಲಾವಿದ ಹಾಗೂ ಗಮ್ಯ ಸಂಸ್ಥೆ ನಿರ್ದೇಶಕ ಚ. ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಬೆಳಗೊಳ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿದರು.

ಸಮಾಜದಲ್ಲಿ ನೈತಿಕತೆ ಮತ್ತು ನೀತಿ, ನಿಯಮಗಳನ್ನು ಬೆಳೆಸಿ, ಸದೃಢ ದೇಹ ಮತ್ತು ಸದೃಢ ಮನಸ್ಸನ್ನು ರೂಪಿಸುವ ಶಕ್ತಿಯನ್ನು ಜಾನಪದ ಕಲೆ ಹೊಂದಿದೆ. ಜಾನಪದ ಸಾಹಿತ್ಯಕ್ಕೆ ಯಾವುದೇ ಮೂಲ ಗ್ರಂಥವಿಲ್ಲ. ಆದರೆ, ಪ್ರತಿಯೊಂದು ಕಲೆಗೆ ವೈಜ್ಞಾನಿಕ ಹಿನ್ನೆಲೆ ಇದೆ. 1846 ಆಗಸ್ಟ್ 22 ರಂದು ಯುನೆಸ್ಕೋದಿಂದ ಮಾನ್ಯತೆ ಪಡೆದ ದಿನವನ್ನು ವಿಶ್ವ ಜಾನಪದ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಮಹೇಶ್ ಮಾತನಾಡಿ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಜಾನಪದ ಕಲೆಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಎಂ.ಡಿ ಕುಮಾರ್, ಬೆಳಗೊಳ ಗ್ರಾಮದ ರಂಗಗೀತೆ ಕಲಾವಿದ ಬಿ.ಆರ್ ಸ್ವಾಮಿಗೌಡ, ಸೋಬಾನೆ ಹಾಡುಗಾರ್ತಿ ಪುಟ್ಟಮ್ಮ, ಅರುಣೋದಯ ಕಲಾ ತಂಡದ ನಾಯಕಿ ಆಲದಹಳ್ಳಿ ಮಂಜುಳಾ, ಗ್ರಂಥಪಾಲಕ ಹಾಗೂ ಕಲಾವಿದ ಕೂಡಲಕುಪ್ಪೆ ಸೋಮಶೇಖರ್, ಅಂತಾರಾಷ್ಟ್ರೀಯ ಡೊಳ್ಳು, ಪೂಜಾ ಹಾಗೂ ಕಂಸಾಳೆ ಕಲಾವಿದ ಹಾಗೂ ತರಬೇತಿದಾರ ಹೊಸ ಕನ್ನಂಬಾಡಿ ಪ್ರತಾಪ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಸಿದ್ದಲಿಂಗು, ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಸಿ ಚಂದ್ರು, ಶಿಕ್ಷಣ ಸಂಯೋಜಕ ನಂಜುಂಡಚಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲಕ್ಷ್ಮಣ್ ಗೌಡ, ಸಿಆರ್‌ಪಿ ಮೋಹನ್, ಪತ್ರಕರ್ತ ಗಂಜಾಂ ಮಂಜುನಾಥ್, ಕಜಾಪ ಕಾರ್ಯದರ್ಶಿ ಉಮಾಶಂಕರ್, ಸೈಯದ್ ಖಾನ್ ಬಾಬು ಸೇರಿದಂತೆ ಸಹ ಶಿಕ್ಷಕರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ