ಜಾನಪದವು ಕನ್ನಡ ಸಂಸ್ಕೃತಿಗೆ ಮುಖ ಪುಟವಿದ್ದಂತೆ: ಟಿ.ಬಿ.ಶಿವಣ್ಣ

KannadaprabhaNewsNetwork |  
Published : Aug 24, 2026, 02:00 AM IST
22ಕೆಎಂಎನ್ ಡಿ18 | Kannada Prabha

ಸಾರಾಂಶ

ಜಾನಪದ ಜನರ ಬಾಯಿಂದ ಹೊರ ಬಂದ ಹಾಡುಗಳಿಂದಲೇ ಆರಂಭವಾಗಿ ಜನರಿಂದ ಬೆಳೆದು ಎಲ್ಲಾ ಸಾಹಿತ್ಯ ಲೋಕದ ಪ್ರಕಾರಗಳಿಗೂ ತಾಯಿಬೇರಾಗಿದೆ. ಜನಪದದಿಂದಲೇ ಪ್ರತಿಯೊಂದು ಸಾಹಿತ್ಯ ಪದಗಳನ್ನು ಜೋಡಣೆ ಮಾಡುವ ಮೂಲಕ ಹರಡಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗ್ರಾಮೀಣ ಮಟ್ಟದಲ್ಲಿ ಬೆಳೆದು ಬಂದ ಜಾನಪದವು ಕನ್ನಡ ಸಂಸ್ಕೃತಿಗೆ ಮುಖ ಪುಟವಿದ್ದಂತೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಬಿ.ಶಿವಣ್ಣ ಹೇಳಿದರು.

ತಾಲೂಕಿನ ಕೊಡಿಯಾಲ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ದಲಿತ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆಗೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಾನಪದ ಜನರ ಬಾಯಿಂದ ಹೊರ ಬಂದ ಹಾಡುಗಳಿಂದಲೇ ಆರಂಭವಾಗಿ ಜನರಿಂದ ಬೆಳೆದು ಎಲ್ಲಾ ಸಾಹಿತ್ಯ ಲೋಕದ ಪ್ರಕಾರಗಳಿಗೂ ತಾಯಿಬೇರಾಗಿದೆ. ಜನಪದದಿಂದಲೇ ಪ್ರತಿಯೊಂದು ಸಾಹಿತ್ಯ ಪದಗಳನ್ನು ಜೋಡಣೆ ಮಾಡುವ ಮೂಲಕ ಹರಡಿದೆ ಎಂದರು.

ಪ್ರತಿಯೊಂದು ಸಾಹಿತ್ಯದಲ್ಲಿ ಜಾನಪದವೇ ಸೇರಿಕೊಂಡಿರುತ್ತಿತ್ತು . ಆದರೆ, ಕಾಲ ಉರುಳಿದಂತೆ ಜಾನಪದಕ್ಕೆ ಹೆಚ್ಚಿನ ಒತ್ತು ಸಿಗದೆ ಹಿಂದಕ್ಕೆ ಹೋಗಿದೆ. ಅದನ್ನು ಇವತ್ತಿನ ಪೀಳಿಗೆಗಳು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ನೂರ್ ಅಹಮದ್‍ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕರ್ನಾಟಕ ಜಾನಪದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಣ್ಣ, ಜಾನಪದ ಕಲಾವಿದ ಹುರಗಲವಾಡಿ ರಾಮಯ್ಯ ಮಾತನಾಡಿದರು.

ಇದೇ ವೇಳೆ ಹಿರಿಯ ಜಾನಪದ ಕಲಾವಿದರಾದ ಬೋರಮ್ಮ ಕೊಡಿಯಾಲ, ಕೆ.ಶೆಟ್ಟಹಳ್ಳಿ ರಾಜಶೇಖರ್ ಹಾಗೂ ಮೋಹನ್ ಮರಳಗಾಲ, ಆಲದಳ್ಳಿ ಮಂಜುಳ ಹಾಗೂ ಬಂದೇಶ್ ಇವರನ್ನು ಅಭಿನಂದಿಸಲಾಯಿತು. ವಿವಿಧ ಕಲಾವಿದರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಮಾಶಂಕರ್, ಹಿರಿಯ ಶಿಕ್ಷಕ ತೀರ್ಥ ಲಿಂಗಪ್ಪ, ದಲಿತ ಪರಿಷತ್‍ ಅಧ್ಯಕ್ಷ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಕಸಾಪ ಮಾಜಿ ಅಧ್ಯಕ್ಷ ಪುರುಷೋತ್ತಮ್‍ ಚಿಕ್ಕಪಾಳ್ಯ, ಚುಟುಕು ಸಾಹಿತ್ಯ ಪರಿಷತ್‍ ಅಧ್ಯಕ್ಷ ಕದಲಗೆರೆ ಜಯರಾಮ್‍, ಶಿಕ್ಷಕ ಲಿಂಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಧಾನ ಸಮಾರಂಭ; ಬಾಕಿ ಪ್ರಕರಣ ಇತ್ಯರ್ಥ
ಶಿಕ್ಷಣವೇ ಎಲ್ಲ ಸಮಸ್ಯೆಗಳ ಪರಮೋಚ್ಛ ಪರಿಹಾರ