ದಾಬಸ್‍ಪೇಟೆ: ನಮ್ಮ ಪೂರ್ವಜರು ತಮ್ಮ ಕಾಯಕದ ಸಂದರ್ಭದಲ್ಲಿ ಆಯಾಸ ಮತ್ತು ಮನರಂಜನೆಗಾಗಿ ಹುಟ್ಟು ಹಾಕಿದ ಕಲೆ ಹಾಗೂ ಸಂಸ್ಕೃತಿಯೇ ಜನಪದವಾಗಿ ಇಂದು ಉಳಿದಿದೆ ಎಂದು ತ್ಯಾಮಗೊಂಡ್ಲು ಗ್ರಾಮ ಪಂಚಾಯತಿ ಪಿಡಿಒ ರೇಖಾ.ಜಿ ಹೇಳಿದರು
ದಾಬಸ್‍ಪೇಟೆ: ನಮ್ಮ ಪೂರ್ವಜರು ತಮ್ಮ ಕಾಯಕದ ಸಂದರ್ಭದಲ್ಲಿ ಆಯಾಸ ಮತ್ತು ಮನರಂಜನೆಗಾಗಿ ಹುಟ್ಟು ಹಾಕಿದ ಕಲೆ ಹಾಗೂ ಸಂಸ್ಕೃತಿಯೇ ಜನಪದವಾಗಿ ಇಂದು ಉಳಿದಿದೆ ಎಂದು ತ್ಯಾಮಗೊಂಡ್ಲು ಗ್ರಾಮ ಪಂಚಾಯತಿ ಪಿಡಿಒ ರೇಖಾ.ಜಿ ಹೇಳಿದರು.
ತ್ಯಾಮಗೊಂಡ್ಲು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸಿಂಚನ ಕಲಾ ಕೇಂದ್ರ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಗಾನಸುಧೆ ವಸಂತ- 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನಪದ ನಮ್ಮ ಬೇರು ಇದನ್ನು ಹೊರತುಪಡಿಸಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಆಧುನಿಕತೆ ಬದುಕನ್ನು ಛಿದ್ರಗೊಳಿಸುತ್ತದೆ, ಜನಪದ ಬದಕು ಮತ್ತು ಸಂಬಂಧವನ್ನು ಗಟ್ಟಿಗೊಳಿಸುತ್ತದೆ, ಯುವಕರು ಹೆಚ್ಚು ನಮ್ಮ ಸಂಸ್ಕøತಿಯನ್ನು ಅರಿತು ಅದನ್ನು ಉಳಿಸುವ ಕಾರ್ಯವನ್ನು ಮಾಡಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದರು.
ಸಿಂಚನ ಕಲಾ ಕೇಂದ್ರ ಟ್ರಸ್ಟ್‍ನ ಗಾಯಕ ಸಿದ್ದಯ್ಯ ಮಾತನಾಡಿ, ನಮ್ಮ ಕಲಾ ತಂಡದ ವತಿಯಿಂದ ಜಿಲ್ಲೆ ಪದವಿ ಹಾಗೂ ಪಿಯುಸಿ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಯುವಕರಲ್ಲಿ ಗಾಯನ ಹಾಗೂ ಹಾಡು ಕೇಳುವ ಸಂಸ್ಕøತಿಯನ್ನು ಪರಿಚಯಿಸುತ್ತಿದ್ದೇವೆ. ಇದರ ಜೊತೆಯಲ್ಲಿ ಜನಪದ ಸಾಹಿತ್ಯದ ಮಹತ್ವ ಹಾಗೂ ಜನಪದ ಕಲೆಗಳನ್ನು ಅರ್ಥೈಸುವ ಕಾರ್ಯವನ್ನು ಮಾಡುತ್ತ ಬಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ ರಾಮಕೃಷ್ಣಯ್ಯ, ಹಸಿರುವಳ್ಳಿ ರಾಮಾಂಜಿನೇಯ, ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ತಿಮ್ಮಹನುಮಯ್ಯ, ಉಪನ್ಯಾಸಕರಾದ ರವಿಕುಮಾರ್, ರಮೇಶ್, ತಾರಾಮಣಿ, ಸಾಯಿಪ್ರಸಾದ್, ಮಂಜುನಾಥ್, ದಿವಾಕರ್, ಗ್ರಂಥಪಾಲಕಿ ನಿರ್ಮಲಾ ಸಂಗಂ, ಸಿದ್ದೇಶ್ವರಪ್ಪ, ಸಿಬ್ಬಂದಿ ನರಸಿಂಹರಾಜು, ಸಿಂಚನಾ ಕಲಾತಂಡ ಪವನ್‍ಕುಮಾರ್, ನವೀನ್ ಕುಮಾರ್, ಚೇತನ್. ಸರಸ್ವತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೋಟೋ 8 :
ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸಿಂಚನ ಕಲಾಕೇಂದ್ರ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಗಾನಸುಧೆ ವಸಂತ-2026 ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.