ಕೊಪ್ಪಳ:
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಸಣ್ಣದಲ್ಲ. ನಮ್ಮ ಇಡೀ ಬದುಕೇ ಜಾನಪದ. ಗರ್ಭದಲ್ಲಿ ಇರುವ ಮಗುವಿನ ಹಂತದಲ್ಲೇ ಕುಬುಸದ ಕಾರಣ ಹೆಸರಿನಲ್ಲೇ ಜಾನಪದ ಆರಂಭಗೊಳ್ಳುತ್ತದೆ. ಬದುಕಿನುದ್ದಕ್ಕೂ ಅದು ಜೀವಂತವಾಗಿರುತ್ತದೆ. ಬರುವ ದಿನಗಳಲ್ಲಿ ಬೆಂಗಳೂರಿನಂತೆ ಎಲ್ಲೆಡೆ ಜಾನಪದ ಬ್ರಿಗೇಡ್ ಕಟ್ಟುವ ಆಕಾಂಕ್ಷೆ ಇದೆ. ಎಲ್ಲರ ಸಹಕಾರ ಮುಖ್ಯ ಎಂದು ಅವರು ಕೋರಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಡಿ.ಎಚ್. ನಾಯ್ಕ ಮಾತನಾಡಿ, ಮೊಬೈಲ್ ಯುಗದಲ್ಲಿ ಜಾನಪದ ಹಿನ್ನಲೆಯ ಆಟೋಪಚಾರಗಳು ಕ್ಷೀಣಿಸುತ್ತಿವೆ. ಜಾನಪದ ಕಲೆ ಉಳಿಸಿ, ಬೆಳೆಸಿಕೊಂಡು ಮುನ್ನಡೆಯುವ ಹೊಣೆ ಯುವಜನತೆ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಡಾ. ಭಾಗ್ಯಜ್ಯೋತಿ, ಜಾನಪದ ಉತ್ಸವ ಕಾರ್ಯಕ್ರಮ ಆಚರಣೆಯ ಉದ್ದೇಶ, ಪ್ರಯೋಜನಗಳನ್ನು ವಿವರಿಸಿದರು.ವೇದಿಕೆಯಲ್ಲಿ ಬೋಧಕರಾದ ವೈ.ಬಿ. ಅಂಗಡಿ, ಡಾ. ಟಿ.ವಿ. ವಾರುಣಿ, ಶಿವಣ್ಣ ಎಂ. ಇದ್ದರು. ಡಾ. ಮಹಾಂತೇಶ ನೆಲಾಗಣಿ ನಿರೂಪಿಸಿದರು. ಡಾ. ತುಕಾರಾಮ ನಾಯ್ಕ ವಂದಿಸಿದರು. ಡಾ. ವೀರಣ್ಣ ಸಜ್ಜನರ್ ಜಾನಪದ ಆಟೋಟಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದಲ್ಲಿ ಡಾ. ಜಾನಪದ ಬಾಲಾಜಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಜಾನಪದ ಗೀತ ಗಾಯನ, ನೃತ್ಯ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ನಡೆದವು.ಮೊಳಗಿದ ಆರ್‌ಸಿಬಿ ಘೋಷಣೆ...
ಜಾನಪದ ಉತ್ಸವ ಕಾರ್ಯಕ್ರಮದ ನಿಮಿತ್ತ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಸಂಭ್ರಮಿಸಿದರು. ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ವೇಳೆ ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ... ಎನ್ನುವ ಘೋಷಣೆ ಮೊಳಗಿತು.