ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದ ವಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ವಿಶ್ವ ಆರ್.ಎಂ.ಎಸ್ ಮೊಬೈಲ್ ಶಾಪ್ ಸಹಯೋಗದಲ್ಲಿ ಲಿಂ. ಡಾ.ಶಿವಕುಮಾರ ಮಹಾಸ್ವಾಮಿಗಳ ಹುಟ್ಟುಹಬ್ಬ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಪೂಜೆ ಸಲ್ಲಿಸಿ ಆಚರಿಸಲಾಯಿತು. ಈ ವೇಳೆ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅನಾಥ ವೃದ್ಧರಿಗೆ, ಬುದ್ದಿಮಾಂದ್ಯರಿಗೆ ಹಣ್ಣು ವಿತರಿಸಿ, ಅನ್ನದಾಸೋಹ ಮಾಡಲಾಯಿತು. ನಂತರ ವನಸಿರಿ ಫೌಂಡೇಶನ್ನಿಂದ ಗಿಡ-ಮರಗಳಿಗೆ ಮಣ್ಣಿನ ಮಡಿಕೆಗಳನ್ನು ನೇತುಹಾಕಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮಾಡಲಾಯಿತು. ಜೀವ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ ದೇಶಪಾಂಡೆ, ಸದಸ್ಯ ಚನ್ನವೀರನಗೌಡ ವನಸಿರಿ ಫೌಂಡೇಶನ್ ಸದಸ್ಯರಾದ ಮುದುಕಪ್ಪ, ಕಾರುಣ್ಯ ಆಶ್ರಮದ ಸಿಬ್ಬಂದಿ ಸುಜಾತ ಹಿರೇಮಠ, ಶರಣಮ್ಮ, ಸಿದ್ದಯ್ಯ ಸ್ವಾಮಿ, ಮರಿಯಪ್ಪ, ಹರ್ಷವರ್ಧನ, ಸ್ವಪ್ನ ಇದ್ದರು.