ಕುಕನೂರು: ಇಂದಿನ ದಿನಮಾನಗಳಲ್ಲಿ ಅವಿಭಕ್ತ ಕುಟುಂಬದಿಂದ ದೂರವಾಗಿದ್ದು, ಕುಟುಬಂದವರು ಒಗ್ಗಟ್ಟಿನಲ್ಲಿ ಇಲ್ಲದೇ ಬೇಸರವಾಗಿದೆ. ಹೀಗಾಗಿ ಹಿರಿಯರ ಮಾತು ಕೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಗ್ರಾಪಂ ಪಿಡಿಒ ಅಕ್ಕಮಹಾದೇವಿ ರುದ್ರಸ್ವಾಮಿಮಠ ಹೇಳಿದರು.
ಮುಸಲಾಪೂರು ಗ್ರಂಥಾಲಯ ಅರಿವು ಕೇಂದ್ರದ ಮೇಲ್ವಿಚಾರಕ ಶೇಖರಗೌಡ ಪೋಲಿಸ್ ಪಾಟೀಲ್ ಮಾತನಾಡಿ, ಪೂರ್ವಜರ ಕಾಲದಿಂದ ಹಿರಿಯರನ್ನು ಗೌರವಿಸಿ ಅವರ ಮಾತಿನ ಮೂಲಕ ನಡೆಯುತ್ತಿದ್ದು, ಈಗಿನ ಕಾಲಘಟ್ಟದಲ್ಲಿ ಬದಲಾವಣೆಯಾಗಿದೆ. ಎಲ್ಲರೂ ಹಿರಿಯ ನಾಗರಿಕರನ್ನು ಗೌರವಿಸೋಣ ಎಂದು ಹೇಳಿದರು.
ಈ ವೇಳೆ ವಯೋನಿವೃತ್ತಿಗೊಂಡ ಅರಿವು ಕೇಂದ್ರದ ಮೇಲ್ವಿಚಾರಕ ಹಾಗೂ ಪಿಡಿಒ, ಯುವಕರಿಗೆ ಅವರಿಗೆ ಸನ್ಮಾನಿಸಲಾಯಿತು. ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷ್ಮೀ ಕನಕಗಿರಿ, ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕ ದೇವರಾಜ್ ಮ್ಯಾದನೇರಿ, ಕಲಿಕಾ ಟ್ರಸ್ಟ್ ಪ್ರೇರಕಿ ಅಮೃತಾ ಡಿ. ಬಾವಿಕಟ್ಟಿ, ಬಸವಂತಪ್ಪ ಕಲ್ಲಬಾವಿ, ಶಂಕ್ರಪ್ಪ ಕುರಿ, ದ್ಯಾಮಣ್ಣ ಕಲ್ಲಬಾವಿ, ಚನ್ನಪ್ಪಗೌಡ ಮಾಲಿಪಾಟೀಲ್, ಆನಂದಸ್ವಾಮಿ ಹಿರೇಮಠ, ನೀಲಮ್ಮ ಮಾಲಿಪಾಟೀಲ್, ಮಂಜುಳಾ ಬಾವಿಕಟ್ಟಿ, ಈಶಪ್ಪ ಬಾವಿಕಟ್ಟಿ, ಅಂಜಿನಪ್ಪ ಈಳಿಗೇರ್, ಯಶೋಧಾ ಚಳಗೇರಾ, ಶಿಲ್ಪಾ ಡಿ. ಮಾಲಿಪಾಟೀಲ್, ಮಲ್ಲಮ್ಮ ಮಾಲಿಪಾಟೀಲ್, ಶಿವನಮ್ಮ ಬಾವಿಕಟ್ಟಿ, ರೇಣುಕಮ್ಮ ಲಂಡೇರ್, ಶಿಲ್ಪಾ ಹನುಮನಾಳ, ಗೀತಾ ಡೊಳ್ಳಿನ್, ಬಸಮ್ಮ ಬಾವಿಕಟ್ಟಿ,ಕಾಯಕಮಿತ್ರ ಲಲಿತಮ್ಮ ಹೊಸೂರು ಹಾಗೂ ಇನ್ನಿತರರು ಇದ್ದರು.