ಕನ್ನಡಪ್ರಭ ವಾರ್ತೆ ಕಲಬುರಗಿ
ಕಸಾಪ ಕಲಬುರಗಿ ತಾಲೂಕು ಘಟಕದ ಬೆಳಕು ಸಪ್ತಾಹದ ಚಿಂತನೆಯ ಸರಣಿಯಲ್ಲಿ ವಚನ ಪಿತಾಮಹ ಹಳಕಟ್ಟಿವರ ಕುರಿತಾಗಿ ಇಲ್ಲಿನ ರಿಂಗ್ ರಸ್ತೆಯ ಜಾಗೃತಿ ಕಾಲೋನಿಯಲ್ಲಿರುವ ಚನ್ನಬಸವೇಶ್ವರ ಪ್ರೌಢಾಲೆಯಲ್ಲಿ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ತಮ್ಮ ಉಪನ್ಯಾಸದಲ್ಲಿ ಜಯಶ್ರೀಯವರು ಹಳಕಟ್ಟಿಯವರ ವಚನಗಳ ಸಂಶೋಧನೆ, ಪರಿಷ್ಕರಣೆ, ಮುದ್ರಣದ ಹಂತಗಳ ಪರಿಯನ್ನು ವಿವರಿಸುತ್ತ , ಬಡತನ, ಕಷ್ಟ ಸಂಕಷ್ಟಗಳನ್ನೆಲ್ಲ ಎದುರಿಸಿದ ಅವರ ನಿಲುವು ವಿವರಿಸುತ್ತ ಮಕ್ಕಳ ಮನ ಗೆದ್ದರು.ಹಳಕಟ್ಟಿಯವರು ವಚನಗಳ ಮುದ್ರಣಕ್ಕೆ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಶುರು ಮಾಡಿದ್ದ ಪ್ರಸಂಗ, ಹಳಕಟ್ಟಿವರ ವಿದೇಶದಲ್ಲಿದ್ದ ಪುತ್ರನ ಅಕಾಲಿಕ ನಿಧನ ವಾರ್ತೆ, ಅದರಿಂದ ನೊಂದರೂ ವಚನ ಸಂಗ್ರಹ, ಸಂಶೋಧನೆಯ ಕಾಯಕ ಬಿಡದ ಹಳಕಟ್ಟಿಯವರ ಛಲವನ್ನು ವಿವರಿಸುತ್ತ ಇಂದಿನ ಮಕ್ಕಳು ಕಾಯಕ ಜೀವನ, ಹೊಸತನ್ನು ಹುಡುಕುವ ಜಾಣತನ, ಸಮಾಜಕ್ಕೆ ಉತ್ತಮವಾದುದನ್ನು ಕೊಡುವ ತವಕಗಳನ್ನು ಹಳಕಟ್ಟಿಯವರ ಬದುಕಿನಿಂದ ಕಲಿಯಬೇಕು ಎಂದರು.
ಉತ್ತಮ ವಿಚಾರಗಳಿಗೆ ಸದಾ ಸ್ಪಂದಿಸಿ: ಅವಧಾನಿ
ಮೊಬೈಲ್‌ನಿಂದಾಗಿ ಒಳ್ಳೆಯ, ಕೆಟ್ಟ ಸಂಗತಿಗಳು ಕ್ಷಣಾರ್ಧದಲ್ಲಿ ಅಂಗೇಯಲ್ಲಿ ಸೇರುತ್ತಿವೆ.ಹೀಗಾಗಿ ಮೋಬೈಲ್‌ನ ವಿಷಯಗಳಲ್ಲಿ ಒಳ್ಳೆಯದ್ದು, ಕೆಟಟ್ಟದ್ದು ಹೆಕ್ಕಿ ತೆಗೆದು ಬದುಕು ಕಟ್ಟಿರಿ. ಪುಸ್ತಕಗಳು, ದಿನ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿರಿ. ಅದರಿಂದ ಹೊರಜಗತ್ತಿನ ಅನೇ ಬೆಳವಣಿಗೆಗಳು ನಿಖರವಾಗಿ ಅರಿಯಲು ಸಾಧ್ಯವೆಂದರು.
ಸಾಧಕರು ನಮ್ಮ ಸುತ್ತಮುತ್ತಲೇ ಇದ್ದರೂ ಅವರನ್ನು ಗುರುತಿಸೋದಿಲ್ಲ. ಅವರಿದ್ದಾಗಲೇ ಅವರ ಸದುಪಯೋಗಕ್ಕೂ ಸಮಾಜ ಮುಂದಾಗೋದಿಲ್ಲ, ಅವದು ಮರೆಯಾದ ಮೇಲೆ ಹಳಹಳಿಸುತ್ತ ಸ್ಮರಣೆ ಮಾಡಲು ಮುಂದಾದರೆ ಪ್ರಯೋಜನವಿಲ್ಲ ಎಂದ ಅವಧಾನಿ, ಹಿತ್ತಲ ಗಿಡ ಸದಾಕಾಲ ಮದ್ದಾಗಲಿ, ಸಾಧಕರು ಉಪೆಕ್ಷೆಗೊಳಪಡದೆ ಸದಾಕಾಲ ಎಲ್ಲರ ಮನ್ನಣೆಗೆ ಪಾತ್ರರಾಗಲಿ ಎಂದರು.
ಬೆಳಕು ಸರಣಿಯ ಹಿಂದೆ ಸಾಧಕರ ಪರಿಚಯದ ಉದ್ದೇಶ: ಸಜ್ಜನಶೆಟ್ಟಿ
ಕಸಾಪ ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮೂಲಗೆ ಮಾತನಾಡುತ್ತ ಮಕ್ಕಳಿಗೆ ಬದುಕಲ್ಲಿ ಉತ್ತಮವಾದುದ್ದನ್ನು ಕಲಿತು ಚೆಂದದ ಬದುಕು ಕಟ್ಟುವಂತೆ ಸಲಹೆ ನೀಡಿದರೆ, ಶಾಲೆಯ ಮುಖ್ಯಗುರು ಮಾತಾಜಿ ನಾಗೂರ ಮಾತನಾಡುತ್ತ ಕಸಾಪ ಸಮಾರಂಭವನ್ನು ಮೆಚ್ಚಿಕೊಂಡರಲ್ಲದೆ ತಮ್ಮ ಶಾಲೆಯಲ್ಲಿ ಕನ್ನಡ, ವಿಜ್ಞಾನದ ಚಿಂತನೆಯ ಸಮಾರಂಭಗಳಿಗೆ ಮುಕ್ತ ಸ್ವಾಗತವಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ವಿಶಾಲಾಕ್ಷೀ ಮಾಯಣ್ಣವರ, ವಿಶ್ವನಾಥ ಯನಗುಂಟಿ, ಕುಪೇಂದ್ರ ಬರಗಾಲಿ, ಸಹ ಕಾರ್ಯದರ್ಶಿ ಪ್ರಭವ ಪಟ್ಟಣಕರ, ಮಹಿಳಾ ಪ್ರತಿನಿಧಿ ಭಾಗ್ಯಶ್ರೀ ಮರಗೋಳ. ಸಾಹಿತ್ಯ ಪ್ರೇಮಿ ಶಿವಾನಂದ್ ಮಠಪತಿ ಇದ್ದರು. ಶಿಕ್ಷಕಿ ಕವಿತಾ ಪಾಟೀಲ ನಿರೂಪಿಸಿದರು. ನಾಗರತ್ನ ಪಾಟೀಲ ಸ್ವಾಗತಿಸಿದರು. ಸೂರ್ಯಕಾಂತ ಗಾರಂಪಳ್ಳಿ ವಂದಿಸಿದರು.