ಸರಳ ಜೀವನಶೈಲಿಗೆ ಆಹಾರದ ಅರಿವು ಅಗತ್ಯ: ಡಾ. ಧನೋಜಿ

KannadaprabhaNewsNetwork |  
Published : Oct 26, 2024, 12:53 AM IST
ಚಿತ್ರ ಶೀರ್ಷಿಕೆ - ಸಿಯುಕೆ ಆಳಂದ: ಸಿಯುಕೆಯಲ್ಲಿ ಸಮಾಜ ಕಾರ್ಯ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡೀನ್ ಡಾ. ಎಂ.ಎಂ. ಧನೋಜಿ ಮಾತನಾಡಿದರು.  | Kannada Prabha

ಸಾರಾಂಶ

ಹಿಂದಿನಂತೆ ಸಹಜ ಮತ್ತು ಸರಳ ಜೀವನಶೈಲಿಗೆ ಮರಳುವ ಸಮಯ ಮರುಕಳಿಸುತ್ತಿದೆ ಎಂದು ಕಲಬುರಗಿಯ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ. ಎಂ.ಎಂ.ಧನೋಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಹಿಂದಿನಂತೆ ಸಹಜ ಮತ್ತು ಸರಳ ಜೀವನಶೈಲಿಗೆ ಮರಳುವ ಸಮಯ ಮರುಕಳಿಸುತ್ತಿದೆ ಎಂದು ಕಲಬುರಗಿಯ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ. ಎಂ.ಎಂ.ಧನೋಜಿ ಹೇಳಿದರು.

ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಸಮಾಜ ಕಾರ್ಯ ವಿಭಾಗ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್, ಹೈದರಾಬಾದ್ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಇವರು ಜಂಟಿಯಾಗಿ ಆಯೋಜಿಸಿದ ಎರಡು ದಿನಗಳ ಕರ್ನಾಟಕ ರಾಜ್ಯಮಟ್ಟದ ರೈತರ ಉತ್ಪಾದಕ ಸಂಸ್ಥೆಗಳ ಕಾರ್ಯಕ್ಷಮತೆ ಹೆಚ್ಚಿಸುವ ಮತ್ತು ಸುಸ್ಥಿರತೆಯನ್ನು ಸಾಧಿಸುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗೆಳ್ಳಿ, ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳಿಗೆ ಉತ್ತೇಜನ ನೀಡುವ ಕುರಿತು ಮಹತ್ವದ ಮಾರುಕಟ್ಟೆ ಸಲಹೆಗಳನ್ನು ನೀಡಿ ‘ಒಂದೇ ಉತ್ಪನ್ನವನ್ನು ವಿವಿಧ ಬೆಲೆಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಖರೀದಿಸುವ ಗ್ರಾಹಕರಿದ್ದಾರೆ. ರೈತರು ವೃತ್ತಿಪರರಾಗಬೇಕು ಮತ್ತು ರು.200 ಉತ್ಪನ್ನಕ್ಕೆ ರು. 250, ರು.300 ಮತ್ತು ರು.400 ಮೌಲ್ಯ ಬರುವಂತೆ ಮಾಡಬೇಕು. ಇದರಿಂದ ಗ್ರಾಹಕರ ತೃಪ್ತಿ ಮತ್ತು ಲಾಭ ಎರಡನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸಿಯುಕೆಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಪವಿತ್ರಾ ಆಲೂರ್, ಎಫ್‍ಪಿಒಗಳೊಂದಿಗೆ ಸಮಾಜ ಸೇವಕರು ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಹೈದರಾಬಾದ್‍ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್‍ನ ವಿಜ್ಞಾನಿ ಡಾ. ಸಂಗಪ್ಪ, ರಾಗಿ ಲಡ್ಡುಗಳನ್ನು ಉತ್ಪಾದಿಸುವ ಮತ್ತು ಉತ್ತೇಜಿಸುವ ಮತ್ತು ಎಫ್‍ಪಿಒಗಳ ಸುಸ್ಥಿರತೆಯನ್ನು ಸಾಧಿಸಲು ಉತ್ಪನ್ನಕ್ಕೆ ಮಾರುಕಟ್ಟೆಯನ್ನು ಸೃಷ್ಟಿಸುವ ಕುರಿತು ವಿವರಿಸಿದರು.

ಚನ್ನವೀರ್ ಆರ್‌.ಎಂ ಅವರು ಸಿಯುಕೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ನಡುವಿನ ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದರು. ಸುಸ್ಥಿರತೆಯನ್ನು ಸಾಧಿಸಲು ರೈತ ಉತ್ಪಾದಕ ಸಂಸ್ಥೆಗಳನ್ನು ಸಶಕ್ತಗೊಳಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.ಕಾರ್ಯಾಗಾರದ ಸಹ ಸಂಚಾಲಕ ಡಾ.ಲಕ್ಷ್ಮಣ ಜಿ ಉಪಸ್ಥಿತರಿದ್ದರು. ಈPಔ** ಸಂಯೋಜಕರಾದ ಶ್ರೀ ಅನಿಲ್ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕದ ವಿವಿಧ ಭಾಗಗಳಿಂದ 17 ಎಫ್‍ಪಿಒಗಳ ಸುಮಾರು 33 ರೈತ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ