ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಸಭೆಯಲ್ಲಿ ಕೆ. ಎಡತೊರೆ ಶಾಲೆಯ ವಿದ್ಯಾರ್ಥಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ನಮ್ಮ ಊರಿನ ವಾಟರ್ ಟ್ಯಾಂಕ್ ಸ್ವಚ್ಛಗೊಳಿಸಿ ಎಂದು ಕೇಳಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಮಹೇಶ್ ಎಡತೊರೆ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್ ಸ್ಥಳದಲ್ಲಿಯೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮದ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಆದೇಶಿಸಿದರು.ಮತ್ತೆ ಉಳಿದ ಕಾಂಪೌಂಡ್, ಮೈದಾನ, ಸ್ಮಾರ್ಟ್ ಕ್ಲಾಸ್, ಲೈಬ್ರರಿ ವಿಷಯಗಳ ಬಗ್ಗೆ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್, ಪೀಪಲ್ ಟ್ರೀ ರುದ್ರಪ್ಪ, ಡ್ರೀಮ್ ಇಂಡಿಯಾ ಸಚ್ಚಿನ್ ಅವರು ಮಕ್ಕಳ ಹಕ್ಕು ಶಿಕ್ಷಣ ಮತ್ತು ಮೂಲಭೂತ ಸಮಸ್ಯೆಗಳ ಪರಿಹಾರವಾಗಿ ಮಾತಾನಾಡಿದರು.
ಗ್ರಾಪಂ ಅಧ್ಯಕ್ಷೆ ಜಯಮ್ಮ, ಎಸ್.ವಿ.ಎಂ. ಶಿವಲಿಂಗು, ಕಾರ್ಯದರ್ಶಿ ಮೋಹನ್, ಸದಸ್ಯರಾದ ಶಶಿಕುಮಾರ್, ಚಿಕ್ಕಮ್ಮ, ಜಯಲಕ್ಷ್ಮಿ, ಮುಖ್ಯ ಶಿಕ್ಷಕರಾದ ಸುಮ, ಮಂಗಳ, ಸೌಮ್ಯಶ್ರೀ, ಪೂರ್ಣಿಮಾ, ರವಿಕುಮಾರ್, ಕುಳ್ಳಯ್ಯ, ಕಾವ್ಯ, ಮಮತ, ಚೆನ್ನಬಸಪ್ಪ, ಜವರೇಗೌಡ ಮತ್ತು ಶಾಲಾ ಮಂತ್ರಿಮಂಡಲದ ಮಕ್ಕಳು ಭಾಗವಹಿಸಿದ್ದರು.