ರಾಮನಗರ: ರೇಷ್ಮೆ ಬೆಳೆಗಾರರು ಹಾಗೂ ರೀಲರ್ಸ್ ಗಳ ಹಿತ ಕಾಪಾಡುವ ಉದ್ದೇಶದಿಂದ ಯೂತ್ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ರಚನೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸೈಯದ್ ಅಕ್ಲಿಂ ಅಬ್ರಾರ್ ಮತ್ತು ಉಪಾಧ್ಯಕ್ಷರಾಗಿ ಪ್ಯಾರಿ ಫಯಾಜ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ಯಾರಿ ಫಯಾಜ್, ಕಾರ್ಯದರ್ಶಿಯಾಗಿ ಮುಸೇಬ್ , ಜಂಟಿ ಕಾರ್ಯದರ್ಶಿಯಾಗಿ ಮಹಮ್ಮದ್ ಟೀಪು, ಖಜಾಂಚಿಯಾಗಿ ಶೇಕ್ ನಾಸೀರುದ್ದೀನ್ ಅವರನ್ನು ನೇಮಿಸಿ ರೀಲರ್ಸ್ ಸರ್ವಾನುತದಿಂದ ಒಪ್ಪಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಅಕ್ಲಿಂ, ಈಗಿರುವ ರೀಲರ್ಸ್ ಅಸೋಸಿಯೇಷನ್ ಯಾವ ರೀಲರ್ಸ್‌ಗೂ ಅನುಕೂಲ ಮಾಡಿಕೊಟ್ಟಿಲ್ಲ. ಮೂರ್ನಾಲ್ಕು ಮಂದಿ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಅಸೋಸಿಯೇಷನ್ ಮುಖ್ಯಸ್ಥರ ನೇಮಕದಲ್ಲಿ ರೀಲರ್ಸ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.ಅಸೋಸಿಯೇಷನ್ ಅಧ್ಯಕ್ಷರು ಸೇರಿ ಇತರೆ ಪದಾಧಿಕಾರಿಗಳ ಸ್ಥಾನಗಳನ್ನು ಮೂರು ನಾಲ್ಕು ಮಂದಿಯೇ ನಿರ್ಧರಿಸಿ ಆಯ್ಕೆ ಮಾಡಿಕೊಂಡಿದ್ದಾರೆ. ಅಸೋಸಿಯೇಷನ್ ಸಂಪೂರ್ಣ ನಿಷ್ಕ್ರಿಯವಾಗಿದ್ದು, ನೋಂದಾಯಿತ 1250 ರೀಲರ್ಸ್ ಗಳ ಪೈಕಿ 750 ರೀಲರ್ಸ್ ಗಳು ಯೂತ್ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
ನೂತನ ಉಪಾಧ್ಯಕ್ಷ ಪ್ಯಾರಿ ಫಯಾಜ್ ಮಾತನಾಡಿ, ಐದಾರು ಮಂದಿ ಸೇರಿದರೆ ಅದು ಸಂಘ ಆಗುವುದಿಲ್ಲ. ಮುಹಿಬ್ ಪಾಷಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೀಲರ್ಸ್‌ಗಳಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಈಗ ರೀಲರ್ಸ್ ಗಳು ಸಂಕಷ್ಟದಲ್ಲಿ ಸಿಲುಕಿದ್ದು, ಅಸೋಸಿಯೇಷನ್ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ.ಮುಹಿಬ್ ಪಾಷಾ ರೀಲರ್ಸ್ ಗಳ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಿದವರು. ರೀಲರ್ಸ್ ಗಳಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಮುಹಿಬ್ ಅಕಾಲಿಕ ನಿಧನ ಹೊಂದಿದ ನಂತರ ಅವರ ಪುತ್ರನನ್ನು ಅಸೋಸಿಯೇಷನ್ ನಲ್ಲಿ ನಿರ್ದೇಶಕರನ್ನಾಗಿ ಮಾಡಿಕೊಳ್ಳದೆ ಕಡೆಗಣಿಸಿದರು. ಈಗ ಅವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದರು.
ಸಭೆಯಲ್ಲಿ ಮುಖಂಡರಾದ ಮೋಸಿನ್ ಅಲಿ, ಸೈಯದ್ ನದೀಂ, ಎಕ್ಬಾಲ್, ಇಲಿಯಾಜ್, ಜವಾದ್ ಉಪಸ್ಥಿತರಿದ್ದರು.ಕೋಟ್..............
-ಅಮ್ಜದ್ ಸಾಹುಕಾರ್, ಮುಖಂಡ1ಕೆಆರ್ ಎಂಎನ್ 2.ಜೆಪಿಜಿ