ಡಿಸಿಸಿ ಬ್ಯಾಂಕ್‌ ಚುನಾವಣೆ ನಡೆಸಲು ಒತ್ತಾಯ

KannadaprabhaNewsNetwork |  
Published : Sep 21, 2024, 01:49 AM IST
೨೦ಕೆಎಲ್‌ಆರ್-೧೧ಕೋಲಾರದ ಹಾಲಿಸ್ಟಾರ್ ಭವನದಲ್ಲಿ ಡಿಸಿಸಿ ಬ್ಯಾಂಕಿನ ಸರ್ವಸದಸ್ಯರ ಸಭೆಯಲ್ಲಿ ಡಿಸಿಸಿ ಬ್ಯಾಂಕಿನಲ್ಲಿ ಭ್ರಷ್ಟಚಾರದ ತನಿಖೆ ಮುಗಿಯುವ ತನಿಖೆ ಒತ್ತಾಯಿಸಿದ ಸಂದರ್ಭದಲ್ಲಿ ಗದ್ದಲವಾದಾಗ ಸದಸ್ಯರನ್ನು ಸಮಾಧಾನಪಡಿಸುತ್ತಿರುವ ಪೊಲೀಸರು. | Kannada Prabha

ಸಾರಾಂಶ

ಬ್ಯಾಂಕಿಗೆ ಕೇಂದ್ರ-ರಾಜ್ಯ ಸರ್ಕಾರದಿಂದ ಬಡ್ಡಿ ಹಣ ಬರಬೇಕಾಗಿದೆ, ಇದರಿಂದಾಗಿ ಬ್ಯಾಂಕ್ ೯.೮೮ ಕೋಟಿ ರೂ. ನಷ್ಟದಲ್ಲಿದೆ, ಸಾಲ ವಿತರಣೆ ಕಡಿಮೆಯಾಗಿದ್ದು, ಬಾಕಿ ಇರುವ ಸಾಲ ವಸೂಲಿ ಮಾಡಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಎರಡೂ ಜಿಲ್ಲೆಗಳ ರೈತರ ಮತ್ತು ಮಹಿಳೆಯರ ಜೀವನಾಡಿಯಾಗಿದೆ, ಆದರೆ ಕೆಲ ರಾಜಕೀಯ ಪಟ್ಟಭದ್ರ ಹಿತಾಸಕ್ತರು ತಮ್ಮ ಸ್ವಾರ್ಥಕ್ಕಾಗಿ ಬಡವರ ಜೀವನದ ಜತೆ ಚೆಲ್ಲಾಟ ವಾಡುತ್ತಿದ್ದಾರೆ, ಅಧಿಕಾರಿಗಳು ಚುನಾವಣೆ ನಡೆಸಿ, ಆಡಳಿತ ಮಂಡಳಿ ರಚನೆ ಮಾಡಬೇಕು ಎಂದು ಶೇಷಾಪುರ ಗೋಪಾಲ್ ಒತ್ತಾಯಿಸಿದರು.ನಗರದ ಹಾಲಿಸ್ಟರ್ ಭವನದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ೬೨ನೇ ಮಹಾ ಸಭೆಯಲ್ಲಿ ಮಾತನಾಡಿದರು.ಸಂಘಗಳಿಗೆ ಸಾಲ ನೀಡುತ್ತಿಲ್ಲ ಏಕೆ?

ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದ ನಂತರ ಮಹಿಳೆಯರಿಗೆ, ರೈತರಿಗೆ ಎಷ್ಟು ಸಾಲ ನೀಡಲಾಗಿದೆ, ಮರು ಪಾವತಿ ಎಷ್ಟಾಗಿದೆ, ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿರುವ ಮಹಿಳಾ ಸಂಘಗಳಿಗೆ ಸಾಲ ಯಾಕೆ ವಿತರಿಸುತ್ತಿಲ್ಲವೆಂದು ಪ್ರಶ್ನಿಸಿದರು.ಬ್ಯಾಂಕಿನ ಆಡಳಿತಾಧಿಕಾರಿ ಬಿ.ಕೆ.ಸಲೀಂ ಪ್ರತಿಕ್ರಿಯಿಸಿ, ಬ್ಯಾಂಕಿಗೆ ಕೇಂದ್ರ-ರಾಜ್ಯ ಸರ್ಕಾರದಿಂದ ಬಡ್ಡಿ ಹಣ ಬರಬೇಕಾಗಿದೆ, ಇದರಿಂದಾಗಿ ಬ್ಯಾಂಕ್ ೯.೮೮ ಕೋಟಿ ರೂ. ನಷ್ಟದಲ್ಲಿದೆ, ಸಾಲ ವಿತರಣೆ ಕಡಿಮೆಯಾಗಿದ್ದು, ಬಾಕಿ ಇರುವ ಸಾಲ ವಸೂಲಿ ಮಾಡಲು ಅಧಿಕಾರಿಗಳ ತಂಡ ರಚನೆ ಮಾಡಿದೆ ಎಂದು ತಿಳಿಸಿದರು. ಸಾಲ ವಿತರಿಸಲು ಒತ್ತಾಯ

ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಅಧಿಕಾರದ ಅವಧಿ ಮುಗಿದ ನಂತರ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ, ಆದರೆ ರೈತರಿಗೆ, ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸಾಲ ವಿತರಣೆ ಮಾಡಬೇಕು ಎಂದು ಸಭೆ ಒತ್ತಾಯಿಸಿತು.

ಸಭೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಶೀಲಾ, ಎಜಿಎಂಗಳಾದ ಶಿವಕುಮಾರ್, ನಾಗೇಶ್, ದೊಡ್ಡಮುನಿ ಹುಸೇನ್‌ಸಾಬ್, ಪದ್ಮಮ್ಮ, ನಾಗೇಶ್, ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು