ಕೆಂಭಾವಿಗೆ ಹೆಚ್ಚುವರಿ ಬಸ್ ಓಡಿಸುವಂತೆ ಒತ್ತಾಯ

KannadaprabhaNewsNetwork |  
Published : Jul 10, 2024, 12:38 AM IST
ಕೆಂಭಾವಿ ಪಟ್ಟಣಕ್ಕೆ ಸರಿಯಾದ ರೀತಿಯಲ್ಲಿ ಬಸ್‌ಗಳನ್ನು ಓಡಿಸುವಂತೆ ಒತ್ತಾಯಿಸಿ ಬಸ್ ನಿಲ್ದಾಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಕೆಂಭಾವಿ ಪಟ್ಟಣಕ್ಕೆ ಸರಿಯಾದ ರೀತಿ ಬಸ್‌ ಓಡಿಸುವಂತೆ ಒತ್ತಾಯಿಸಿ ಬಸ್ ನಿಲ್ದಾಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಕೆಂಭಾವಿ ಪಟ್ಟಣಕ್ಕೆ ಸರಿಯಾದ ರೀತಿ ಬಸ್‌ ಓಡಿಸುವಂತೆ ಒತ್ತಾಯಿಸಿ ಬಸ್ ನಿಲ್ದಾಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ನೂರುಲ್ಲಾಖಾನ ಬಾಬಾ, ಪುರಸಭೆ ಕೇಂದ್ರಸ್ಥಾನವಾದ ಕೆಂಭಾವಿ ಪಟ್ಟಣಕ್ಕೆ ಶಹಾಪುರ ಮತ್ತು ಸುರಪುರ ಘಟಕದಿಂದ ಬಸ್‌ಗಳ ಓಡಾಟ ಅತೀ ಕಮ್ಮಿಯಾಗಿದೆ. ಇಲ್ಲಿಂದ ದೂರದ ಪಟ್ಟಣಕ್ಕೆ ತೆರಳುವ ಪ್ರಯಾಣಿಕರಿಗೆ ಬಸ್ ಸಿಗದೆ ಅನಿವಾರ್ಯವಾಗಿ ಬೇರೆ ನಗರಕ್ಕೆ ತೆರಳಿ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೆ ಇಲ್ಲಿಂದ ಹೆಚ್ಚಿನ ಬಸ್‌ಗಳನ್ನು ಓಡಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಇನ್ನೋರ್ವ ಸಂಚಾಲಕ ಎಚ್.ಆರ್. ಬಡಿಗೇರ ಮಾತನಾಡಿ, ತಾಳಿಕೋಟಿ, ಶಹಾಪುರ, ಸುರಪುರ ಪಟ್ಟಣಗಳಿಂದ ಬರುವ ಬಸ್‌ಗಳನ್ನು ಸಂಜೀವನಗರ, ಅಂಬಿಗರ ಚೌಡಯ್ಯ ವೃತ್ತ, ಸಮುದಾಯ ಆರೋಗ್ಯ ಕೇಂದ್ರ, ಡಾ. ಬಿ. ಆರ್. ಅಂಬೇಡ್ಕರ್ ಚೌಕ್ ಮಾರ್ಗವಾಗಿ ಬರಬೇಕು ಎಂಬ ಇಲಾಖೆಯ ನಿಯಮವಿದ್ದರೂ, ಚಾಲಕ- ನಿರ್ವಾಹಕರು ಇದನ್ನು ಗಾಳಿಗೆ ತೂರಿ ಪ್ರಯಾಣಿಕರಿಗೆ ಹೆದರಿಸಿ ನೇರವಾಗಿ ಬಸ್ ನಿಲ್ದಾಣಕ್ಕೆ ಬಸ್‌ ಓಡಿಸುತ್ತಿದ್ದು, ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ತೀವ್ರತೊಂದರೆಯಾಗಿದೆ ಎಂದರು.

ಕೂಡಲೆ ಈ ಎಲ್ಲ ಸಮಸ್ಯೆ ಬಗೆಹರಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿ ಮಾತನಾಡಿದ ಅಧಿಕಾರಿ ಮಲ್ಲಯ್ಯ, ಎಲ್ಲ ಬಸ್ ಗಳನ್ನು ಪಟ್ಟಣದ ಒಳಮಾರ್ಗದಲ್ಲಿ ಓಡಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗುವುದು. ಈ ನಿಯಮ ಉಲ್ಲಂಘಿಸಿದರೆ ಸ್ಥಳೀಯ ನಿಯಂತ್ರಕರನ್ನೆ ಹೊಣೆಗಾರರನ್ನಾಗಿ ಮಾಡಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.

ನಿಯಂತ್ರಣಾಧಿಕಾರಿ ಸಿದ್ಧನಗೌಡ, ತನಿಖಾಧಿಕಾರಿ, ಬಸನಗೌಡ ಪಾಟೀಲ, ಶಿವಶಂಕರ ಪಾಟೀಲ್ ಜಹಾಂಗೀರ ಅಲಿ, ಯುನೂಸ್ ಹೊಸಮನಿ, ಸಿದ್ದು ಮಾಳಳ್ಳಿ, ರಹೆಮಾನ ವಡಕೇರಿ, ಭಾಗಪ್ಪ ಮಸರಕಲ್, ರಜಾಕ ಸಾಸನೂರ, ಬಂದೇನವಾಜ ನಾಲತವಾಡ, ಉದಯಕುಮಾರ ಕುಲಕರ್ಣಿ ಇದ್ದರು.

PREV

Recommended Stories

ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು
ರೈಲಲ್ಲಿ ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ