ದಸರಾ- ಐದಾನೆಗಳು ಅರಮನೆಗೆ ಪ್ರವೇಶ

KannadaprabhaNewsNetwork |  
Published : Aug 26, 2025, 01:02 AM IST
5 | Kannada Prabha

ಸಾರಾಂಶ

ದುಬಾರೆ ಆನೆ ಶಿಬಿರದಿಂದ 42 ವರ್ಷದ ಗೋಪಿ, 43 ವರ್ಷದ ಸುಗ್ರೀವ, 11 ವರ್ಷದ ಹೇಮಾವತಿ, ಮತ್ತಿಗೋಡು ಆನೆ ಶಿಬಿರದಿಂದ 56 ವರ್ಷದ ಶ್ರೀಕಂಠ ಮತ್ತು ಭೀಮನಕಟ್ಟೆ ಆನೆ ಶಿಬಿರದಿಂದ 44 ವರ್ಷದ ರೂಪಾ ಆನೆ ಎರಡನೇ ತಂಡದಲ್ಲಿ ಆಗಮಿಸಿವೆ

ಬಿ. ಶೇಖರ್‌ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುಗೌರಿ- ಗಣೇಶ ಹಬ್ಬದ ಶುಭ ಸಂದರ್ಭದಲ್ಲೇ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು 5 ಆನೆಗಳು ಮೈಸೂರಿಗೆ ಆಗಮಿಸಿವೆ.ಎರಡನೇ ತಂಡದಲ್ಲಿ ಸೋಮವಾರ ಸಂಜೆ ಕಾಡಿನಿಂದ ಲಾರಿಗಳಲ್ಲಿ ಆಗಮಿಸಿದ 5 ಆನೆಗಳಿಗೆ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬರ ಮಾಡಿಕೊಳ್ಳಲಾಯಿತು.ದುಬಾರೆ ಆನೆ ಶಿಬಿರದಿಂದ 42 ವರ್ಷದ ಗೋಪಿ, 43 ವರ್ಷದ ಸುಗ್ರೀವ, 11 ವರ್ಷದ ಹೇಮಾವತಿ, ಮತ್ತಿಗೋಡು ಆನೆ ಶಿಬಿರದಿಂದ 56 ವರ್ಷದ ಶ್ರೀಕಂಠ ಮತ್ತು ಭೀಮನಕಟ್ಟೆ ಆನೆ ಶಿಬಿರದಿಂದ 44 ವರ್ಷದ ರೂಪಾ ಆನೆ ಎರಡನೇ ತಂಡದಲ್ಲಿ ಆಗಮಿಸಿವೆ.ಈ 5 ಆನೆಗಳಲ್ಲಿ ಗೋಪಿ ಮತ್ತು ಸುಗ್ರೀವ ಆನೆಗಳು ಈಗಾಗಲೇ ದಸರೆಯಲ್ಲಿ ಪಾಲ್ಗೊಂಡಿರುವ ಅನುಭವ ಹೊಂದಿವೆ. ಇನ್ನೂ ಶ್ರೀಕಂಠ, ರೂಪಾ ಮತ್ತು ಹೇಮಾವತಿ ಆನೆಗಳು ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿವೆ. ಪೂಜೆ ಪುಷ್ಪಾರ್ಚನೆಯೊಂದಿಗೆ ಸ್ವಾಗತಅರಮನೆ ಜಯಮಾರ್ತಾಂಡ ದ್ವಾರದ ಬಳಿ 5 ಆನೆಗಳನ್ನು ಸಾಲಾಗಿ ನಿಲ್ಲಿಸಿ ಅರ್ಚಕ ಪ್ರಹ್ಲಾದ್‌ ರಾವ್ ಆನೆಗಳ ಪಾದ ತೊಳೆದು, ಅರಿಶಿನ- ಕುಂಕುಮ ಹಚ್ಚಿ ಸೇವಂತಿಗೆ ಹೂ ಮುಡಿಸಿ ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ನಂತರ ಎಲ್ಲಾ ಆನೆಗಳಿಗೂ ಕಬ್ಬು- ಬೆಲ್ಲ, ಗರಿಕೆ, ಮೋದಕ, ಕಡುಬು, ಪಂಚ ಕಜ್ಜಾಯ ನೀಡಲಾಯಿತು.ಬಳಿಕ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಅವರು ಪುಷ್ಪಾರ್ಚನೆ ಮೂಲಕ ಆನೆಗಳನ್ನು ಅರಮನೆಗೆ ಸ್ವಾಗತಿಸಿದರು.----ಬಾಕ್ಸ್... ಗಜಪಡೆಯ ಬಲ 14ಕ್ಕೆ ಏರಿಕೆ2025ನೇ ಸಾಲಿನ ದಸರಾ ಮಹೋತ್ಸವಕ್ಕೆ 10 ಗಂಡು, 4 ಹೆಣ್ಣು ಸೇರಿದಂತೆ ಒಟ್ಟು 14 ಆನೆಗಳು ಎರಡು ತಂಡಗಳಲ್ಲಿ ಕಾಡಿನಿಂದ ನಾಡಿಗೆ ಬಂದು ಸೇರಿವೆ.ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳು ಮೊದಲ ತಂಡದಲ್ಲಿ ಬಂದು ಈಗಾಗಲೇ ತಾಲೀಮು ಆರಂಭಿಸಿವೆ. ಇನ್ನೂ ಎರಡನೇ ತಂಡದಲ್ಲಿ ಗೋಪಿ, ಸುಗ್ರೀವ, ಹೊಸ ಆನೆಗಳಾದ ಶ್ರೀಕಂಠ, ರೂಪಾ ಮತ್ತು ಹೇಮಾವತಿ ಆನೆಗಳು ಆಗಮಿಸಿವೆ. ಈ ಎಲ್ಲಾ ಆನೆಗಳು ಮಂಗಳವಾರದಿಂದ ಒಟ್ಟಿಗೆ ತಾಲೀಮಿನಲ್ಲಿ ಪಾಲ್ಗೊಳ್ಳಲಿವೆ.----ಕೋಟ್....ದಸರಾ ಮಹೋತ್ಸವದಲ್ಲಿ ಭಾಗವಹಿಸಲು 2ನೇ ತಂಡದಲ್ಲಿ ಆಗಮಿಸಿರುವ 5 ಆನೆಗಳನ್ನು ಅರಮನೆಗೆ ಬರ ಮಾಡಿಕೊಳ್ಳಲಾಗಿದೆ. ಮಂಗಳವಾರ 2ನೇ ತಂಡದ 5 ಆನೆಗಳ ತೂಕ ಪರೀಕ್ಷೆ ಮಾಡಲಾಗುವುದು. ಹಾಗೆಯೇ, ಮಂಗಳವಾರದಿಂದಲೇ 2ನೇ ತಂಡದ ಆನೆಗಳು ನಡಿಗೆ ತಾಲೀಮಿನಲ್ಲಿ ಭಾಗವಹಿಸಲಿವೆ. ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಮುಂದಿನ ವಾರದಿಂದ ಮರಳು ಭಾರ ಹೊರಿಸುವ ತಾಲೀಮು ನಡೆಸಲಾಗುವುದು.- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ