ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನು ಒಕ್ಕಲೆಬಿಸುವುದಿಲ್ಲ

KannadaprabhaNewsNetwork |  
Published : Nov 06, 2026, 02:45 AM IST
ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಎದುರು ಅರಣ್ಯವಾಸಿಗಳ ಸಮಸ್ಯೆ ಸ್ಪಂದಿಸಲು ಆಗ್ರಹಿಸಿ ಅಹೋರಾತ್ರಿ ನಡೆದ ಧರಣಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್  ಮಾತನಾಡಿದರು. | Kannada Prabha

ಸಾರಾಂಶ

ನಿರಂತರ ಅರಣ್ಯವಾಸಿಗಳ ಸಾಗುವಳಿಗೆ ಅರಣ್ಯ ಸಿಬ್ಬಂದಿಗಳಿಂದ ಜರುಗುತ್ತಿರುವ ದೌರ್ಜನ್ಯ , ಕಿರುಕುಳ ವಿರುದ್ಧ ಅರಣ್ಯವಾಸಿಗಳಿಂದ ಅರಣ್ಯ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ

ಹೊನ್ನಾವರ: ತಾಲೂಕು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಗುರುವಾರ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಎದುರು ಅರಣ್ಯವಾಸಿಗಳ ಸಮಸ್ಯೆ ಸ್ಪಂದಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಯಿತು.

ಈ ಸಂದರ್ಭದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಸಾಗುವಳಿ ಕ್ಷೇತ್ರಕ್ಕೆ ಜನತೆ ಆತಂಕಗೊಳಿಸದಂತೆ ಅರಣ್ಯ ಸಿಬ್ಬಂದಿಗಳು ಬದ್ದರಾಗಿರುವುದಾಗಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಆಶ್ವಾಸನೆ ನೀಡಿದರು.

ಈ ವೇಳೆ ನಿರಂತರ ಅರಣ್ಯವಾಸಿಗಳ ಸಾಗುವಳಿಗೆ ಅರಣ್ಯ ಸಿಬ್ಬಂದಿಗಳಿಂದ ಜರುಗುತ್ತಿರುವ ದೌರ್ಜನ್ಯ , ಕಿರುಕುಳ

ವಿರುದ್ಧ ಅರಣ್ಯವಾಸಿಗಳಿಂದ ಅರಣ್ಯ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಯ್ತು. ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ ಜರುಗಿದ್ದಲ್ಲದೇ,ಆಕ್ರೋಶಕ್ಕೆ ಮಣಿದ ಹಿರಿಯ ಅರಣ್ಯ ಅಧಿಕಾರಿ ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸುವ ಸಾಗುವಳಿ ಕ್ಷೇತ್ರಕ್ಕೆ ಆತಂಕ ಪಡಿಸುವುದಿಲ್ಲವೆಂಬ ಆಶ್ವಾಸನೆ ಯನ್ನು ನೀಡಿದರು.

ಕಾನೂನುಬಾಹಿರವಾಗಿ ಕಾನೂನು ವಿಧಿ ವಿಧಾನ ಅನುಸರಿಸದೇ, ಅರಣ್ಯ ಹಕ್ಕು ಕಾಯಿದೆ ಉಲ್ಲಂಘಿಸಿ, ರಾಜ್ಯ ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ವ್ಯಾಪ್ತಿಯ ಅರಣ್ಯ ಸಿಬ್ಬಂಧಿಗಳು ಅರಣ್ಯವಾಸಿಗಳಿಗೆ ನೀಡಿರುವ ಕಿರುಕುಳ ಮತ್ತು ದೌಜನ್ಯದ ವಿರುದ್ದ ಏರಿದ ಧ್ವನಿಯಲ್ಲಿ ನೊಂದ ಅರಣ್ಯವಾಸಿಗಳು ಅರಣ್ಯ ಅಧಿಕಾರಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದರು. ನೊಂದ ಅರಣ್ಯವಾಸಿಗಳು ದಾಖಲೆ, ಪೋಟೋ ಮತ್ತು ವಿಡಿಯೋಗಳ ಮೂಲಕ ಎಸಿ ಅವರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಉಪ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಹಾಗೂ ಭಟ್ಕಳ ವಿಭಾಗದ ಉಪ ವಿಭಾಗ ಅಧಿಕಾರಿ ಜೆ, ಮಹೇಶ್‌, ಹೊನ್ನಾವರ ತಹಶೀಲ್ದಾರ ಪ್ರವೀಣ ಕರಾಂಡೆ, ಪೋಲಿಸ್ ಇನ್ಸೆಪೇಕ್ಟರ್ ಸಿದ್ದರಾಮೇಶ್ವರ ಇವರ ನೇತೃತ್ವದಲ್ಲಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ಸಹಸ್ರಾರು ಅರಣ್ಯವಾಸಿಗಳು ಉಪಸ್ಥಿತರಿದ್ದರು.

ಲಿಖಿತ ದೂರು ನೀಡಿ: ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಆತಂಕ ಉಂಟಾದಲ್ಲಿ ಸಾಗುವಳಿ ಕ್ಷೇತ್ರದ ಪೋಟೋ, ಸಲ್ಲಿಸಿದ ಅರ್ಜಿ ಪ್ರತಿ ಮತ್ತು ಒಕ್ಕಲೆಬ್ಬಿಸುವ ಸಂಬಂಧಿಸಿ ತೆಗೆದಂತಹ ಫೋಟೋ ಮತ್ತು ವಿಡಿಯೋ ದಾಖಲೆ ಸಹಿತ ದೂರು ಸಲ್ಲಿಸಲು ಉಪ ವಿಭಾಗ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಹಾಗೂ ಉಪ

ವಿಭಾಗದ ಅಧಿಕಾರಿಗಳಾದ ಜೆ ಮಹೇಶ್ ಅವರು ಸಲ್ಲಿಸಲು ಸಭೆಯಲ್ಲಿ ಘೋಷಿಸಿದರು.

ಜಿಲ್ಲೆಯಲ್ಲಿ ೭೩,೮೫೯ ಅರ್ಜಿಗಳು ತಿರಸ್ಕೃತ: ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದಂತಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ ಒಂದು ೨೦೨೬ ರವರೆಗೆ ೭೩,೮೫೯ ಅರಣ್ಯವಾಸಿಗಳ ಅರ್ಜಿಗಳನ್ನು ತಿರಸ್ಕರಿಲ್ಪಟ್ಟಿದೆ. ಅವುಗಳನ್ನು ಮುಂದಿನ ದಿನಗಳಲ್ಲಿ ಒಕ್ಕಲೆಬ್ಬಿಸುವ ಪ್ರಕಿಯೆಗೆ ಒಳಪಡಿಸಲಾಗುವುದು ಎಂದು ಇನ್ನಿತರ ಅಧಿಕಾರಿಗಳು ಮತ್ತು ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಸಮಕ್ಷಮದಲ್ಲಿ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಅವರು ಹೇಳಿದರು.

ಈ ಧರಣಿಯ ನೇತೃತ್ವವನ್ನು ವಹಿಸಿದ್ದ ಸಂಚಾಲಕ ಮಹೇಶ ನಾಯ್ಕ ಕಾನಕ್ಕಿ, ನಗರಾಧ್ಯಕ್ಷ ಸುರೇಶ್ ಮೇಸ್ತ, ರಾಮ ಮರಾಠಿ ಯಲಕೊಟಗಿ, ಜಿಲ್ಲಾ ಸಂಚಾಲಕರಾದ ಮಹಾಭಲೇಶ್ವರ ನಾಯ್ಕ, ರಾಜೇಶ್ ಮಿತ್ರ ನಾಯ್ಕ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಅಂಕೋಲಾ ಅಧ್ಯಕ್ಷ ರಮಾನಂದ ನಾಯಕ, ಕಿರಣ ಮರಾಠಿ ದೇವನಳ್ಳಿ, ಸಂಕೇತ್ ನಾಯ್ಕ ಹಲಗೇರಿ ಇವರು ಮಾತನಾಡಿದರು.

ಗಣೇಶ ನಾಯ್ಕ ಚಂದಾವರ, ಜನಾರ್ಧನ್ ನಾಯ್ಕ ಚಂದಾವರ, ಸಂಕೇತ್ ನಾಯ್ಕ ಯಲಕೊಟಗಿ, ವಿನೋದ ನಾಯ್ಕ ಯಲಕೊಟಗಿ, ಮಂಜು ನಾಯ್ಕ ಹೆರಾವಲಿ, ಗಣೇಶ್ ನಾಯ್ಕ ಹೆರಾವಲಿ, ವಿನಯ ನಾಯ್ಕ ಜನಕಡಕಲ್, ಮಾರುತಿ ನಾಯ್ಕ ಜಂಬೆಬೆಟ್ಟ, ಸುರೇಶ್ ಮೇಸ್ತ, ಅನಿತಾ ಲೋಪೀಸ್ ಮುಗ್ವಾ, ಸಂತಾನ ಫರ್ನಾಂಡಿಸ್ ಕಾಸರಗೋಡ, ರಜಾಕ್ ಪ್ರಭಾತ ನಗರ,ಮಂಜುನಾಥ ನಾಯ್ಕ ಚಂದಾವರ, ಸುರೇಶ್ ನಾಯ್ಕ ತುಂಬೊಳ್ಳಿ ಇವರುಗಳು ನೇತೃತ್ವ ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯ: ನೀರಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಮಹಿಳೆ
ಬ್ರಹ್ಮಾವರ: ಬಾಳೆಕುದ್ರು ಮಠದ ಶ್ರೀಗಳು ನಾಪತ್ತೆ !