ಹನುಮಸಾಗರ ಸಮೀಪದ ಮದ್ನಾಳ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಯಂದಿರ ದಿನಾಚರಣೆಯಲ್ಲಿ ಗ್ರಾಪಂ ಕರವಸೂಲಿಗಾರ ಮಹಾಂತೇಶ ತಳವಾರ ಮಾತನಾಡಿದರು.
ಹನುಮಸಾಗರ: ಜಗತ್ತಿಗೆ ನಮ್ಮನ್ನು ಪರಿಚಯಿಸಿದ ತಾಯಿಗೆ ಪ್ರತಿಯೊಬ್ಬರೂ ಸದಾ ಕಾಲ ಚಿರಋಣಿಯಾಗಿರಬೇಕು ಎಂದು ಗ್ರಾಪಂ ಕರವಸೂಲಿಗಾರ ಮಹಾಂತೇಶ ತಳವಾರ ಹೇಳಿದರು.
ಸಮೀಪದ ಮದ್ನಾಳ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಯಂದಿರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಪ್ರೀತಿ ಎಂದರೆ ಅದು ತಾಯಿ ಪ್ರೀತಿ. ನಮ್ಮನ್ನು ಭೂಮಿಗೆ ತಂದ ತಂದೆ-ತಾಯಿಗಳನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ಪುರಾಣಗಳಲ್ಲಿ ತಾಯಿಯನ್ನು ಭೂಮಿಗೆ ಹೋಲಿಸುತ್ತಾರೆ. ಯಾಕೆಂದರೆ ಆಕೆ ಭೂಮಿಯಷ್ಟೇ ಸಹನೆ, ಪ್ರೀತಿ, ಕರುಣೆಯುಳ್ಳವಳು. ಯಾವ ತಾಯಿ ತನ್ನ ಮಗನಿಗೆ ಕೆಟ್ಟದನ್ನು ಬಯಸುವುದಿಲ್ಲ. ಮಕ್ಕಳು ತಾಯಿಗೆ ಎಷ್ಟೇ ನೋವು ನೀಡಿದರೂ ಆಕೆ ಸಹಿಸಿಕೊಂಡು ಇರುತ್ತಾಳೆ. ತಾನು ಉಪವಾಸ ಇದ್ದು ಮಕ್ಕಳ ಹೊಟ್ಟೆ ತುಂಬಿಸುವ ತಾಯಿಯ ತ್ಯಾಗ ಸರ್ವಕಾಲಕ್ಕೂ ಶ್ರೇಷ್ಠ ಎಂದರು.
ವಾಟರ್‌ಮ್ಯಾನ್ ಬಸವರಾಜ ಹೂಗಾರ, ಕಾಯಕ ಬಂಧುಗಳಾದ ಮಲ್ಲನಗೌಡ ಪೊಲೀಸ್ ಪಾಟೀಲ್, ಅಮರೇಶ ತಳವಾರ, ಚಿದಾನಂದ ಬಂಡಿ, ಶ್ರೀದೇವಿ ಹಿರೇಮಣಿ, ಶಕುಂತಲಾ ಹೂಗಾರ, ಗೀತಾ ಕಟಾಪುರ ಹಾಗೂ ಕೂಲಿಕಾರ್ಮಿಕರು ಇದ್ದರು.
ನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ತಾಯಂದಿರ ದಿನ ಆಚರಣೆ:
ಕೊಪ್ಪಳ ತಾಲೂಕಿನ ಕಲಕೇರಿ ಗ್ರಾಪಂ ವ್ಯಾಪ್ತಿಯ ಹಟ್ಟಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೇಕ್ ಕತ್ತರಿಸಿ ಮಹಿಳಾ ಕೂಲಿಕಾರರು ವಿಶ್ವ ತಾಯಂದಿರ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಕಾಯಕ ಮಿತ್ರರಾದ ರಾಧಾ, ಬಿಎಫ್‌ಟಿ ಮಾರುತಿ ವಾಲ್ಮೀಕಿ, ತಾಂಡಾ ರೋಜಗಾರ್ ಮಿತ್ರ ಯಮನೂರಪ್ಪ ಕಾರಬಾರಿ ಹಾಗೂ ಮಹಿಳಾ ಕೂಲಿಕಾರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.