ನರಗುಂದ: ಪ್ರತಿಯೊಬ್ಬ ಮನುಷ್ಯ ಉತ್ತಮ ಆರೋಗ್ಯ ಹೊಂದಬೇಕೆಂದರೆ ಪ್ರತಿ ದಿನ ಮಾನಸಿಕತೆಯಿಂದ ಹೊರಬಂದು ಆರೋಗ್ಯವಾಗಿರಬೇಕೆಂದು ಮನೋರೋಗ ತಜ್ಞ ಪದ್ಮಶ್ರೀ ಪುರಸ್ಕ್ರತ ಸಿ.ಆರ್. ಚಂದ್ರಶೇಖರ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಶ್ರೀಯಚ್ಚರ ಮಹಾಸ್ವಾಮಿಗಳ ಗವಿಮಠದ ಜಾತ್ರಾಮಹೋತ್ಸವ ಕಾರ್ಯಕ್ರಮದ ಭಕ್ತ ಹಿತಚಿಂತನಾ ಸಭೆಯಲ್ಲಿ ಮಾತನಾಡಿ, ಹೃದಯ ರೋಗದಿಂದ ಹೆಚ್ಚು ಸಾವು ಸಂಭವಿಸುತ್ತವೆ, ಮನುಷ್ಯನಿಗೆ ಒತ್ತಡದ ಜೀವನ, ಕೋಪ, ಚಿಂತೆ, ದುಃಖ, ಭಯಗಳು ನಮ್ಮ ಆರೋಗ್ಯ ಹಾಳು ಮಾಡುತ್ತಿವೆ ನಾವು ಉತ್ತಮ ಆಹಾರ ಪದ್ಧತಿ, ವ್ಯಾಯಾಮ, ಯೋಗ, ಧ್ಯಾನದಿಂದ ಒತ್ತಡ ಬದುಕಿನಿಂದ ಹೊರ ಬಂದು ಉತ್ತಮ ಜೀವನಕ್ಕೆ ಕ್ಷಮಾಗುಣ ಇದ್ದ ಕೋಪ ನಿಯಂತ್ರಿಸಿದರೆ ನಾವು ಆರೋಗ್ಯವಾಗಿರಲು ಸಾಧ್ಯವೆಂದು ಹೇಳಿದರು.ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ವಿಶ್ವವಿದ್ಯಾಲಯದ ಕಲುಪತಿ ಡಾ.ಸುರೇಶ ನಾಡಗೌಡರ ಮಾತನಾಡಿ, ಭಾರತವು ಹಳ್ಳಿಗಳ ದೇಶ, ಹಳ್ಳಿ ಉದ್ಧಾರದಿಂದ ಮಾತ್ರ ದೇಶ ಉದ್ಧಾರ ಸಾಧ್ಯ, ವಿಶ್ವವಿದ್ಯಾಲಯ ಶಿಸ್ತು ಬದ್ಧ ಅಧ್ಯಯನಕ್ಕಾಗಿ ಅನೇಕ ಕೋರ್ಸ ಹೊಂದಿದೆ ಹಾಗೂ ಶ್ರೀ ಯಚ್ಚರಸ್ವಾಮಿ ಗವಿಮಠ ಶಿರೋಳ ಗ್ರಾಮ ಅಧ್ಯಯನಕ್ಕೆ 30ವಿದ್ಯಾರ್ಥಿಗಳಿಗೆ 20 ದಿನ ವಸತಿ ಕಲ್ಪಿಸಿದೆ, ಈ ಮಠವು ಸಮಾಜ ಮುಖಿ ಕೆಲಸ ಮಾಡುತ್ತದೆ ಎಂದರು.
ಸಾನ್ನಿಧ್ಯ ವಹಿಸಿ ಗಿಣಿಗೇರಾ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಅಭಿನವ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಭಕ್ತನ ಭಕ್ತಿ ಚಿಂತನೆಗೆ ಹೆಚ್ಚು ಮಹತ್ತವ ನೀಡುವ ಯಚ್ಚರ ಶ್ರೀಗಳು ತಮ್ಮ ಮಠಕ್ಕೆ ಸೀಮಿತವಾಗದೆ ಸಮಾಜದ ಪರ ಯೋಚನೆ ಮಾಡಿ ಸಮಾಜ ಮುಕಿ ಕಾರ್ಯಕ್ರಮ ನೀಡುತ್ತಿರುವುದೇ ಸಾಕ್ಷಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪ್ರವೀಣ ಬಡಿಗೇರ ತಂಡ ನವಶಕ್ತಿ ವೈಭವ, ಶಿವ ತಾಂಡವ, ನಾಟ್ಯಭೈರವಿ ನೃತ್ಯ ಸಾಂಸ್ಕೃತಿಕ ಸಂಸ್ಥೆ ಹುಬ್ಬಳ್ಳಿಯವರು ಜಾತ್ರಾ ಮಹೋತ್ಸವವನ್ನು ಮೇರಗನ್ನು ಹೆಚ್ಚಿಸಿ ಭಕ್ತಿಯ ಪರಾಕಾಷ್ಠೆ ಮೆರಿಸಿದರು.
ಈ ಸಂದರ್ಭದಲ್ಲಿ ಯಚ್ಚರ ಶ್ರೀಗಳು, ಉದ್ಯಮಿ ಪಿ.ಡಿ. ನಾರಾಯಣಗೌಡ, ಕಂದಾಯ ನಿರೀಕ್ಷಕ ವಿಠ್ಠಲ ಪತ್ತಾರ, ಕಮಲೇಶ ಪಟೇಲ್, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಹನಮಂತಗೌಡ ತಿರಕನಗೌಡ್ರ, ಉಪಾಧ್ಯಕ್ಷ ಪ್ರಕಾಶ ಸೊಬರದ, ಕಾರ್ಯದರ್ಶಿ ದ್ಯಾಮಣ್ಣ ಶಾಂತಗೇರಿ, ಸಹ ಕಾರ್ಯದರ್ಶಿ ರವಿ ಆಲಗುಂಡಿ ಹಾಗೂ ಕಟ್ಟಡ,ಉತ್ಸವ, ದಾಸೋಹ, ಕಾರ್ಯಕ್ರಮ ಸಲಹಾ ಸಮಿತಿ, ಯುವ ಸೈನಿಕರ ಗೆಳೆಯರ ಬಳಗ, ಸಾಲಮರದ ತಿಮ್ಮಕ ಗೆಳೆತಿಯರು, ಗಾಯತ್ರಿ ಮಹಿಳಾ ಮಂಡಳ ಹಾಗೂ ಶಿರೋಳದ ಗ್ರಾಮಸ್ಥರು ಇದ್ದರು. ಬಾಪುಗೌಡ ತಿಮ್ಮನಗೌಡ್ರ ಸ್ವಾಗತಿಸಿದರು, ಸುನೀಲ ಕಳಸದ ನಿರೂಪಿಸಿದರು, ಎಚ್.ವಿ.ಬ್ಯಾಡಗಿ ವಂದಿಸಿದರು.