ಕಾರ್ಮಿಕರ ಸೌಲಭ್ಯ, ಹಕ್ಕುಗಳಿಗಾಗಿ ಹೋರಾಟ ರೂಪಿಸಿ: ವಿಜಯಕುಮಾರ ಮುದಕಣ್ಣನವರ

KannadaprabhaNewsNetwork |  
Published : May 02, 2025, 12:09 AM IST
ಹಾವೇರಿಯ ಹೆಸ್ಕಾಂ ಆವರಣದಲ್ಲಿರುವ ಕಾರ್ಮಿಕ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ, ಕಾರ್ಮಿಕ ದಿನ ಆಚರಿಸಲಾಯಿತು. | Kannada Prabha

ಸಾರಾಂಶ

ಆಡಳಿತ ಮಂಡಳಿ ಮತ್ತು ನೌಕರರ ಸಂಘ ಆಳುವ ಸರ್ಕಾರದ ಭಾಗಗಳಾಗಿದ್ದು, ಸಂದರ್ಭಕ್ಕನುಸಾರವಾಗಿ ಕೂಡಿ ಸಾಗಬೇಕಾಗುತ್ತದೆ.

ಹಾವೇರಿ: ನಿಧಾನವಾಗಿ ಎಲ್ಲ ಉದ್ಯಮಗಳು ಖಾಸಗೀಕರಣದತ್ತ ವಾಲುತ್ತಿರುವ ಇಂದಿನ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಸಂಘಟನೆಗಳ ಮೂಲಕ ಹೋರಾಟಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಹೀಗಾದಾಗ ಮಾತ್ರ ಕಾರ್ಮಿಕ ಚಳವಳಿ ಉಳಿಯಲು ಸಾಧ್ಯ ಎಂದು ಕವಿಪ್ರನಿ ನೌಕರರ ಸಂಘದ ಮಾಜಿ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ತಿಳಿಸಿದರು.

ಗುರುವಾರ ನಗರದ ಹೆಸ್ಕಾಂ ಆವರಣದಲ್ಲಿರುವ ಕಾರ್ಮಿಕ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ, ಹಾವೇರಿ ವಿಭಾಗದ ಕವಿಪ್ರನಿ ನೌಕರರ ಸಂಘದ ಸ್ಥಳೀಯ ಸಮಿತಿ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಭಾಗೀಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಬಿ. ಹೊಸಮನಿ ಮಾತನಾಡಿ, ಆಡಳಿತ ಮಂಡಳಿ ಮತ್ತು ನೌಕರರ ಸಂಘ ಆಳುವ ಸರ್ಕಾರದ ಭಾಗಗಳಾಗಿದ್ದು, ಸಂದರ್ಭಕ್ಕನುಸಾರವಾಗಿ ಕೂಡಿ ಸಾಗಬೇಕಾಗುತ್ತದೆ. ಅಂದಾಗ ಮಾತ್ರ ನೌಕರರ ಅಭಿವೃದ್ಧಿ ಸಾಧ್ಯ ಎಂದರು. ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ಶಿವಾನಂದ ಹಾದಿಮನಿ ಅವರು, ನಮ್ಮ ಹಕ್ಕುಗಳಿಗಾಗಿ ಎಲ್ಲ ರೀತಿಯ ಹೋರಾಟಗಳನ್ನು ಮಾಡದಿದ್ದಲ್ಲಿ ಆಡಳಿತ ವರ್ಗ ತನ್ನ ಹಿಡಿತವನ್ನು ಬಲವಾಗಿಟ್ಟು ಕೊನೆಗೆ ಸಂಬಳಕ್ಕೂ ಪರದಾಡುವ ಪರಿಸ್ಥಿತಿ ಬರಬಹುದು. ಕಾರಣ ಒಗ್ಗಟ್ಟಿನಲ್ಲಿಯೇ ಕಾರ್ಯತತ್ಪರರಾಗಬೇಕೆಂದರು. ಸಮಾರಂಭವನ್ನು ಉದ್ದೇಶಿಸಿ ಕೇಂದ್ರ ಸಮಿತಿಯ ಸದಸ್ಯ ಕೆ.ಎನ್. ಅಗಡಿ, ಸ್ಥಳೀಯ ಸಮಿತಿ ಅಧ್ಯಕ್ಷ ಶಂಕರ ಕಾಳಶೆಟ್ಟಿ, ಲೆಕ್ಕಾಧಿಕಾರಿ ಮಹ್ಮದ ಅಮಾನುಲ್ಲಾ, ಕಮ್ಯುನಿಸ್ಟ್‌ ಪಕ್ಷದ ರುದ್ರಪ್ಪ ಜಾಬೀನ, ಹನುಮಂತಪ್ಪ ಮರಿದ್ಯಾಮಣ್ಣನವರ, ಖಜಾಂಚಿ ಎಂ.ಎಸ್. ತರಿಕೇರಿ, ಉಪಾಧ್ಯಕ್ಷರಾದ ಜಯಣ್ಣ ಕೋಲಾರ, ಶಂಭಣ್ಣ ಹಾವೇರಿ, ಸಂತೋಷ ಕಲಾಲ, ಸುನೀಲ ದಾನಪ್ಪನವರ, ಕೇಂದ್ರ ಸಮಿತಿ ಮಾಜಿ ಸದಸ್ಯ ಎ.ಕೆ. ಯಮನೂರ, ಎಂ.ಎಸ್. ಕುಮ್ಮೂರ ಮತ್ತು ಎಂ.ಬಿ. ಮಿಶ್ರಿಕೋಟಿ ಮಾತನಾಡಿದರು. ಸಾಹಿತಿ ಕಲಾವಿದರ ಬಳಗದ ಸದಸ್ಯರಾದ ಸತೀಶ ಕುಲಕರ್ಣಿ, ಡಾ. ರಾಧಾ, ರೇಣುಕಾ ಗುಡಿಮನಿ, ಶಂಕರ ತುಮ್ಮಣ್ಣನವರ, ವಿರೂಪಾಕ್ಷ ಹಾವನೂರ, ಜುಬೇದಾ ನಾಯಕ್, ರಾಜೇಂದ್ರ ಹೆಗಡೆ, ಶರಣಪ್ಪ ಸಂಗನಾಳ ಉಪಸ್ಥಿತರಿದ್ದರು. ಶಂಕರ ಕಾಳಶೆಟ್ಟಿ ಸ್ವಾಗತಿಸಿದರು. ಸಂತೋಷ ಕಲಾಲ ವಂದಿಸಿದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ