ಕನ್ನಡ ಭವನ ನಿರ್ಮಾಣಕ್ಕೆ ಶಾಸಕರ ನೇತೃತ್ವದ ಸಮಿತಿ ರಚನೆ

KannadaprabhaNewsNetwork |  
Published : Oct 27, 2024, 02:02 AM IST
26ಕೆಬಿಪಿಟಿ.2.ಬಂಗಾರಪೇಟೆ ಪುರಸಭೆಯಲ್ಲಿ ನಡೆದ ಕನ್ನಡ ಭವನ ನಿರ್ಮಾಣಕ್ಕೆ ವಿಶೇಷ ಸಭೆಯಲ್ಲಿ ಶಾಸಕ ನಾರಾಯಣಸ್ವಾಮಿ ಮಾತನಾಡಿಇದರು. | Kannada Prabha

ಸಾರಾಂಶ

ಬಂಗಾರಪೇಟೆಯಲ್ಲಿ ಶಾಸಕರ ನೇತೃತ್ವದಲ್ಲೇ ಕನ್ನಡ ಭವನ ನಿರ್ಮಾಣ ಮಾಡಲು ಕನ್ನಡ ಅಭಿಮಾನಿಗಳ ಒಕ್ಕೊರಳಿನ ಅಭಿಪ್ರಾಯಗಳು ಮತ್ತು ಒತ್ತಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕನ್ನಡ ಸಂಘ ಅಧ್ಯಕ್ಷ ಪಲ್ಲವಿ ಮಣಿ ಶಾಸಕರ ನೇತೃತ್ವದಲ್ಲೇ ಭವನ ನಿರ್ಮಾಣ ಮಾಡಲು ಬೆಂಬಲ ವ್ಯಕ್ತಪಡಿಸಿದರು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕನ್ನಡ ಭವನ ನಿರ್ಮಾಣಕ್ಕಾಗಿ ಪುರಸಭೆ ಮೂಲಕ ಕನ್ನಡ ಸಂಘಕ್ಕೆ ನೀಡಿದ ಜಾಗದಲ್ಲಿ ಭವನ ನಿರ್ಮಾಣ ಮಾಡುವಲ್ಲಿ ಕನ್ನಡ ಸಂಘ ವಿಫಲರಾದ ಹಿನ್ನಲೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ನಿರ್ಮಾಣ ಮಾಡಲು ಸಮಿತಿ ರಚನೆ ಮಾಡಲಾಗಿದೆ.

ಪುರಸಭೆ ಅಧ್ಯಕ್ಷ ಗೋವಿಂದ ಅಧ್ಯಕ್ಷತೆಯಲ್ಲಿ ಪುರಭೆ ಸಭಾಂಗಣದಲ್ಲಿ ಕರೆದಿದ್ದ ಕನ್ನಡ ಅಭಿಮಾನಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ನಿವೇಶ ಇದ್ದರೂ ಕಟ್ಟಡ ಕಟ್ಟಿಲ್ಲ

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕನ್ನಡ ಭವನ ನಿರ್ಮಾಣಕ್ಕೆ ಪುರಸಭೆ ಯಿಂದ ಜಾಗವನ್ನು ಮಂಜೂರು ಮಾಡಲಾಗಿದೆ. ಸುಮಾರು ವರ್ಷಗಳು ಕಳೆದರೂ ಸದರಿ ಜಾಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಭವನ ನಿರ್ಮಾಣಕ್ಕಾಗಿ ನಾಲ್ಕು ಬಾರಿ ಗುದ್ದಲಿ ಪೂಜೆ ನೆರೇರಿಸಲಾಗಿದೆ. ಭವನ ನಿರ್ಮಾಣ ಮಾಡಬೇಕೆಂದರೆ ಕನಿಷ್ಠ 3 ಕೋಟಿ ರೂ ಬೇಕಾಗುತ್ತದೆ ಎಂದರು.ಅನುದಾನ ತರಬೇಕು

ಪುರಸಭೆ ಸದಸ್ಯ ಚಂದ್ರಾರೆಡ್ಡಿ ಮಾತನಾಡಿ, ಭವನ ನಿರ್ಮಾಣ ಮಾಡಬೇಕು ಅಂದರೆ ಒಬ್ಬರಿಂದ ಆಗುವುದಿಲ್ಲ. ಅದಕ್ಕೆ ಸರ್ಕಾರ ಮಟ್ಟದಲ್ಲಿ ಅನುದಾನ ಬೇಕಾಗುತ್ತದೆ. ಇವೆಲ್ಲಾ ಆಗದ ಕೆಲಸ. ಭವನ ನಿರ್ಮಾಣಕ್ಕೆ ಅಂದಾಜು ವೆಚ್ಚ ಎಷ್ಟಾಗುತ್ತದೆ, ನಿಮ್ಮ ಸಂಘದಲ್ಲಿ ಎಷ್ಟು ಫಂಡ್ ಇದೆ ಎಂದು ಪ್ರಶ್ನಿಸಿದರು.

ಬಳಿಕ ಶಾಸಕರ ನೇತೃತ್ವದಲ್ಲೇ ಕನ್ನಡ ಭವನ ನಿರ್ಮಾಣ ಮಾಡಲು ಒಕ್ಕೊರಳಿನ ಅಭಿಪ್ರಾಯಗಳು ಮತ್ತು ಒತ್ತಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕನ್ನಡ ಸಂಘ ಅಧ್ಯಕ್ಷ ಪಲ್ಲವಿ ಮಣಿ ಶಾಸಕರ ನೇತೃತ್ವದಲ್ಲೇ ಭವನ ನಿರ್ಮಾಣ ಮಾಡಲು ಬೆಂಬಲ ವ್ಯಕ್ತಪಡಿಸಿದರು.

ಶಾಸಕ ನಾರಾಯಣಸ್ವಾಮಿ ನೇತೃತ್ವ

ಇದೇ ಸಂದರ್ಭದಲ್ಲಿ ಬಂಗಾರಪೇಟೆ ಕನ್ನಡ ಭವನ ನಿರ್ಮಾಣ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಪುರಸಭೆ ಅಧ್ಯಕ್ಷ ಗೋವಿಂದ ಸೇರಿದಂತೆ ಒಟ್ಟು ಏಳು ಸದಸ್ಯರ ಸಮಿತಿ ರಚಿಸಲಾಯಿತು. ಕನ್ನಡಭವನದ ನೀಲಿ ನಕ್ಷೆಯನ್ನು ತಯಾರಿಸಿ ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ನಿರ್ಮಾಣಕ್ಕೆ ಅಂದಾಜು ವೆಚ್ಚ ಸಿದ್ದಪಡಿಸಿ ಸರ್ಕಾರ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಜನವರಿ ಒಂದನೇ ತಾರೀಖುನೊಳಗಡೆ ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನ ಕರೆಸಲಾಗುವುದು ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಮುಖ್ಯಾಧಿಕಾರಿ ಸತ್ಯನಾರಾಯಣ, ಪೊಲೀಸ್ ಇನ್ಸ್ಫೆಕ್ಟರ್ ನಂಜಪ್ಪ, ಪುರಸಭೆ ಸದಸ್ಯ ಷಫೀ, ಸುಹೇಲ್, ವಸಂತ್, ಕುಂಬಾರಪಾಳ್ಯ ಮಂಜುನಾಥ್, ಗೌತಂ ನಗರ ಪ್ರತಾಪ್, ಕಣಿಂಬೆಲೆ ರಾಮ್‌ಪ್ರಸಾದ್ ಹಾಗು ಕನ್ನಡಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!