ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಜಗದೀಶ್ ಶೆಟ್ಟರ ಅವರ ಅಧಿಕೃತ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ.
ಯಾರೋ ದುಷ್ಕರ್ಮಿಗಳು ಶೆಟ್ಟರ್ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿ ‘ನನಗೆ ಉತ್ತಮ ಹೂಡಿಕೆ ಅನುಭವ ಸಿಕ್ಕಿದೆ.
7.50 ಲಕ್ಷ ಸಂದಾಯವಾಗಿದೆ. ನಿಮಗೂ ಲಾಭ ಆಗಬೇಕಾದರೆ @cristina penate ಸಂಪರ್ಕಿಸಿ’ ಎಂದು ಪೋಸ್ಟ್ ಹಾಕಿದ್ದಾರೆ.
ಅಲ್ಲದೆ, ಆ ಪೋಸ್ಟ್‌ನಲ್ಲಿ ಹಣ ಸಂದಾಯವಾಗಿರುವ ಸ್ತ್ರೀನ್ ಶಾಟ್‌ಗಳನ್ನೂ ಹಂಚಿಕೊಳ್ಳಲಾಗಿದೆ.
ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಮಾಧ್ಯಮಗಳಿಗೆ ಖಚಿತಪಡಿಸಿರುವ ಜಗದೀಶ್ ಶೆಟ್ಟರ್ ಆಪ್ತರು, ನಮ್ಮ ತಾಂತ್ರಿಕ ತಂಡ ಈ ಬಗ್ಗೆ ಪರಿಶೀಲಿಸುತ್ತಿದೆ.
ಸೈಬರ್ ಠಾಣೆಗೂ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಸಹ ಸ್ಪಷ್ಟನೆ ನೀಡಿದ್ದು, ಯಾರೂ ಲಿಂಕ್ ಕ್ಲಿಕ್ಕಿಸಬೇಡಿ ಎಂದು ಫೇಸ್‌ಬುಕ್‌ನಲ್ಲಿ ಮನವಿ ಮಾಡಿದ್ದಾರೆ.