ಮಾಜಿ ಶಾಸಕ ಎ.ಮಂಜುನಾಥ್ ಹುಟ್ಟುಹಬ್ಬ ಆಚರಣೆ

KannadaprabhaNewsNetwork | Published : May 22, 2025 1:01 AM
ವಿಶೇಷ ಚೇತನ‌ ಮಕ್ಕಳೊಂದಿಗೆ ಮಾಜಿ ಶಾಸಕ ಎ.ಮಂಜುನಾಥ್ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.
Follow Us

ಕನ್ನಡಪ್ರಭ ವಾರ್ತೆ ರಾಮನಗರನೇತ್ರ ತಪಾಸಣೆ, ರಕ್ತದಾನ ಶಿಬಿರ ಸೇರಿದಂತೆ ಸಾಮಾಜಿಕ ಕಾರ್ಯಗಳ ಮೂಲಕ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ರವರು ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು.ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಲ್ಲಿ ಎ.ಮಂಜು ಚಾರಿಟಬಲ್ ಟ್ರಸ್ಟ್ ಹಾಗೂ ಅವರ ಅಭಿಮಾನಿಗಳು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ನೂರಾರು ಜನರು ನೇತ್ರ ತಪಾಸಣೆಗೆ ಒಳಗಾದರು. ಅಲ್ಲದೆ ರಕ್ತದಾನ ಶಿಬಿರದಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರು ರಕ್ತದಾನ ಮಾಡಿ ಅಭಿಮಾನ ಮೆರೆದರು.ವಿಶೇಷ ಚೇತನ‌ ಮಕ್ಕಳೊಂದಿಗೆ ಮಾಜಿ ಶಾಸಕ ಎ.ಮಂಜುನಾಥ್ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಈ ವೇಳೆ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ.ಮಂಜುನಾಥ್, ನನಗೆ ಕ್ಷೇತ್ರದ ಜನರ ಪ್ರೀತಿಯೇ ಶ್ರೀರಕ್ಷೆಯಾಗಿದೆ. ನನಗೆ ಹೃದಯ ತುಂಬಿ ಸಂತೋಷವಾಗಿದೆ. ಪ್ರತಿನಿತ್ಯ ನಾನು ಜನರ ನಡುವೆ ಇದ್ದು ನಿಮ್ಮಲ್ಲಿ ಒಬ್ಬನಾಗಿರುವ ನನಗೆ ನೀವು ತೋರುತ್ತಿರುವ ಪ್ರೀತಿಗೆ ಬೆಲೆಕಟ್ಟಲಾಗದು ಎಂದು ಹೇಳಿದರು.ನಾನು ಬಡವರು, ಧ್ವನಿಯಿಲ್ಲದ ಪರವಾಗಿ ನಿಲ್ಲುತ್ತೇನೆ. ಅದಕ್ಕೆ ಒಂದು ಶಕ್ತಿ‌ಬೇಕು. ನಿಮ್ಮ ಮನೆ‌ಮಗನಾಗಿ, ಸಹೋದರನಾಗಿರುವ ನನಗೆ ನಿಮ್ಮಲ್ಲರ ಆಶೀರ್ವಾದ ವನ್ನು ಕೋರುತ್ತಾ, ನನ್ನ ಹುಟ್ಟು ಹಬ್ಬ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮಾಜಿ‌ ಶಾಸಕ ಎ.ಮಂಜುನಾಥ್ ಹುಟ್ಟುಹಬ್ಬದ ಅಂಗವಾಗಿ ಬಿಡದಿ ಬಿಜಿಎಸ್ ವೃತ್ತದಲ್ಲಿ ನುರಿತ ರಂಗಭೂಮಿ ಕಲಾವಿದರಿಂದ ದಕ್ಷಯಜ್ಞ ಅಥವಾ ಬೃಗಮುನಿರಾಜನ‌ ಗರ್ವಭಂಗ ಎಂಬ ಸುಂದರ ಪೌರಾಣಿಕ ನಾಟಕ ಯಶಸ್ವಿಯಾಗಿ ಜರುಗಿತು.

ಜೆಡಿಎಸ್ ಮುಖಂಡರಾದ ಕೊಳ್ಳಿಗನಹಳ್ಳಿ ರಾಮು ಮತ್ತು ಲಕ್ಷಣ ಅವರ ನೇತೃತ್ವದಲ್ಲಿ ನಡೆದ ನಾಟಕ ಸಮಾರಂಭದಲ್ಲಿ ಜಿ.ಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ಸಮಾಜ‌ ಸೇವಕ ಚಿಕ್ಕಣ್ಣಯ್ಯ, ಬಿಡದಿ ಪುರಸಭೆ ಅಧ್ಯಕ್ಷ ಎಂ.ಎನ್. ಹರೀಶ್ ಕುಮಾರ್, ಉಪಾಧ್ಯಕ್ಷೆ ಮಂಜುಳಾ, ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಲಿಂಗಯ್ಯ, ಕೃಷಿಕ‌ ಸಮಾಜದ ಜಿಲ್ಲಾಧ್ಯಕ್ಷ ಇಟ್ಟಮಡುಗೋಪಾಲ್ ಮುಖಂಡರಾದ ಏಳಗಹಳ್ಳಿ ತಮ್ಮಣ್ಣಗೌಡ, ಬಾಳೇನಹಳ್ಳಿ ರಾಜಣ್ಣ, ಹೋಟೆಲ್ ಜಗದೀಶ್, ಸೋಮೇಗೌಡ, ಶೇಷಪ್ಪ, ನರಸಿಂಹಯ್ಯ, ರಾಮಕೃಷ್ಣಯ್ಯ, ಡಾ.ಭರತ್, ಡಾ.ಸುಭಾಷ್, ಡಾ.ಪ್ರಕಾಶ್ ಮತ್ತಿತರರು ಇದ್ದರು.------- ....ಬಾಕ್ಸ್ ...ಜೆಸಿಬಿಗಳ ಮೂಲಕ ಹೂಮಳೆ

ಬಿಜಿಎಸ್ ವೃತ್ತದಲ್ಲಿ ನಾಟಕ ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಎ.ಮಂಜುನಾಥ್ ನಿವಾಸದಲ್ಲಿ ಪಕ್ಷದ ಅಪಾರ ಅಭಿಮಾನಿಗಳು ಕೇಕ್ ಕತ್ತರಿಸಿ ಶುಭಾಷಯ ಕೋರಿದರು. ನಂತರ ಬಿಜಿಎಸ್ ವೃತ್ತದಲ್ಲಿ ಬಾನಂದೂರು ಜಗದೀಶ್ ನೇತೃತ್ವದಲ್ಲಿ ಬೃಹತ್ ಹಾರ ಹಾಕಿ ಕೇಕ್ ಕತ್ತರಿಸಿ, ಜೆಸಿಬಿಗಳ ಮೂಲಕ ಹೂಮಳೆ ಸುರಿಸಿದರು.----- 21ಕೆಆರ್ ಎಂಎನ್ 6.ಜೆಪಿಜಿಬಿಡದಿಯ ಬಿಜಿಎಸ್ ವೃತ್ತದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಅವರು ಕೇಕ್ ಕತ್ತರಿಸಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.