ಕ್ಷೇತ್ರಕ್ಕಿಂದು ಮಾಜಿ ಶಾಸಕ ಸುರೇಶ್ ಬಾಬು ದಿಢೀರ್ ಭೇಟಿ

KannadaprabhaNewsNetwork |  
Published : Aug 24, 2026, 01:15 AM IST
ಫೋಟೋ ವಿವರಣೆ : ಕಂಪ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು  | Kannada Prabha

ಸಾರಾಂಶ

Former MLA Suresh Babu suddenly visited the constituency

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಕಂಪ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಲಿದ್ದಾರೆ. ಇದು ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದೆ. ಆರಂಭದಲ್ಲಿ ತಾಲೂಕಿನ ಕಣಕುಪ್ಪೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ರಾಂಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬೇಟಿ ಮಾಡಲಿದ್ದಾರೆ. ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಅಲ್ಲಿನ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ. ಕಂಪ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಮಾಜಿ ಸಚಿವ ಬಿ.ಶ್ರೀರಾಮಲು ಅವರ ಸೋದರಳಿಯ ಎನ್ನುವುದು ಗಮನಾರ್ಹವಾಗಿದೆ. ಇವರು ಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಮಾತುಗಳು ಸಾರ್ವಜನಿಕವಾಗಿ ಆಗಾಗ್ಗೆ ಕೇಳಿಬರುತ್ತಿದ್ದವು. ಪ್ರಸ್ತುತ ಇವರ ದಿಢೀರ್ ಬೇಟಿ ಕ್ಷೇತ್ರದ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಡ್ಯದಲ್ಲಿ ಬೆಲ್ಲ ಕ್ವಿಂಟಾಲ್‌ಗೆ ₹6740ಗೆ ಹರಾಜು: ಐತಿಹಾಸಿಕ ದಾಖಲೆ
ಐಎಎಸ್‌ ಅಧಿಕಾರಿ ಜ್ಞಾನೇಂದ್ರ ‘ನಾ’ ಪತ್ತೆ ಹೈಡ್ರಾಮ - ಇ.ಡಿ ದಾಳಿ ಬೆನ್ನಲ್ಲೇ ನಾಪತ್ತೆ ಪುಕಾರು