ಕೋಟೆ ರಾಮೇಶ್ವರ ಅದ್ಧೂರಿ ಬಹ್ಮರಥೋತ್ಸವ

KannadaprabhaNewsNetwork |  
Published : Feb 28, 2026, 01:30 AM IST
ಮಾಗಡಿ ಪಟ್ಟಣದ ಕೋಟೆ ರಾಮೇಶ್ವರಸ್ವಾಮಿ ರಥೋತ್ಸವಕ್ಕೆ  ತಹಶೀಲ್ದಾರ್ ಶರತ್‌ಕುಮಾರ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಾಗಡಿ: ಪಟ್ಟಣದ ಕೋಟೆ ರಾಮೇಶ್ವರಸ್ವಾಮಿ ಜಾತ್ರೆ ಹಾಗೂ ವೈಭವದ ಬ್ರಹ್ಮರಥೋತ್ಸವಕ್ಕೆ ತಹಸೀಲ್ದಾರ್ ಶರತ್‌ಕುಮಾರ್‌ ಚಾಲನೆ ನೀಡಿದರು. ಕೋಟೆ ರಾಮೇಶ್ವರಸ್ವಾಮಿ ಉಭಯ ಅಮ್ಮನವರ ಕನ್ಯಾದಾನ ಪೂಜೆ ನೆರವೇರಿಸಿದರು

ಮಾಗಡಿ: ಪಟ್ಟಣದ ಕೋಟೆ ರಾಮೇಶ್ವರಸ್ವಾಮಿ ಜಾತ್ರೆ ಹಾಗೂ ವೈಭವದ ಬ್ರಹ್ಮರಥೋತ್ಸವಕ್ಕೆ ತಹಸೀಲ್ದಾರ್ ಶರತ್‌ಕುಮಾರ್‌ ಚಾಲನೆ ನೀಡಿದರು. ಕೋಟೆ ರಾಮೇಶ್ವರಸ್ವಾಮಿ ಉಭಯ ಅಮ್ಮನವರ ಕನ್ಯಾದಾನ ಪೂಜೆ ನೆರವೇರಿಸಿದರು. ಅಲಂಕೃತ ಉತ್ಸವ ಮೂರ್ತಿಗಳನ್ನು ಹೂವಿನಿಂದ ಅಲಂಕರಿಸಿದ ರಥದ ಮೇಲಿಟ್ಟು ಪೂಜೆ ಸಲ್ಲಿಸಲಾಯಿತು.ಪ್ರಧಾನ ಅರ್ಚಕ ರಾಮಕೃಷ್ಣ ದೀಕ್ಷಿತ್, ರಾಜ ಅಯ್ಯಂಗಾರ್, ತಂಡದ ಪುರೋಹಿತರು ಮಂತ್ರಘೋ಼ಷ ಮಾಡಿದರು. ಹರಹರ ಮಹಾದೇವ ಘೋಷಣೆಯೊಂದಿಗೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು, ಶ್ರೀಪಾದ ಕಾವಲುಗಾರರಾದ ತೋಟದ ರಂಗಪ್ಪ, ರೇಣುಕಪ್ಪ ಮತ್ತು ಮಕ್ಕಳು ತಂಡದವರು ರಥವನ್ನು ಭಕ್ತರ ಸಹಾಯದೊಂದಿಗೆ ರಥಬೀದಿಯಲ್ಲಿ ಎಳೆದು ಭಕ್ತಿ ಸಮರ್ಪಿಸಿದರು. ಸೋಮೇಶ್ವರಸ್ವಾಮಿ ಸೇವಾ ಸಮಿತಿ ಟ್ರಸ್ಟಿನಿಂದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಪುಳಿಯೋಗರೆ, ಮೊಸರನ್ನ ವಿತರಿಸಿದರು.

ಟ್ರಸ್ಟಿನ ಪದಾಧಿಕಾರಿಗಳಾದ ಎಂ.ಜಿ.ಗೋಪಾಲ್, ಕೃಷ್ಣಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷ ಎಂ.ಬಿ.ಶಿವಾನಂದ್, ಡಾ.ಶಿವಕುಮಾರ ಸ್ವಾಮೀಜಿ ಶಿವದಾಸೋಹ ಸಮಿತಿ ಅಧ್ಯಕ್ಷ ಕೆರೆಬೀದಿ ಈಶ, ಹೊಸಹಳ್ಳಿ ನಾಗರಾಜು, ಶಿವರಾಜು, ದೊಡ್ಡಿ ಜಗದೀಶ್, ಜಿಪಂ ಮಾಜಿ ಸದಸ್ಯೆ ಚಂದ್ರಮ್ಮನಂಜಯ್ಯ, ಪುರಸಭೆ ಮಾಜಿ ಸದಸ್ಯೆ ರಾಧಾ, ಆರ್ಯವೈಶ್ಯ ಸಮಾದಜ ಜ್ಯೋತಿ ನಂಜುಂಡಸ್ವಾಮಿ, ಸ್ಮಿತಾಸುನಿಲ್, ಶಿವಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಾದೇಶ್, ಪ್ರಧಾನ ಕಾರ್ಯದರ್ಶಿ ಸಿ,ಕೆ.ಸುಧೀಂದ್ರ, ಖಜಾಂಚಿ ಜಗದೀಶ್, ಗೌರವಾಧ್ಯಕ್ಷ ಮಾರಣ್ಣ, ನಿರ್ದೇಶಕರಾದ ಜಿ.ವೆಂಕಟೇಶ್, ಹೊಸಹಳ್ಳಿ ಹನುಮಂತಯ್ಯ, ಕೃಷ್ಣಮೂರ್ತಿ, ಬ್ರಾಹ್ಮಣ ಸಮಾಜದ ವೆಂಕಟೇಶ್ ಮೂರ್ತಿ, ಲಕ್ಷ್ಮೀನಾರಾಯಣ್, ಎಸ್. ಸುಹಾಸ್, ಗೌರಿ ನಿವೃತ್ತ ಪಿಡಿಒ ನಾಗರಾಜು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರರಿಗೆ ಸಚಿವ ಸ್ಥಾನ ನೀಡಿ
56 ಸಾವಿರ ಹುದ್ದೆಗಳ ಭರ್ತಿ ಹೇಳಿಕೆ ಬಿಜೆಪಿ ಹೋರಾಟದ ಫಲ