ಟಾಪ್‌ ರೈಟ್‌....ಸಿಸಿ ರಸ್ತೆಗೆ ಅಡಿಗಲ್ಲು ಪೂಜೆ

KannadaprabhaNewsNetwork |  
Published : Aug 11, 2026, 01:45 AM IST
ಫೋಟೋ- ಅಲ್ಲಂ | Kannada Prabha

ಸಾರಾಂಶ

On Sunday, MLA Allamprabhu Patil laid the foundation stone for the construction of a connecting road to the KHB Akka Mahadevi Colony—located next to the High Court in Ward 52 of the Kalaburagi South Assembly constituency—at a cost of ₹1.45 crore.

ಕಲಬುರಗಿ: ಕಲಬುರಗಿ ದಕ್ಷಿಣ ಅಸೆಂಬ್ಲಿಯ ವಾರ್ಡ್‌ 52ರಲ್ಲಿ ಬರುವ ಹೈಕೋರ್ಟ್‌ ಪಕ್ಕದ ಅಕ್ಕ ಮಹಾದೇವಿ ಕಾಲೋನಿ ಬಡಾವಣೆಯಲ್ಲಿ ಭಾನುವಾರ ಶಾಸಕ ಅಲ್ಲಂಪ್ರಭು ಪಾಟೀಲ 1.45 ಕೋಟಿ ರು. ವೆಚ್ಚದಲ್ಲಿ ಕೆಎಚ್‌ಬಿ ಅಕ್ಕ ಮಹಾದೇವಿ ಕಾಲೋನಿಯ ಸಂಪರ್ಕ ರಸ್ತೆ ಕಾಮಗಾರಿಗೆ ಅಡಿಗಲ್ಲು ಹಾಕಿದರು.ಬಳಕ ಮಾತನಾಡಿದ ಅವರು, ಕೆಕೆಆರ್‌ಡಿಬಿ 4.90 ಕೋಟಿ ರು. ಪ್ಯಾಕೇಜ್‌ ಅನುದಾನವನ್ನೆಲ್ಲ ನಗರ ಅಭಿವೃದ್ಧಿಗೆ ಬಳಸಲಾಗಿದೆ. ನಿಜಾಂಪೂರ, ಕಮಲಾ ನಗರ, ಅಕ್ಕ ಮಹಾದೇವಿ ಕಾಲೋನಿ, ಓಝಾ ಬಡಾವಣೆ, ಕುರುಬ ನಗರ, ಸಾವಿತ್ರಿ ಫುಲೆ ಬಡಾವಣೆ, ವೆಂಕಟೇಶ ನಗರ, ಗಿರಿ ಬಡಾವಣೆ, ಶರಣ ನಗರ, ಕಲಬುರಗಿಯ ಹಲವೆಡೆ ವೆಚ್ಚ ಮಾಡಲಾಗಿದೆ ಎಂದರು.ಇದೇ ಪ್ಯಾಕೇಜ್‌ನಲ್ಲಿಯೇ ಅಕ್ಕ ಮಹಾದೇವಿ ಕಾಲೋನಿಯ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು. ಮುಖಂಡರಾದ ಲಿಂಗರಾಜ ತಾರಫೈಲ್‌, ಧರ್ಮರಾಜ ಹೆರೂರ್‌ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಬಡಾವಣೆಯ ಹಿರಿಯರು, ಅಕ್ಕಮಹಾದೇವಿ ಬಡಾವಣೆಯ ಸುಶೀಲ್‌ ಮಮದೆ, ರವಿ ಕೊಳ್ಳೂರ, ದಯಾನಂದ ಸ್ವಾಮಿ, ರಾಣಪ್ಪ, ಬಾಬೂ, ಚಂದ್ರಕಾಂತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ
ಯುವ ಕಾಂಗ್ರೆಸ್ ದೇಶದ ಭವಿಷ್ಯ ಕಟ್ಟುವ ಯುವ ಶಕ್ತಿ: ಪ್ರಸನ್ನಕುಮಾರ್