ಹೂವಿನಹಡಗಲಿಯಲ್ಲಿ ಗುರುಭವನಕ್ಕೆ ಶಂಕುಸ್ಥಾಪನೆ

KannadaprabhaNewsNetwork | Published : Sep 10, 2024 1:38 AM

ಸಾರಾಂಶ

ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಹೂವಿನಹಡಗಲಿ: ಪಟ್ಟಣದಲ್ಲಿ ಶಿಕ್ಷಕರ ಸಂಘಕ್ಕೆ ನೂತನ ಗುರುಭವನ ನಿರ್ಮಾಣವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಲ್.ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಪಂಚಮಸಾಲಿ ಸಮುದಾಯ ಭವನದಲ್ಲಿ ತಾಲೂಕು ಶಿಕ್ಷಕರ ಸಂಘ ಹಾಗೂ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಫದ್ಘಾಟನೆ ಹಾಗೂ ಬೈ ಪಾಸ್ ರಸ್ತೆಯಲ್ಲಿನ ಹಳೇ ಗುರುಭವನ ಇದ್ದ ಸ್ಥಳದಲ್ಲೇ ನೂತನ ಗುರುಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿದರು.

ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಇಂಗ್ಲಿಷ್‌ ಕಲಿಕೆಯ ಮಾಹಿತಿ ಕೇಂದ್ರ, ಸ್ಮಾರ್ಟ್‌ ಕ್ಲಾಸ್‌, ಹೈಟೆಕ್‌ ಶೌಚಾಲಯಗಳು, ಡಿಜಿಟಲ್‌ ಲ್ಯಾಬ್‌, ಶುದ್ಧ ಕುಡಿವ ನೀರು ಒದಗಿಸಲಾಗುತ್ತಿದೆ. ಈವರೆಗೂ ವಿದ್ಯಾರ್ಥಿಗಳು ಶಾಲಾ ಆವರಣದ ನೆಲದ ಮೇಲೆ ಕುಳಿತು ಬಿಸಿಯೂಟ ಊಟ ಮಾಡುತ್ತಿದ್ದರು, ಅದಕ್ಕೆ ಬದಲಾಗಿ ನರೇಗಾ ಯೋಜನೆಯಡಿ ಊಟದ ಹಾಲ್‌ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಬಿಇಒ ಮಹೇಶ ಪೂಜಾರ ಮಾತನಾಡಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಇಒ ಉಮೇಶ, ಎಚ್‌.ಪೂಜೆಪ್ಪ, ಜ್ಯೋತಿ ಮಹೇಂದ್ರ, ಶಿಕ್ಷಕರ ಸಂಘದ ಅಧ್ಯಕ್ಷ ಉತ್ತಂಗಿ ಆನಂದ ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ದೈಹಿಕ ಅಧೀಕ್ಷಕ ರಫೀಕ್ ಅಹಮದ್ ಖವಾಸ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೊಟ್ರಗೌಡ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ, ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ.ಎಂ. ಕಾಂತೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ರಾಜ್ಯ ಸಹ ಕಾರ್ಯದರ್ಶಿ ಶಿವಕುಮಾರ್ ಗಡ್ಡಿ, ಸಿ.ಮೋಹನ್‌ ರಡ್ಡಿ, ಬಿಜೆಪಿ ಮಂಡಲದ ಅಧ್ಯಕ್ಷ ಹಣ್ಣಿ ಶಶಿಧರ, ಪುತ್ರೇಶ, ಪುನೀತ್‌, ಹಂಪಸಾಗರ ಕೋಟೆಪ್ಪ, ವಿಶ್ವನಾಥ, ಚಂದ್ರನಾಯ್ಕ, ವಿ.ಬಿ.ಜಗದೀಶ, ಡಿ.ವಿರೂಪಣ್ಣ, ಸಿದ್ದಮ್ಮ, ದ್ವಾರಕೀಶ ರೆಡ್ಡಿ, ಸುರೇಶ ಅಂಗಡಿ, ಮಮತ, ಶ್ರೀಲತಾ, ಬಸೆಟ್ಟಿ ಪ್ರಕಾಶ, ಎಂ.ಶಿವಲಿಂಗಪ್ಪ ಸೇರಿದಂತೆ ಇತರರಿದ್ದರು.

ಇದೇ ವೇಳೆ ನಿವೃತ್ತಿಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.ಫೋಟೊ: ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

Share this article