ರಾಮನಗರದಲ್ಲಿ 82 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ

KannadaprabhaNewsNetwork |  
Published : Oct 10, 2024, 02:23 AM IST
9ಕೆಆರ್ ಎಂಎನ್ 2.ಜೆಪಿಜಿರಾಮನಗರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ರಾಮನಗರ: ನಗರ ಮೂಲ‌ ಸೌಕರ್ಯ ಅಭಿವೃದ್ಧಿ (ಯುಐಡಿಎಪ್) ಯೋಜನೆಯಡಿ ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ 82 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಬುಧವಾರ ಶಂಕು ಸ್ಥಾಪನೆ ನೆರವೇರಿಸಿದರು.

ರಾಮನಗರ: ನಗರ ಮೂಲ‌ ಸೌಕರ್ಯ ಅಭಿವೃದ್ಧಿ (ಯುಐಡಿಎಪ್) ಯೋಜನೆಯಡಿ ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ 82 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಬುಧವಾರ ಶಂಕು ಸ್ಥಾಪನೆ ನೆರವೇರಿಸಿದರು.

ನಗರದ ಮೆಹಬೂಬುನಗರ ಬಡಾವಣೆಯಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್, ನಗರದ ವಿವಿಧ ವಾರ್ಡ್ ಗಳಲ್ಲಿನ ರಸ್ತೆಗಳ‌ಲ್ಲಿ ಜನರು ಓಡಾಡಲಾಗದ ಪರಿಸ್ಥಿತಿ ಯಲ್ಲಿ ಜನರು ಜೀವನ‌ ನಡೆಸುವಂತಾಗಿದೆ. ನಾನು ಶಾಸಕನಾದ ನಂತರ ಕ್ಷೇತ್ರದ ಸಮಸ್ಯೆ ಬಗ್ಗೆ ಖುದ್ದು ಪರಿಶೀಲನೆ ನಡೆಸಿದ ವೇಳೆ ಸಮಸ್ಯೆಯ ಬಗ್ಗೆ ಸಾರ್ವಜನಿಕರು ನನ್ನ ಗಮನ‌ ಸೆಳೆದಿದ್ದರು. ಹಾಗಾಗಿ ಇಂದು 25ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಅಭಿವೃದ್ಧಿ ‌ಕೈಗೊಳ್ಳಲು 82 ಕೋಟಿ ವೆಚ್ಚದ ಕೆಲಸಗಳಿಗೆ ಚಾಲನೆ ನೀಡಿದ್ದೇನೆ. ಈ ಕೆಲಸ ನಡೆದರೆ ನಗರದಲ್ಲಿ‌ ಸುಂದರ ರಸ್ತೆಗಳು ನಿರ್ಮಾಣ ವಾಗಲಿದ್ದು, ಜನರು ಸುಗಮವಾಗಿ ಓಡಾಟ‌ ನಡೆಸಬಹುದಾಗಿದೆ ಎಂದರು.

ದ್ಯಾವರಸೇಗೌಡನದೊಡ್ಡಿ, ವಿಜಯನಗರ, ಕಾಯಿ ಸೊಪ್ಪಿನ ಬೀದಿ, ಎಂ.ಜಿ.ರಸ್ತೆ, ಮಂಜುನಾಥನಗರ, ರಾಘವೇಂದ್ರ ಕಾಲನಿ, ಬಾಲಗೇರಿ, ಮೆಹಬೂಬ್ ನಗರ ಸೇರಿದಂತೆ 25ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭಾ ಸದಸ್ಯರಾದ ಕೆ.ಶೇಷಾದ್ರಿ (ಶಶಿ), ಮುತ್ತುರಾಜು, ದೌಲತ್ ಷರೀಪ್ ( ಎಕ್ಬಾಲ್ ಷರೀಪ್), ಗಿರಿಜಮ್ಮ, ಆಯಿಷಾ, ಬಿ.ಸಿ.ಪಾರ್ವತಮ್ಮ, ಅಸ್ಮದ್, ನಿಜಾಮುದ್ದೀನ್ ಷರೀಪ್, ಫೈರೋಜ್, ಶಿವಸ್ವಾಮಿ, ಅಕ್ಲೀಂ, ಪವಿತ್ರ, ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಹೊಸೂರು ಜಗದೀಶ್, ಶಿವಕುಮಾರ ಸ್ವಾಮಿ, ಷಡಕ್ಷರಿ, ರವಿ, ಬೈರೇಗೌಡ ಮತ್ತಿತರರು ಭಾಗವಹಿಸಿದ್ದರು.

9ಕೆಆರ್ ಎಂಎನ್ 2.ಜೆಪಿಜಿ

ರಾಮನಗರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ