ಕನ್ನಡಪ್ರಭ ವಾರ್ತೆ ಮೈಸೂರು
ಟ್ರಸ್ಟ್ ನ ಸಂಸ್ಥಾಪಕರಾದ ಮಾಳವಿಕಾ ಗುಬ್ಬಿವಾಣಿ ಯುವ ಆವೃತ್ತಿಯನ್ನು ಬಿಡುಗಡೆಗೊಳಿಸಿ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು.
ನಂತರ ಅವರು ಮಾತನಾಡಿ, ಪತ್ರಿಕೆಗಳನ್ನು ಓದುವುದರಿಂದ ಮಕ್ಕಳಿಗೆ ಓದುವುದು ಹಲವಾರು ಮಾಹಿತಿಗಳು ಸಿಗಲಿದೆ, ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಪತ್ರಿಕೆಯಿಂದ ಬಹಳ ಅನುಕೂಲವಾಗಲಿದೆ. ಇದರಿಂದ ಯಾರ ಮೇಲೂ ಅವಲಂಬಿತವಾಗದತಂತೆ ನೀವು ಸ್ವತಃ ಮಾಹಿತಿಗಳನ್ನು ಪಡೆದು ವಿವಿಧ ವಿಷಯಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದರು.ಪತ್ರಿಕೆಗಳನ್ನು ದಿನನಿತ್ಯ ಓದುವುದರಿಂದ ನಿಮ್ಮ ಭಾಷೆ ಮೇಲೆ ಹಿಡಿತವಿರುತ್ತದೆ. ಕ್ರೀಡೆ, ಕಲೆ, ರಾಜಕೀಯ ಸುತ್ತಮುತ್ತಲಿನ ನಡೆಯುವ ವಿಷಯ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ನಿಮಗೆ ಯೋಚನೆ ಮಾಡುವ ಶಕ್ತಿ ಬರುತ್ತದೆ. ಪತ್ರಿಕೆಗಳಲ್ಲಿ ಬರುವ ಸಾಧಕರ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ನಿಮ್ಮ ಮುಂದಿನ ಸಾಧನೆಗೆ ಸ್ಪೂರ್ತಿಯಾಗಲಿದೆ. ಮುಂದಿನ ದಿನಗಳಲ್ಲಿ ನಿಮ್ಮ ಸಾಧನೆಯತ್ತ ಮುಖ ಮಾಡಬಹುದು ಎಂದು ಅವರು ಹೇಳಿದರು.
ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಇತರರು ಇದ್ದರು.