ಜೀವನದಲ್ಲಿ ನಾಲ್ಕು ರತ್ನಗಳನ್ನು ಮರೆಯಬಾರದು

KannadaprabhaNewsNetwork |  
Published : Sep 02, 2024, 02:09 AM IST
೩೦ಬಿಎಸ್ವಿ೦೨- ಬಸವನಬಾಗೇವಾಡಿಯಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಹಾಸ್ಯ ನಟರಹಾಸ್ಯ ರಸಮಂಜರಿ ಕಾರ್ಯಕ್ರಮವನ್ನು ನಟ ದೊಡ್ಡಣ್ಣ ಉದ್ಘಾಟಿಸಿದರು.  | Kannada Prabha

ಸಾರಾಂಶ

ಜೀವನದಲ್ಲಿ ಪ್ರತಿಯೊಬ್ಬರು ನಾಲ್ಕು ರತ್ನಗಳಾದ ತಾಯಿ, ತಂದೆ, ಗುರು, ದೈವ ಎಂದಿಗೂ ಮರೆಯಬಾರದು. ಈ ನಾಲ್ಕು ರತ್ನಗಳ ಮಹತ್ವ ಅರಿತು ಜೀವನ ನಡೆಸಿದರೆ ಸುಂದರ ಜೀವನ ನಮ್ಮದಾಗಿಸಿಕೊಳ್ಳಬಹುದು ಎಂದು ಹಿರಿಯ ಚಿತ್ರನಟ ದೊಡ್ಡಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜೀವನದಲ್ಲಿ ಪ್ರತಿಯೊಬ್ಬರು ನಾಲ್ಕು ರತ್ನಗಳಾದ ತಾಯಿ, ತಂದೆ, ಗುರು, ದೈವ ಎಂದಿಗೂ ಮರೆಯಬಾರದು. ಈ ನಾಲ್ಕು ರತ್ನಗಳ ಮಹತ್ವ ಅರಿತು ಜೀವನ ನಡೆಸಿದರೆ ಸುಂದರ ಜೀವನ ನಮ್ಮದಾಗಿಸಿಕೊಳ್ಳಬಹುದು ಎಂದು ಹಿರಿಯ ಚಿತ್ರನಟ ದೊಡ್ಡಣ್ಣ ಹೇಳಿದರು.

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾ ಮಹೋತ್ಸವದಂಗವಾಗಿ ಗುರುವಾರ ನಂದೀಶ್ವರ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಹಾಸ್ಯ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಯಿ ತನ್ನ ಮಗುವಿನ ಶ್ರೇಯಸ್ಸಿಗೆ ಹಗಲಿರುಳು ಪ್ರಾರ್ಥಿಸುತ್ತಾಳೆ. ತನ್ನ ಮಗು ನಾಡಿಗೆ ದೊರೆಯಾಗಲಿ ಎಂಬ ಆಶಯ ಹೊಂದಿರುತ್ತಾಳೆ. ಅದೇ ರೀತಿ ತಂದೆಯಾದವನು ತಾನು ಉಪವಾಸವಿದ್ದರೂ ತನ್ನ ಮಕ್ಕಳು ಉಪವಾಸ ಇರಬಾರದು ಎಂಬ ಆಶಯ ಹೊಂದಿರುತ್ತಾನೆ. ಗುರುವಿನ ಮಾರ್ಗದರ್ಶನದಲ್ಲಿ ನಮ್ಮ ಜೀವನಕ್ಕೆ ಬೇಕಾದ ಬೆಳಕು ಸಿಗುತ್ತದೆ. ನಮ್ಮ ಮನೆಯ ದೈವದ ದರ್ಶನದಿಂದ ಮನಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಈ ನಾಲ್ಕು ರತ್ನಗಳ ಮಹತ್ವ ಅರಿತು, ಗೌರವ ನೀಡುವ ಮೂಲಕ ಜೀವನ ಸಾಗಿಸುವಂತಾಗಬೇಕಾದ ಅಗತ್ಯವಿದೆ ಎಂದು ತಿಳಿಸಿಕೊಟ್ಟರು.ಸಾನ್ನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಶೇಖರ ಗೊಳಸಂಗಿ, ಚಂದ್ರಶೇಖರಗೌಡ ಪಾಟೀಲ, ಅನಿಲ ಅಗರವಾಲ, ರವಿ ರಾಠೋಡ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಉಮೇಶ ಹಾರಿವಾಳ, ಸಂಗಣ್ಣ ಕಲ್ಲೂರ, ಸಂಕನಗೌಡ ಪಾಟೀಲ, ಮುತ್ತು ಪತ್ತಾರ, ಬಸವರಾಜ ಅಳ್ಳಗಿ ಇತರರು ಇದ್ದರು. ಶಂಕರಗೌಡ ಬಿರಾದಾರ ಮಾತನಾಡಿದರು. ರವಿ ರಾಠೋಡ ಸ್ವಾಗತಿಸಿದರು. ಎಂ.ಬಿ.ತೋಟದ ನಿರೂಪಿಸಿದರು.

ರಂಜಿಸಿದ ಹಾಸ್ಯ, ರಸಮಂಜರಿ:

ಕನ್ನಡ ಚಲನಚಿತ್ರ ಹಾಸ್ಯ ಕಲಾವಿದರಾದ ಡಿಂಗ್ರಿ ನಾಗರಾಜ, ಹೊನ್ನಾವಳ್ಳಿ ಕೃಷ್ಣ, ಬೌ ಬೌ ಬಿರ್‍ಯಾನಿ ಜಯರಾಂ, ರೇಖಾದಾಸ, ಮೈಸೂರು ರಮಾನಂದ, ಲತಾ ಇತರರಿಂದ ಹಾಸ್ಯ ಕಾರ್ಯಕ್ರಮ, ಸರಿಗಮಪ ಎಂಟರ್ಟೈನ್ಮೆಂಟ್ ತಂಡದ ಶಿವರಾಮ ಕಾಸರ, ವನಶ್ರೀ ಹಳೆಮನಿ, ಜೂನಿಯರ್ ಶಂಕರನಾಗ, ಜೂ.ವಿಷ್ಣುವರ್ಧನ ಇನ್ನಿತರೆ ಗಾಯಕರಿಂದ ಜರುಗಿದ ಸಂಗೀತ ರಸಮಂಜರಿ ತಡರಾತ್ರಿಯವರೆಗೂ ಜನಮನ ರಂಜಿಸಿತು.

ಇಂದು ಮಕ್ಕಳು ಮೊಬೈಲ್‌ಗೆ ಮಾರುಹೋಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಬೈಲ್ ಕೊಡಬಾರದು. ಅವರಿಗೆ ಮಹಾಭಾರತ- ರಾಮಾಯಣ, ಮಹಾತ್ಮರ ಜೀವನ ಚರಿತ್ರೆ ಓದಿಸುವ ಮೂಲಕ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ನೀಡಬೇಕು. ಇಂದು ಇಂಗ್ಲಿಷ್ ಮಾತನಾಡುವವರನ್ನು ಶ್ರೇಷ್ಠ ಎಂದು ಗುರುತಿಸುತ್ತಿದ್ದಾರೆ. ಇದು ಸರಿಯಲ್ಲ. ಕನ್ನಡ ಭಾಷೆಯು ಸರ್ವಶ್ರೇಷ್ಠವಾದ ಭಾಷೆ. ಇದು ಕಸ್ತೂರಿ ಕನ್ನಡವಾಗಿದೆ. ಕನ್ನಡ ನಾಡು-ನುಡಿ, ಕನ್ನಡಿಗರ ಬಗ್ಗೆ ಎಂದು ಕವಿರಾಜಮಾರ್ಗದಲ್ಲಿಯೇ ಹೇಳಲಾಗಿದೆ.

-ದೊಡ್ಡಣ್ಣ, ಹಿರಿಯ ಚಿತ್ರನಟ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು