ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ೨೦೨೮ರವರೆಗೆ ಸಿಎಂ ಕುರ್ಚಿ ಖಾಲಿ ಇಲ್ಲ. ಸಿಎಂ ಬದಲಾವಣೆ ಮಾಡಬೇಕಾದರೆ ಶಾಸಕರು, ಸಚಿವರಿಂದ ಸಾಧ್ಯವಿಲ್ಲ. ನಮ್ಮದು ಹೈಕಮಾಂಡ್ ಪಕ್ಷ ಈ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ನಾವು-ನೀವೆಲ್ಲ ಮಾತನಾಡುವುದರಿಂದ ಆಗುವುದಿಲ್ಲವೆಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವದಿಯಲ್ಲಿ ೨೦೧೬, ೨೦೧೭, ೨೦೧೮ರ ಸಾಲಿನಲ್ಲಿ ಮನೆ ಮಂಜೂರಾತಿ ನೀಡಿದ್ದು ಬಿಟ್ಟರೆ, ಸಮ್ಮಿಶ್ರ ಸರ್ಕಾರವಾಗಲೀ, ಬಿಜೆಪಿ ಸರ್ಕಾರದಲ್ಲಾಗಲಿ ಒಂದು ಮನೆ ನೀಡಲು ಆಗಿಲ್ಲ. ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ಅವರಿಗಿಲ್ಲ. ಬಿಜೆಪಿ ಅವದಿಯಲ್ಲಿ ಯಾವುದೇ ಗ್ಯಾರಂಟಿಗಳಿರಲಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯ ನಡುವೆಯೂ ಬಡಿವರಿಗೆ ಮನೆ ಕೊಡಬೇಕ ಎಂಬ ಉದ್ದೇಶದಿಂದ ಮನೆಗೆ ೪ ಲಕ್ಷ ರು. ನೀಡುವುದಾಗಿ ಸಿಎಂ ಸಿದ್ದರಾಮಯ್ಯ ೨೦೨೪ರ ಫೆಬ್ರವರಿ ತಿಂಗಳಲ್ಲಿ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿದ್ದರಿಂದ ಕಳೆದ ವರ್ಷದ ವರ್ಷ ೩೬೭೮೯ ಕೊಟ್ಟಿದ್ದೇವೆ. ಸ್ಲಂ ಬೋರ್ಡ್‌ನಿಂದ ೧,೮೦,೨೫೩, ರಾಜೀವ್ ಗಾಂಧಿ ಎಎಚ್ಪಿ ಯೋಜನೆಯಡಿ ೪೭೮೬೩ ಮನೆ ಸೇರಿ ೨.೩೦ ಲಕ್ಷ ಮನೆ ನೀಡಲಾಗಿದೆ ಎಂದರು.ಬಳ್ಳಾರಿಯಲ್ಲಿ ಮೃತಪಟ್ಟ ರಾಜಖೇಶ್ ಕುಟುಂಬಕ್ಕೆ ಜಮೀರ್ ೨೫ ಲಕ್ಷ ರು. ಕೊಟ್ಟಿದ್ದಾರೆ, ಯಾವ ದುಡ್ಡು ಎಂದು ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಒಂದು ಬಡ ಕುಟುಂಬಕ್ಕೆ ಪರಿಹಾರ ಹಣ ನೀಡಿದರೆ ನಿಮಗೇಕೆ ಹೊಟ್ಟೆಕಿಚ್ಚು. ನಿಮಗಂತೂ ಕೊಡಲಿಕ್ಕೆ ಮನಸು ಇಲ್ಲ. ಕೊಡುವವರಿಗೂ ಟೀಕೆ ಮಾಡಿದರೆ ಬಡವರು ಎಲ್ಲಿಗೆ ಹೋಗಬೇಕು. ನಾನು ೨೫ ಲಕ್ಷ ಅಂತ ಎಲ್ಲೂ ಹೇಳಿಲ್ಲ. ಸಣ್ಣ ಕಾಣಿಕೆ ಎಂದು ನೀಡಿದ್ದೇನೆ. ಸತ್ತಿರುವ ರಾಜಶೇಖರ್‌ಗೆ ೫೦ ಕೋಟಿ ರು. ಕೊಟ್ಟರು. ಜೀವ ವಾಪಸ್ಸು ತರುವುದಕ್ಕಾಗುವುದಿಲ್ಲ. ಜೀವಕ್ಕೆ ಹಣದ ಬೆಲೆ ಕಟ್ಟಬಾರದು. ನಿಮಗೆ ಸಹಾಯ ಮಾಡುವ ಮನಸಿಲ್ಲ. ನಮಗೆ ಮನಸಿದೆ ಖುಷಿ ಪಡಿ ಎಂದು ಸಚಿವ ಜಮೀರ್ ಅಹಮದ್ ಎಚ್ಡಿಕೆಗೆ ತಿರುಗೇಟು ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಪ.ಪಂ ಅಧ್ಯಕ್ಷ ಇಕ್ಬಾಲ್ ಅಹಮದ್, ಮುಖಂಡ ಕಲಂದರ್ ಮತ್ತಿತರರು ಇದ್ದರು.