-ಎಟಿಎಂ ದೋಚಿದ್ದ ನಾಲ್ವರು ದರೋಡೆಕೋರರಿಗೆ ಗುಂಡು । ಗ್ಯಾಸ್ ಕಟರ್ ಬಳಸಿ ಎಸ್ಬಿಐ ಎಟಿಎಂನಲ್ಲಿದ್ದ 18ಲಕ್ಷ ರು. ದೋಚಿದ್ದವರ ಬಂಧನ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಪೊಲೀಸರು ಶನಿವಾರ ಬೆಳ್ಳಂಬೆಳಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ ಹರಿಯಾಣ ಮೂಲದ ಅಂತರಾಜ್ಯ ಖತರ್‌ನಾಕ್ ಎಟಿಎಂ ದರೋಡೆಕೋರ ಗ್ಯಾಂಗ್ ಮೇಲೆ ಗುಂಡು ಹಾರಿಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಹರಿಯಣ ರಾಜ್ಯದ ಶಿರೋಳಿಯ ತಸ್ಲೀಂ (28), ತವಾಣೆಯ ಶರೀಫ್ (20), ಶಿಕಾಂಪೂರದ ಶಾಹೀದ್ (27) ಹಾಗೂ ಕಾರ್ ಚಾಲಕ ಹೈದ್ರಾಬಾದ್‌ನ ಅಮೀರ್ (25) ಎಂದು ಗುರುತಿಸಲಾಗಿದೆ.
ಈಗ ಬೇಲೂರ್ ಕ್ರಾಸ್ ಬಲಿ ಇರುವ ಇನ್ನೊಂದು ಎಟಿಎಂ ಕಳವಿಗೆ ಹೊಂಚು ಹಾಕಿ ಕಲಬುರಗಿಗೆ ಬಂದಿದ್ದರು. ವಿಚಾರಣೆಯಲ್ಲಿ ಈ ಗ್ಯಾಂಗ್ ಪೂಜಾರಿ ಚೌಕ್ ಎಟಿಎಂ ತಾವೇ ದರೋಡೆ ಮಾಡಿರೋದನ್ನ ಒಪ್ಪಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂಜಾರಿ ಚೌಕ್ ಬಳಿಯ ಎಟಿಎಂ ದರೋಡೆ ಪ್ರಕರಣದ ಬೆನ್ನು ಬಿದ್ದಿದ್ದ ಕಲಬುರಗಿ ಪೊಲೀಸ್ ಬಳಿ ಕೃತ್ಯಕ್ಕೆ ಬಿಳಿ ಬಣ್ಣದ ಐ20 ಕಾರ್ ಬಳಸಿರೋ ಬಗ್ಗೆ ಬಲವಾದ ಸಾಕ್ಷ್ಯಗಳಿದ್ದವು. ಡಿಎಲ್ ಪಾಸಿಂಗ್ ಬಿಳಿ ಬಣ್ಣದ ಕಾರೇನಾದರೂ ಕಲಬುರಗಿಗೆ ಬಂದರೆ ನಿಗಾ ಇಡುವಂತೆಯೂ ಪ್ರಮುಖ ರಸ್ತೆ, ವೃತ್ತಗಳಲ್ಲಿ ಎಚ್ಚರಿಸಲಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಸಂತೋಷ ತಟ್ಟೇಪಳ್ಳಿ ಸಿಬ್ಬಂದಿ ಸಮೇತ ಸ್ಥಳಕ್ಕೆ ಧಾವಿಸಿ ಐ20 ಕಾರ್ ಬೆನ್ನಟ್ಟಿ ಆರೋಪಿಗಳ ಬಂಧನಕ್ಕೆ ಮುಂದಾದ ಆರೋಪಿಗಳು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಆಗ ಆತ್ಮರಕ್ಷಣೆಗೋಸ್ಕರ ಪಿಐ ಸಂತೋಷ ತಟ್ಟೇಪಳ್ಳಿ ಪಿಎಸ್‌ಐ ಬಸವರಾಜ ಇಬ್ಬರೂ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆಂದು ಕಮೀಷನರ್ ಡಾ. ಶರಣಪ್ಪ ಢಗೆ ಹೇಳಿದ್ದಾರೆ.
ಮತ್ತೊಂದು ಎಟಿಎಂ ಕಳವಿಗೆ ಈ ಗ್ಯಾಂಗ್ ಕಲಬುರಗಿಗೆ ಬಂದಾಗಲೇ ಖಾಕಿ ಕೈಗೆ ಸಿಕ್ಕಿ ಬಿದ್ದಿದೆ. ನಗರ ಹೊರವಲಯದ ಬೇಲೂರ ಕ್ರಾಸ್ ಬಳಿ ಕಾರ್ ತಡೆದು ಪರಿಶೀಲನೆಗೆ ಮುಂದಾದಾಗ ಕಾರಿನಲ್ಲಿದ್ದವರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು. ನಾಲ್ವರ ಪೈಕಿ ಇಬ್ಬರಿಂದ ಪೊಲೀಸರ ಮೇಲೆ ದಾಳಿ ನಡೆದಾಗ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆಂದು ಡಾ. ಶರಣಪ್ಪ ಹೇಳಿದ್ದಾರೆ.
----
ಕಲಬುರಗಿ ಪೊಲೀಸ್ ಕಮೀಶ್ನರ್ ಡಾ. ಶರಣಪ್ಪ ಢಗೆ ಅವರು ಎಟಿಎಂ ದರೋಡೆಕೋರರನ್ನು ಬಂಧಿಸುವಾಗ ನಡೆದ ದಾಳಿಯಲ್ಲಿ ಗಾಯಗೊಂಡ ನಗರ ಪೊಲೀಸ್ ಪೇದೆಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯವಿಚಾರಿಸಿದರು.
ಫೋಟೋ- ತಸ್ಲೀಂಫೋಟೋ- ಶರೀಫ್
ಫೋಟೋ- ಶಹೀದಫೋಟೋ-್ ಅಮೀರ್