ಕನ್ನಡಪ್ರಭ ವಾರ್ತೆ ವಿಜಯಪುರ
ಅನ್ನಭಾಗ್ಯ ಯೋಜನೆಯಡಿ ಪಡತರ ಹಂಚಿಕೆಯಲ್ಲಿ ಆಗುತ್ತಿರುವ ಮೋಸ ಖಂಡಿಸಿ ಹಾಗೂ ಕೂಡಲೇ ವಿತರಕರನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.ಯಾರೊಬ್ಬರು ಹಸಿವಿನಿಂದ ಬಳಲಬಾರದು, ಬಡವರು ಪರದಾಡುವಂತಾಗಬಾರದು ಎಂದು ಅನ್ನಭಾಗ್ಯ ಯೋಜನೆ ತಂದಿದ್ದಾರೆ, ಆದರೆ ಆಹೇರಿ(ಜ) ಗ್ರಾಮದ ದಿನಸಿ ವಿತರಕರು ಬಡವರಿಗೆ ದೊಡ್ಡ ಮಟ್ಟದ ಮೋಸ ಮಾಡುತ್ತಿರುವುದು ಕಂಡು ಬಂದಿದೆ. ಫಲಾನುಭವಿಗಳಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಮುಂದಿನ ತಿಂಗಳು ಬನ್ನಿ ಎಂದು ಪ್ರತಿಬಾರಿ ೨-೩ ತಿಂಗಳಿನಿಂದ ದಿನಸಿ ಕೊಡದೇ ಮುಂದೆ ಹಾಕುತ್ತಿದ್ದಾರೆ, ಕೇಳಿದರೆ ಈ ಸಲ ದಿನಸಿ ಬಂದಿಲ್ಲ ನಾವೇನು ಮಾಡೋಣ ಎಂದು ದೊಡ್ಡ ಧ್ವನಿಯಲ್ಲಿ ಅಂಜಿಸುತ್ತಿದ್ದಾರೆ. ಹೆಚ್ಚಿಗೆ ಮಾತನಾಡಿದರೆ ನಿಮ್ಮ ರೇಷನ್ ಕಾರ್ಡ್ ರದ್ದು ಪಡಿಸುವುದಾಗಿ ಹೇಳುತ್ತಿದ್ದಾರೆ. ಇಂತಹವರ ಲೈಸನ್ಸ್ ರದ್ದು ಮಾಡಿ ಬೇರೆಯವರಿಗೆ ನೀಡಬೇಖು ಎಂದು ಒತ್ತಾಯಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಮಹಾದೇವಪ್ಪ ತೇಲಿ ಮಾತನಾಡಿ, ಇತ್ತೀಚೆಗೆ ಮಳೆಯಲ್ಲಿ ಗಂಟು ಗಟ್ಟಿದ ಮನುಷ್ಯರು ತಿನ್ನಲು ಯೋಗ್ಯವಲ್ಲದ ಅಕ್ಕಿಯನ್ನು ಹಂಚಿ ರಾದ್ಧಾಂತ ಮಾಡಲಾಗಿದೆ. ಪ್ರತಿ ಬಾರಿಯೂ ದಿನಸಿ ಹಂಚುವಲ್ಲಿ ಕಡಿಮೆ ಬಂದಿದೆ, ಮುಂದಿನ ಸಲ ಕೊಡುವುದಾಗಿ ಹೇಳುತ್ತಾರೆ. ಅದನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೂಡಾ ಕೇಳಿ ಬರುತ್ತಿದೆ. ಬಡವರಿಗೆ ಅನ್ಯಾಯ ಮಾಡುತ್ತಿರುವವರನ್ನು ತೆಗೆದುಹಾಕಿ ಬೇರೆಯವರಿಗೆ ನೀಡಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಜಿಲ್ಲಾ ವ್ಯವಸ್ಥಾಪಕ ವಿನಯಕುಮಾರ ಪಾಟೀಲ ಅವರು, ಈ ಹೆಬೆಟ್ಟು ಒತ್ತಿಸಿಕೊಂಡು ೨-೩ ತಿಂಗಳ ನಂತರ ದಿನಸಿ ಕೊಡುವ ಯಾವುದೇ ಪದತಿ ಇಲ್ಲ, ಹೆಬೆಟ್ಟು ಒತ್ತಿಸಿಕೊಂಡ ತಕ್ಷಣದಲ್ಲಿ ದಿನಸಿ ವಿತರಣೆ ಮಾಡಬೇಕು. ಪ್ರತಿ ಪಡಿತರ ಅಂಗಡಿಯಲ್ಲಿ ೩ ಜನ ಸ್ಥಳೀಯ ಸಲಹಾ ಸಮಿತಿಯವರು ಇದ್ದು, ಇಲ್ಲಿ ಆಗು ಹೋಗು ಎಲ್ಲದರ ಕುರಿತು ಗಮನಹರಿಸಬೇಕು, ಅನ್ಯಾಯವಾದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು, ಈ ವಿಷಯದ ಬಗ್ಗೆ ಕೂಡಲೇ ಒಂದು ತನಿಖಾ ತಂಡ ಕಳುಹಿಸಿ ಪಂಚರ ಸಮ್ಮುಖದಲ್ಲಿ ವಿಚಾರಿಸಲಾಗುವುದು. ತಕ್ಷಣದಿಂದಲೇ ಲೈಸನ್ಸ್ ರದ್ದು ಮಾಡಿ ಬೇರೆಯವರಿಗೆ ಕೊಡುವುದಾಗಿ ಭರವಸೆ ನೀಡಿದ್ದಾರೆ.ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಜಯಸಿಂಗ್ ರಜಪೂತ, ಅರವಿಂದ ರಜಪೂತ, ತಿಪ್ಪರಾಯ ಭೈರೊಡಗಿ, ಚನ್ನವೀರ ವಾಲಿ ಸೇರಿದಂತೆ ಮುಂತಾದವರು ಇದ್ದರು.ಕೋಟ್‌ಪಡಿತರ ವಿತರಕರು ಕಳೆದ ೨ ತಿಂಗಳ ಹಿಂದೆ ಬಿಳಿ ಹಾಳೆಯಲ್ಲಿ ಸಹಿ ಮಾಡಿಕೊಡುತ್ತಾರೆ. ಪ್ರತಿ ತಿಂಗಳು ೮೦-೧೦೦ ಜನರಿಗೆ ರೇಷನ್ ಖಾಲಿ ಆಗಿದೆ. ಮೇಲಿಂದಲೇ ಕಡಿಮೆ ಕಳುಹಿಸಿದ್ದಾರೆ, ಮುಂದಿನ ತಿಂಗಳು ಬನ್ನಿ ಎಂದು ಕಳುಹಿಸುತ್ತಿದ್ದಾರೆ, ಅವರು ಬಿಳಿ ಹಾಳೆಯಲ್ಲಿ ಬರೆದುಕೊಟ್ಟಿರುವ ಕಾಗದ ಕಳೆದರೆ ಮುಗಿತು ಅಂತವರಿಗೆ ರೇಷನ್ ಇಲ್ಲ, ಆದ್ದರಿಂದ ಕೂಡಲೇ ವಿತರಕರ ಲೈಸನ್ಸ್ ರದ್ದು ಮಾಡಬೇಕು.ಆತ್ಮಾನಂದ ಭೈರೋಡಗಿ, ಆಹೇರಿ ಗ್ರಾಮದ