)
ಕಾರ್ಕಳ: ಮಲೇಷಿಯಾದ ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹2.25 ಲಕ್ಷ ಪಡೆದು, ನಕಲಿ ದಾಖಲೆಗಳನ್ನು ನೀಡಿ ವಂಚಿಸಿರುವುದಾಗಿ ಆರೋಪಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಿಯ್ಯಾರು ಗ್ರಾಮದ ಪ್ರಕಾಶ ಆಚಾರ್ಯ (34) ಅವರು ನೀಡಿದ ದೂರಿನಂತೆ, ಬಜಗೋಳಿಯ ಕೃಷ್ಣ ಕುಲಾಲ್ ಹಾಗೂ ಬೆಂಗಳೂರಿನ ಮೋಹಿತ್ ಎಂಬವರು ಅವರನ್ನು ಸಂಪರ್ಕಿಸಿ ಮಲೇಷಿಯಾದ ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಸಂಬಂಧ ಉದ್ಯೋಗದ ಜಾಹೀರಾತಿನ ಫೋಟೊವನ್ನು ಮೊಬೈಲ್‌ಗೆ ಕಳುಹಿಸಿ, ದಾಖಲೆಗಳ ಸಿದ್ಧತೆ, ಮಲೇಷಿಯಾ ಪ್ರಯಾಣ ಹಾಗೂ ವೀಸಾ ವೆಚ್ಚಕ್ಕಾಗಿ ಹಣ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.ಆರೋಪಿಗಳ ಮಾತನ್ನು ನಂಬಿದ ಪ್ರಕಾಶ್ ಅವರು ಗೂಗಲ್ ಪೇ ಮೂಲಕ ಹಂತ ಹಂತವಾಗಿ ಕೃಷ್ಣ ಕುಲಾಲ್ ಅವರ ಖಾತೆಗೆ ₹1.40 ಲಕ್ಷ ಹಾಗೂ ಮೋಹಿತ್ ಅವರ ಖಾತೆಗೆ ₹85 ಸಾವಿರ, ಒಟ್ಟು ₹2.25 ಲಕ್ಷ ವರ್ಗಾವಣೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಸುಳ್ಳು ದಾಖಲೆಗಳನ್ನು ನೀಡಿ ನಂಬಿಸಿ ವಂಚಿಸಿದ್ದಾರೆ ಎಂಬ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ