ಮಹಾಶಿವರಾತ್ರಿಯಂದು ಚಿಕ್ಕಬಳ್ಳಾಪುರದಿಂದ ನಂದಿ ಗ್ರಾಮಕ್ಕೆ ಉಚಿತ ಆಟೋ ಸೌಲಭ್ಯ

KannadaprabhaNewsNetwork |  
Published : Feb 13, 2026, 01:15 AM IST
ಸಿಕೆಬಿ-3 ಸುದ್ದಿಗೋಷ್ಟಿಯಲ್ಲಿ  ಆನೆಮಡುಗು ಹರೀಶ್ ರೆಡ್ಡಿ ಮಾತನಾಡಿದರು | Kannada Prabha

ಸಾರಾಂಶ

ಶಿವನು ಸತ್ಯ, ನ್ಯಾಯ ಮತ್ತು ನಿರ್ಭಯತೆಯ ಪ್ರತೀಕ. ಸಂಕಷ್ಟದ ಸಂದರ್ಭದಲ್ಲಿಯೂ ಶಾಂತವಾಗಿರಲು ಮತ್ತು ಎಲ್ಲರ ಮೇಲೂ ಕರುಣೆ ತೋರಿಸಲು ಶಿವನ ಆದರ್ಶಗಳು ನಮಗೆ ಪಾಠ ಕಲಿಸುತ್ತವೆ. ಸಮಾಜದ ಕಲ್ಯಾಣ ಮತ್ತು ಸೌಹಾರ್ದತೆಗೆ ಶಿವನ ಸಂದೇಶಗಳು ಪ್ರೇರಣೆಯಾಗಿವೆ. ನಿಜವಾದ ದೈವಭಕ್ತಿ ಎಂದರೆ ಮಾನವಸೇವೆ. ಆ ನಿಟ್ಟಿನಲ್ಲಿ ನಂದಿ ರಥೋತ್ಸವದ ಅಂಗವಾಗಿ ಜನಸೇವೆಯ ರೂಪದಲ್ಲಿ ನನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನಕ್ಕೆ ಫೆಬ್ರವರಿ 16ರ ಮಹಾ ಶಿವರಾತ್ರಿಯಂದು ಬ್ರಹ್ಮರಥೋತ್ಸವ ಅಂಗವಾಗಿ ಭಕ್ತರಿಗೆ ನಗರದ ಮೂರು ಭಾಗಗಳಿಂದ ನಂದಿ ಗ್ರಾಮಕ್ಕೆ ಉಚಿತ ಆಟೋ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶ್ರೀ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಮತ್ತು ಸಮಾಜ ಸೇವಕ ಹಾಗೂ ಬಿಜೆಪಿ ಯುವ ಮುಖಂಡ ಆನೆ ಮಡುಗು ಹರೀಶ್ ರೆಡ್ಡಿ ತಿಳಿಸಿದ್ದಾರೆ.

ಗುರುವಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಹಾ ಶಿವರಾತ್ರಿ ಹಾಗೂ ನಂದಿ ಜಾತ್ರೋತ್ಸವ ಅಂಗವಾಗಿ ಉಚಿತ ಆಟೋ ಸೇವೆ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಭೋಗನಂದೀಶ್ವರ ರಥೋತ್ಸವವು ಪ್ರತಿವರ್ಷ ಭಕ್ತಿಭಾವದಿಂದ ನಡೆಯುತ್ತದೆ. ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ಇತರೆ ಜಿಲ್ಲೆ ಮತ್ತ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಕ್ತಿ ಪ್ರದರ್ಶಿಸುತ್ತಾರೆ. ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ಖಾಸಗಿ ಬಸ್ ನಿಲ್ದಾಣದಿಂದ 10 ಆಟೋಗಳು, ಜೂನಿಯರ್ ಕಾಲೇಜು ನಿಲ್ದಾಣದಿಂದ 10 ಆಟೋಗಳು ಹಾಗೂ ನಂದಿ ಕ್ರಾಸ್‌ನಿಂದ 5 ಆಟೋಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಹಾಶಿವರಾತ್ರಿಯಿಂದ ಮರುದಿನದ ರಥೋತ್ಸವದವರೆಗೆ ಎರಡು ದಿನಗಳ ಕಾಲ ಈ ಉಚಿತ ಆಟೋ ಸೇವೆ ಲಭ್ಯವಿರುತ್ತದೆ. ಶಿವರಾತ್ರಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಹಾಗೂ ಮರುದಿನ ಜಾತ್ರಾ ಮಹೋತ್ಸವದಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಆಟೋ ಸೌಲಭ್ಯ ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು.

ಶಿವನು ಸತ್ಯ, ನ್ಯಾಯ ಮತ್ತು ನಿರ್ಭಯತೆಯ ಪ್ರತೀಕ. ಸಂಕಷ್ಟದ ಸಂದರ್ಭದಲ್ಲಿಯೂ ಶಾಂತವಾಗಿರಲು ಮತ್ತು ಎಲ್ಲರ ಮೇಲೂ ಕರುಣೆ ತೋರಿಸಲು ಶಿವನ ಆದರ್ಶಗಳು ನಮಗೆ ಪಾಠ ಕಲಿಸುತ್ತವೆ. ಸಮಾಜದ ಕಲ್ಯಾಣ ಮತ್ತು ಸೌಹಾರ್ದತೆಗೆ ಶಿವನ ಸಂದೇಶಗಳು ಪ್ರೇರಣೆಯಾಗಿವೆ. ನಿಜವಾದ ದೈವಭಕ್ತಿ ಎಂದರೆ ಮಾನವಸೇವೆ. ಆ ನಿಟ್ಟಿನಲ್ಲಿ ನಂದಿ ರಥೋತ್ಸವದ ಅಂಗವಾಗಿ ಜನಸೇವೆಯ ರೂಪದಲ್ಲಿ ನನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಹರಿಕೃಷ್ಣ ಫೌಂಡೇಶನ್ ನ ಮುರಳಿ, ಕೇಶವ ರೆಡ್ಡಿ, ವಿನಯ್, ನಾಗಾರ್ಜುನ್, ಹರೀಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿಮಾನಿಗಳಿಂದ ಸಂಭ್ರಮಾಚರಣೆ
ಜನಪ್ರತಿನಿಧಿಗಳಿಂದ ಮಾದಿಗ ಸಮುದಾಯದ ಕಡೆಗಣನೆ: ಸಿ.ಶ್ರೀನಿವಾಸ್