ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳ ಉಚಿತ ವಿತರಣೆ

KannadaprabhaNewsNetwork |  
Published : Jul 20, 2025, 01:15 AM IST
ಫೊಟೋ: ೧೯ಪಿಟಿಆರ್-ಮೀನುಮೀನುಗಾರಿಕೆ ಇಲಖೆಯಿಂದ ಉಚಿತ ಮೀನು ಮರಿ ವಿತರಿಸಲಾಯಿತು. | Kannada Prabha

ಸಾರಾಂಶ

ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ೩೦ ಮಂದಿಗೆ ಮೀನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆರೆಗಳನ್ನು ಹೊಂದಿರುವ ೫೦೦ ಮಂದಿಗೆ ಉಚಿತ ಮೀನು ಕೊಡುವ ಉದ್ದೇಶ ಇಟ್ಟುಕೊಂಡಿದ್ದೇವೆ. ಮೀನಿನ ಕೃಷಿಯ ಕುರಿತು ಇನ್ನಷ್ಟು ಮಾಹಿತಿ, ಜಾಗೃತಿ ಮಾಡುವ ಅಗತ್ಯವಿದೆ ಎಂದು ಅಶೋಕ್‌ ರೈ ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಜಲ ಸಂಕುಲ ಉಳಿಸುವ ನಿಟ್ಟಿನಲ್ಲಿ ನಾವು ಮೀನುಗಳನ್ನು ಸಾಕುವ ಅಗತ್ಯವಿದೆ. ಕೃಷಿಯ ಜೊತೆಗೆ ಒಳನಾಡು ಮೀನುಗಾರಿಕೆಯ ಕಡೆಗೂ ಗಮನಹರಿಸಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.ಮೀನುಗಾರಿಕೆ ಇಲಾಖೆಯಿಂದ ಒಳನಾಡು ಜಲಕೃಷಿ ಪ್ರಾತ್ಯಕ್ಷಿಕೆಗಾಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಉಚಿತ ಮೀನು ಮರಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ೩೦ ಮಂದಿಗೆ ಮೀನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆರೆಗಳನ್ನು ಹೊಂದಿರುವ ೫೦೦ ಮಂದಿಗೆ ಉಚಿತ ಮೀನು ಕೊಡುವ ಉದ್ದೇಶ ಇಟ್ಟುಕೊಂಡಿದ್ದೇವೆ. ಮೀನಿನ ಕೃಷಿಯ ಕುರಿತು ಇನ್ನಷ್ಟು ಮಾಹಿತಿ, ಜಾಗೃತಿ ಮಾಡುವ ಅಗತ್ಯವಿದೆ ಎಂದು ಹೇಳಿದರು.ನಾವು ಕೃಷಿಕ ಎನ್ನಲು ಹೆಮ್ಮೆ ಪಡಬೇಕು. ದೇಶ ಆರ್ಥಿಕವಾಗಿ ಕೃಷಿಯ ಮೇಲೆಯೇ ನಿಂತಿರುವುದು. ನಮ್ಮ ಆಚಾರ-ವಿಚಾರಗಳು ಕೃಷಿಯೊಂದಿಗೆ ಬೆರೆತುಕೊಂಡಿದೆ. ಜತೆಗೆ ಉದ್ಯಮಗಳೂ ಬೆಳೆಯಬೇಕು. ಮಕ್ಕಳಿಗೆ ಉದ್ಯೋಗ ಸಿಗಬೇಕು. ಅಭಿವೃದ್ಧಿಯ ದೃಷ್ಟಿಯಿಂದ ಕೃಷಿಕರ ಸಲಹೆ-ಸೂಚನೆಗಳೂ ಬೇಕು ಎಂದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಮೀನುಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ಮಂಜುಳಾ ಸಿ. ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಎಂ.ಚಂದ್ರಪ್ಪರಿಂದ ಸರ್ಕಾರಿ ಗುಡ್ಡ ಕಬಳಿಕೆ
ಇಂದು ಸ್ತುತಿ ಶಂಕರ- ಸ್ತೋತ್ರ ಮಹಾ ಸಮರ್ಪಣೆ