ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಸಾಧು ನಿರಂಜನ ಸಮುದಾಯ ಭವನದಲ್ಲಿ ಅನಿಕೇತನ ವಿಕಲಚೇತನರ ಸಂಸ್ಥೆ ಮಹಾಲಿಂಗಪುರ ವತಿಯಿಂದ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ವಿದ್ಯುತ್ ಚಾಲಿತ ಸೈಕಲ್ ಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಮಾತನಾಡಿ, ವಿಕಲಚೇತನರಿಗೆ ಸಿಗುವ ಅವಕಾಶ ಮತ್ತು ಹಕ್ಕನ್ನು ಯಾರೂ ಕಸಿದುಕೊಳ್ಳದೆ ಅವರಿಗೆ ಸಾಧ್ಯವಾದಷ್ಟು ಸೌಲಭ್ಯವನ್ನು ತಲುಪಿಸಬೇಕೆಂದರು.ಇಳಕಲ್ ನ ಆಶಾದೀಪ ಸಂಸ್ಥೆಯ ಅಧ್ಯಕ್ಷ ರಘು ಹುಬ್ಬಳ್ಳಿ ಮಾತನಾಡಿ, ವಿಕಲಚೇತನರ ಸಂಸ್ಥೆ ಬೆಳೆಯಲು ಅನೇಕರು ಶ್ರಮ ಪಟ್ಟಿದ್ದಾರೆ. ಸಂಸ್ಥೆ ಅನೇಕ ಅಂಗವಿಕಲರಿಗೆ ಸೌಲಭ್ಯ ಒದಗಿಸಿದೆ. ಅಂಗವಿಕಲರಿಗೆ ಅನುಕೂಲ ಮಾಡಿಕೊಡುವಲ್ಲಿ ಮಾಜಿ ಸಚಿವೆ ಉಮಾಶ್ರೀಯವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ವಿಕಲಚೇತನರ ಜಿಲ್ಲಾಧ್ಯಕ್ಷ ರಾಜು ತೇರದಾಳ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಗಳಾದ ತಾಲೂಕಿನ ಎಂಆಡಬ್ಲು ಶಬ್ಬೀರ್ ಪಕಾಲಿ, ಅಂತಾರಾಷ್ಟ್ರೀಯ ಕ್ರೀಡಾಪಟು ಶೇಖರ ಕಾಕಂಡಕಿ, ಸಮುದಾಯ ಸಂಘಟನಾಧಿಕಾರಿ ಚಿದಾನಂದ ಮಠಪತಿ, ಬೀದಿ ವ್ಯಾಪಾರ ಸಂಘದ ಜಿಲ್ಲಾಧ್ಯಕ್ಷ ಮನೋಹರ ಕಲಾಲ, ಪತ್ರಕರ್ತ ರಾಜೇಂದ್ರ ನಾವಿ ಮಾತನಾಡಿದರು.30 ವಿಕಲಚೇತನರಿಗೆ ವಿದ್ಯುತ್ ಚಾಲಿತ ಸೈಕಲ್ ವಿತರಿಸಲಾಯಿತು. ಅತಿಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ಸಿದ್ದು ಸವದಿ ಅವರು ವಿಕಲಚೇತನರಿಗೆ ನೀಡುವ ಸೈಕಲ್‌ಗಳನ್ನು ಉದ್ಘಾಟಿಸಿದರು.
ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಮಹಾಲಿಂಗ ಮಾಳಿ, ಮುಖಂಡ ಮಹಾಲಿಂಗಪ್ಪ ಭಜಂತ್ರಿ, ಸ್ಥಳೀಯ ಅನಿಕೇತನ ವಿಕಲಚೇತನರ ಸಂಸ್ಥೆಯ ಅಧ್ಯಕ್ಷ ಸಣ್ಣಬಸು ಹೋಳಗಿ, ಲಕ್ಷ್ಮಣ ಬನಾಜ, ಅಮೃತಾ ಹುಬ್ಬಳ್ಳಿ, ಆಶಿಕ್ ಬರಗಿ, ಕೃಷ್ಣಾ ಮಾಲಬಸರಿ, ಮಲ್ಲಪ್ಪ ಕಮತಗಿ, ಸದಾಶಿವ ಮಹಾಲಿಂಗ ಸೇರಿದಂತೆ ಇತರರಿದ್ದರು. ಪತ್ರಕರ್ತರಾದ ನಾರಣಗೌಡ ಉತ್ತಂಗಿ ನಿರೂಪಿಸಿದರು. ರಾಜೇಂದ್ರ ನಾವಿ ವಂದಿಸಿದರು.