ಕನ್ನಡಪ್ರಭ ವಾರ್ತೆ ಹಲಗೂರು
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಬೆಂಗಳೂರಿನ ವಿಜಯ ಸಂಜೆ ಕಾಲೇಜು ಉಪ ಪ್ರಾಂಶುಪಾಲ ಡಾ.ಶಾಂತರಾಜು ಮಾತನಾಡಿ, ಪ್ರತಿಯೊಬ್ಬರೂ ನಾನು ಎನ್ನುವ ಮನೋಭಾವ ಬಿಟ್ಟು ನಾವೂ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಇಂತಹ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವುದರಿಂದ ಸೇವಾ ಮನೋಭಾವ ಮೂಡುತ್ತದೆ. ಪಟ್ಟಣ ಪ್ರದೇಶಗಳ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ತಪ್ಪಿಸುವುದಕ್ಕಾಗಿ ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದರು.
ಶಿಬಿರದಲ್ಲಿ ಕಣ್ಣಿನ ಪರೀಕ್ಷೆಯನ್ನು ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ ವತಿಯಿಂದ ಸುಮಾರು 80 ಹೆಚ್ಚು ಕಣ್ಣಿನ ತಪಾಸಣೆ ನಡೆಸಲಾಗಿದೆ. ವಾಸವಿ ಆಸ್ಪತ್ರೆ ಬೆಂಗಳೂರು ಇವರಿಂದ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ . ಇದರಲ್ಲಿ ತೊಂದರೆ ಇದ್ದವರಿಗೆ ಆಸ್ಪತ್ರೆಗೆ ಬರುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ನಾವು ಆಸ್ಪತ್ರೆ ವೈದ್ಯರಲ್ಲಿ ನಮ್ಮ ರೈತರು ನಿಮ್ಮ ಬಳಿ ಬಂದಾಗ ನಿಮ್ಮಿಂದ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಕಡಿಮೆ ವೆಚ್ಚದಲ್ಲಿ ಅವರಿಗೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಗವಿಮಠದ ಷಡಕ್ಷರ ಸ್ವಾಮೀಜಿ ಸೇರಿದಂತೆ ಹಲವು ಮಠದ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಕಿಕ್ಕೇರಿ:
ದೇವಿಗೆ ಆಯುಧಗಳಿಗೆ ಅರಿಷಿಣ, ಕುಂಕುಮಗಳನ್ನು ಆಭರಣ, ವಾಹನಗಳಿಗೆ ಹಚ್ಚಿದರು. ಪುಷ್ಪಗಳನ್ನು ಇಟ್ಟು ಪುಷ್ಪಾರ್ಚನೆ ಮಾಡಿದರು. ಹಣ್ಣು, ಕಾಯಿ, ನೈವೇದ್ಯ ಅರ್ಪಿಸಲಾಯಿತು.
ಹೋಬಳಿಯಾದ್ಯಂತ ವಿವಿಧ ಅಂಗಡಿಗಳಲ್ಲಿ, ರೈತರು ಕೃಷಿ ಪರಿಕರ, ವಾಹನ ಮಾಲೀಕರು ವಾಹನಗಳನ್ನು ಶುಚಿಗೊಳಿಸಿ ಪೂಜಿಸಿ ಮೆರವಣಿಗೆ ಮಾಡಿದರು. ಸಿಹಿ ಹಂಚಿದರು. ಬೂದು ಗುಂಬಳ ಹೊಡೆದು ದೃಷ್ಟಿಪೂಜೆ ನೆರವೇರಿಸಿದರು.