ಜು.28 ರಂದು ಪಡುವಾರಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

KannadaprabhaNewsNetwork | Published : Jul 25, 2024 1:15 AM

ಸಾರಾಂಶ

ನಾರಾಯಣ ಹೆಲ್ತ್ ಕೇರ್, ಆರ್ಯ ಆಸ್ಪತ್ರೆ,ಸ್ವರ್ಶ ಕಣ್ಣಿನ ಆಸ್ಪತ್ರೆ, ಮಾನಸ ಆರ್ಥೋಪಿಡಿಕ್ ಆಸ್ಪತ್ರೆ, ಮಾತೃಶ್ರೀ ಡೆಂಟಲ್ ಕ್ಲಿನಿಕ್,ಎಮಿನೆನ್ಸ್ ಔಟ್ ಪೆಸ್ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಮಧುಮೇಹ, ರಕ್ತದೊತ್ತಡ, ನೇತ್ರ, ಕೀಲು ಮತ್ತು ಮೂಳೆ, ದಂತ ತಪಾಸಣೆ, ಡಾ.ಎ.ಎಸ್. ಪೂರ್ಣಿಮಾ ಅವರಿಂದ ಗರ್ಭಕೋಶದ ತೊಂದರೆ, ಮುಟ್ಟಿನ ಸಮಸ್ಯೆ ತಪಾಸಣೆ ನಡೆಲಾಗುವುದು. ಅಗತ್ಯವಿರುವರಿಗೆ ಕನ್ನಡಕಗಳನ್ನು ಕೂಡ ವಿತರಿಸಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ, ಭೂಮಿಗಿರಿ ನಾರಾಯಣಪ್ಪ ಸಾಂಸ್ಕೃತಿಕ ಪ್ರತಿಷ್ಠಾನ, ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ವತಿಯಿಂದ ಜು.28 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪಡುವಾರಹಳ್ಳಿ ಶ್ರೀ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಎನ್. ಬೆಟ್ಟೇಗೌಡ ತಿಳಿಸಿದ್ದಾರೆ.

ನಾರಾಯಣ ಹೆಲ್ತ್ ಕೇರ್, ಆರ್ಯ ಆಸ್ಪತ್ರೆ,ಸ್ವರ್ಶ ಕಣ್ಣಿನ ಆಸ್ಪತ್ರೆ, ಮಾನಸ ಆರ್ಥೋಪಿಡಿಕ್ ಆಸ್ಪತ್ರೆ, ಮಾತೃಶ್ರೀ ಡೆಂಟಲ್ ಕ್ಲಿನಿಕ್,ಎಮಿನೆನ್ಸ್ ಔಟ್ ಪೆಸ್ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಮಧುಮೇಹ, ರಕ್ತದೊತ್ತಡ, ನೇತ್ರ, ಕೀಲು ಮತ್ತು ಮೂಳೆ, ದಂತ ತಪಾಸಣೆ, ಡಾ.ಎ.ಎಸ್. ಪೂರ್ಣಿಮಾ ಅವರಿಂದ ಗರ್ಭಕೋಶದ ತೊಂದರೆ, ಮುಟ್ಟಿನ ಸಮಸ್ಯೆ ತಪಾಸಣೆ ನಡೆಲಾಗುವುದು. ಅಗತ್ಯವಿರುವರಿಗೆ ಕನ್ನಡಕಗಳನ್ನು ಕೂಡ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಉದ್ಘಾಟನೆಗೆ ಗಣ್ಯರ ದಂಡು:

ಅಂದು ಬೆಳಗ್ಗೆ 10ಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ.ಸದಾನಂದ ಜ್ಯೋತಿ ಬೆಳಗಿಸುವರು. ಸಾಹಿತಿ ಡಾ.ಸಿಪಿಕೆ ಅಧ್ಯಕ್ಷತೆ ವಹಿಸುವರು. ಶಾಸಕರಾದ ಜಿ.ಟಿ. ದೇವೇಗೌಡ, ಕೆ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಎಲ್. ನಾಗೇಂದ್ರ, ಪಾಲಿಕೆ ಮಾಜಿ ಸದಸ್ಯರಾದ ನಮ್ರತಾ ರಮೇಶ್, ಭಾಗ್ಯ ಮಹದೇಶ್, ವರಿಷ್ಠ ಕಾರ್ಮಿಕ ಅಧಿಕಾರಿ ವಿಷ್ಣುಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಲೆಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಭೈರಿ, ಜಿಲ್ಲಾ ರಾಜ್ಯಪಾಲ ಸಿರಿಬಾಲು, ಸಾಹಿತ್ಯ ಲೋಕ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಜನಹಿತ ಸಂಘದ ಅಧ್ಯಕ್ಷ ಎಂ. ಭೈರಪ್ಪ, ಪಡುವಾರಹಳ್ಳಿ ಗ್ರಾಮಾಭ್ಯುದಯ ಟ್ರಸ್ಟ್ ಅಧ್ಯಕ್ಷ ಎಂ. ಮಹದೇವಸ್ವಾಮಿ, ಉಪಾಧ್ಯಕ್ಷ ಎಸ್. ರಾಮು ಮುಖ್ಯ ಅತಿಥಿಗಳಾಗಿರುವರು. ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಪ್ರಾಸ್ತಾವಿಕ ಭಾಷಣ ಮಾಡುವರು. ಅಲೆಯನ್ಸ್ ಕ್ಲಬ್ ಕಾರ್ಯದರ್ಶಿ ಲಕ್ಷ್ಮೀದೇವಿ, ಖಜಾಂಚಿ ಎಂ.ಎನ್. ಚಂದ್ರಶೇಖರ್ ಉಪಸ್ಥಿತರಿರುವರು.

ಐವರಿಗೆ ಪ್ರಶಸ್ತಿ ಪ್ರದಾನ:

ವೈದ್ಯ ಹಾಗೂ ಪತ್ರಿಕಾ ದಿನದ ಅಂಗವಾಗಿ ಅಂಶಿ ಪ್ರಸನ್ನಕುಮಾರ್- ಸಾಹಿತ್ಯರತ್ನ, ಡಾ.ಸದಾನಂದ, ಡಾ.ರಘುನಂದನ ಶೇಖರಪ್ಪ- ವೈದ್ಯರತ್ನ, ಸಿ.ಕೆ. ಮಹೇಂದ್ರ, ರಾಮ್- ಮಾಧ್ಯಮ ರತ್ನ ಪಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆಟ್ಟೇಗೌಡ ತಿಳಿಸಿದ್ದಾರೆ.

Share this article