- ಯುವಕ, ಯುವತಿಯರಿಗೆ ಶೇ.100 ಉದ್ಯೋಗ ಉದ್ದೇಶ - - - ಹರಿಹರ: ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) 18 ರಿಂದ 35 ವರ್ಷದೊಳಗಿನ ಎಲ್ಲ ವರ್ಗಗಳ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಶೇ.100 ಉದ್ಯೋಗಾವಕಾಶ ಕಲ್ಪಿಸಲು ಉಚಿತ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿ.ಇ. ಮತ್ತು ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಸಿಎನ್‍ಸಿ ಆಪರೇಟರ್ ಟರ್ನರ್, ಸಿಎನ್‍ಸಿ ಪ್ರೋಗ್ರಾಮರ್, ಸಿಎನ್‍ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಡಿಸೈನರ್- ಮೆಕಾನಿಕಲ್, ಇಂಡಸ್ಟ್ರಿಯಲ್ ಆಟೋಮೇಷನ್ ಸ್ಪೆಷಲಿಸ್ಟ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಟೆಕ್ನಿಷಿಯನ್, ಇಂಟರ್‌ನೆಟ್ ಆಫ್ ಥಿಂಗ್ (ಐಒಟಿ), ಸಿಎನ್‍ಸಿ ಪ್ರೋಗ್ರಾಮಿಂಗ್, ಕನ್ವೆಂಶನಲ್ ಮಿಲ್ಲಿಂಗ್ ಮಷಿನ್, ಪ್ರೊಡಕ್ಷನ್ ಎಂಜಿನಿಯರ್ (ಕ್ಯಾಡ್ ಕ್ಯಾಮ್), ಆಟೋಮೇಷನ್ ಅಂಡ್ ಕಂಟ್ರೋಲ್, ರಿವರ್ಸ್ ಎಂಜಿನಿಯರಿಂಗ್, ತ್ರೀಡಿ ಪ್ರಿಂಟಿಂಗ್ (ಆರ್‌ಪಿಪಿಟಿ), ಸಿಎನ್‍ಸಿ ಮ್ಯಾನುಫ್ಯಾಕ್ಚರಿಂಗ್ ಅಂಡ್ ಮಷಿನಿಂಗ್, ವ್ಯಾಲಿಡೇಷನ್ ಲ್ಯಾಬ್, ರಿಯಾಲಿಟಿ ಲ್ಯಾಬ್, ಪ್ರೊಡಕ್ಟ್ ಡಿಸೈನ್ ಅಂಡ್ ಡೆವಲಪ್‌ಮೆಂಟ್ ಮತ್ತು ಆಪರೇಷನ್, ಮಿಲ್ಲರ್, ಗ್ರೈಂಡರ್, ಟೂಲ್ ರೂಮ್ ಮಷಿನಿಷ್ಟ್ ಕೋರ್ಸ್‍ಗಳಲ್ಲಿ ಅಲ್ಪಾವಧಿ ತರಬೇತಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು.
ತರಬೇತಿ ಮುಗಿದ ನಂತರ ಉದ್ಯೋಗ ಅವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ಸೆ.30 ಅರ್ಜಿ ಸಲ್ಲಿಸಲು ಕೊನೆ ದಿನ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೆಎಸ್‍ಆರ್‌ಟಿಸಿ ಡಿಪೋ ಹತ್ತಿರ, ಹರ್ಲಾಪುರ ಕೈಗಾರಿಕಾ ಪ್ರದೇಶ, ಹರಿಹರ. ಮೊ. 90353- 72971, 96110- 25932, 88844- 88202 ಇಲ್ಲಿಗೆ ಸಂಪರ್ಕಿಸಲು ಪ್ರಾಚಾರ್ಯ ಶಿವಕುಮಾರ್ ಕೋರಿದ್ದಾರೆ.- - -(ಸಾಂದರ್ಭಿಕ ಚಿತ್ರ)