ಪಾಂಡವಪುರ:
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮವನ್ನು ಬೆಳಗ್ಗೆ 6 ರಿಂದ 7ರವರೆಗೆ ಎಲ್ಲಾ ಸಾರ್ವಜನಿಕ ಬಂಧುಗಳಿಗೂ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯಾವುದೇ ವಯಸ್ಸಿನ ಭೇದವಿಲ್ಲದೆ ಭಾಗವಹಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗಬೇಕೆಂಬುದೇ ಇದರ ಮೂಲ ಆಶಯವಾಗಿದೆ.
ನುರಿತ ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ನೇತ್ರ ತಜ್ಞೆ, ಡಾ.ಎಚ್.ಆರ್.ಮಣಿಕರ್ಣಿಕ, ಎಲ್ಲರಿಗೂ ಯೋಗ ಇಂದಿನ ದಿನಮಾನದಲ್ಲಿ ಅಗತ್ಯವಾಗಿದೆ. ಆಸ್ಪತ್ರೆಗಳು, ವೈದ್ಯರಿಂದ ಹಾಗೂ ದುಬಾರಿ ಔಷಧಿಗಳಿಂದ ದೂರವಿರಲು ನಾವೆಲ್ಲರೂ ಯೋಗ, ಧ್ಯಾನ, ಪ್ರಾಣಾಯಾಮವನ್ನು ನಿರಂತರವಾಗಿ ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಯೋಗ ಪ್ರಾತ್ಯಕ್ಷಿತೆಯನ್ನು ಶಿವ ಪ್ರಿಯ ಮಾಡಿದರು. ಪತಂಜಲಿ ಯೋಗ ಸಮಿತಿ ಸಾಯಿ ಮಂದಿರ ಅಧ್ಯಕ್ಷ ಜಯರಾಮು ಮಾತನಾಡಿದರು. ಯೋಗ ತರಬೇತಿದಾರನಾದ ಮಂಜುನಾಥ ಹಾಗೂ ಪ್ರಭಾವತಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿ.ಎಚ್.ವೆಂಕಟೇಶ್ ಪ್ರಾರ್ಥಿಸಿ, ಶಿಕ್ಷಕರಾದ ಧನಂಜಯ ಎಚ್ ಸಿ, ಯೋಗ ಗೀತೆ ಹಾಡಿ ನಿರೂಪಣೆ ಮಾಡಿದರು. ಶ್ರೀ ರತ್ನಾಕರ ರವರು ವಂದನಾರ್ಪಣೆ ಮಾಡಿದರು.
ಪಾಂಡವಪುರ: ತಮಿಳುನಾಡು ರಾಜ್ಯದ ಕೊಯಮತ್ತೂರಿನಲ್ಲಿ ಈಚೆಗೆ ನಡೆದ 5ನೇ ವೆಟರಾನ್ಸ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ನ್ಯಾಷನಲ್ ಚಾಂಪಿಯನ್ಸ್ ಶಿಪ್ನಲ್ಲಿ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಸಿ.ಬಿ ಚಲುವೇಗೌಡರು 3 ಚಿನ್ನದ ಪದಕ ಪಡೆದಿದ್ದಾರೆ. 80ನೇ ವಯಸ್ಸಿನ ಭಾಗದಿಂದ ಭಾಗವಹಿಸಿ ಗುಂಡು ಎಸೆತ, ಶಾಟ್ಪಟ್ ಹಾಗೂ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಪದಕ ಪಡೆದಿದ್ದಾರೆ.