ಭಟ್ಕಳ: ತಾಲೂಕು ಕಸಾಪದಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಒಂದರಿಂದ ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಗಂಗಾಧರ ನಾಯ್ಕ, ಸ್ವಾತಂತ್ರ್ಯ ಎನ್ನುವುದು ಕೆಚ್ಚಿನ ಹೋರಾಟ, ತ್ಯಾಗ ಬಲಿದಾನದಿಂದ ಗಳಿಸಿಕೊಂಡಿದ್ದೇ ಹೊರತು ಅದು ಸುಮ್ಮನೆ ಬಂದಿರುವುದಲ್ಲ. ಬ್ರಿಟಿಷರು ಕೊಟ್ಟಿರುವುದಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರೆಲ್ಲರೂ ನಮಗೆ ಪ್ರಾತಃ ಸ್ಮರಣಿಯರು. ಅವರ ಸೇವೆಯಿಂದ ನಾವು ಪ್ರೇರಿತಾರಾಗಿ ದೇಶದ ಪ್ರಗತಿಗೆ ನಮ್ಮ ನೆಲೆಯಲ್ಲಿ ಕೊಡುಗೆ ನೀಡಬೇಕೆಂದರು.ಎಸ್ಡಿಎಂಸಿ ಅಧ್ಯಕ್ಷ ಹರೀಶ ದೇವಾಡಿಗ, ಶಾಲಾ ಮುಖ್ಯಾಧ್ಯಾಪಕ ಜನಾರ್ಧನ್ ಮೊಗೇರ ಮಾತನಾಡಿದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಸುಶೀಲ ಮೊಗೇರ್, ಸದಸ್ಯ ನಾಗರಾಜ್ ದೇವಾಡಿಗ, ನಿವೃತ್ತ ಶಿಕ್ಷಕರಾದ ಮಾಲತಿ ಕೆ., ಪುಷ್ಪ ನಾಯ್ಕ ಉಪಸ್ಥಿತರಿದ್ದರು.ಶಿಕ್ಷಕಿ ರಾಧಾ ದೇವಾಡಿಗ ನಿರ್ವಹಿಸಿದರು. ಜ್ಯೋತಿ ಹೊಸಮನಿ ಸ್ವಾಗತಿಸಿದರು. ಜಾನಕಿ ದೇವಾಡಿಗ ಬಹುಮಾನ ವಿತರಣೆ ನಿರ್ವಹಿಸಿದರೆ ಶಿಕ್ಷಕಿ ದೀಪಾ ಗೌಡ ವಂದಿಸಿದರು. ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿವಾರು ನಡೆದ ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆಯಲ್ಲಿ ಒಂದನೇ ತರಗತಿಯ ಮಾನ್ವಿತಾ ನಾಯ್ಕ ಪ್ರಥಮ, ವೈಷ್ಣವಿ ದೇವಾಡಿಗ ದ್ವಿತೀಯ, ನೇಹಾ ದೇವಾಡಿಗ ತ್ರತೀಯ, ಎರಡನೇ ತರಗತಿಯ ಭಾರತಿ ಮೊಗೇರ್ ಪ್ರಥಮ, ಗಾನವಿ ನಾಯ್ಕ ದ್ವಿತೀಯ, ಅಕ್ಷತಾ ನಾಯ್ಕ ತೃತೀಯ, ಮೂರನೇ ತರಗತಿಯ ಆಋಷಿ ಶೇಟ್ ಪ್ರಥಮ, ಯಾದವ ನಾಯ್ಕ ದ್ವಿತೀಯ, ಗಾನವಿ ನಾಯ್ಕ ತೃತೀಯ, ಸ್ಮರಣಶಕ್ತಿ ಸ್ಪರ್ಧೆಯಲ್ಲಿ ನಾಲ್ಕನೇ ತರಗತಿಯಲ್ಲಿ ಅನ್ವಿತಾ ನಾಯ್ಕ ಪ್ರಥಮ, ಹಿಮಾ ನಾಯ್ಕ ದ್ವಿತೀಯ, ತನಿಶ್ ಮೊಗೇರ್ ತೃತೀಯ, ಶಬ್ದ ಭಂಡಾರ ಸ್ಪರ್ಧೆಯಲ್ಲಿ ಐದನೇ ತರಗತಿಯ ಗ್ರೀಷ್ಮ ನಾಯ್ಕ್ ಪ್ರಥಮ, ಚಿರಾಗ್ ದೇವಾಡಿಗ ದ್ವಿತೀಯ, ಅಶ್ವಿಕ್ ನಾಯ್ಕ ತೃತೀಯ, ಸ್ವಾತಂತ್ರ್ಯ ಹೋರಾಟಗಾರರ ಹೆಸರಿಸುವ ಸ್ಪರ್ಧೆಯಲ್ಲಿ ಆರನೇ ತರಗತಿಯ ಪ್ರಧಾನ ಪ್ರಥಮ, ಸನ್ನಿಧಿ ದ್ವಿತೀಯ, ಅನ್ವಿತ ತೃತೀಯ, ಸ್ವತಂತ್ರ ದಿನಾಚರಣೆ ಭಾಷಣ ಸ್ಪರ್ಧೆಯಲ್ಲಿ ಏಳನೇ ತರಗತಿಯ ವಿದ್ಯಾದರ ಪ್ರಥಮ, ವಿಸ್ಮಿತ ದ್ವಿತೀಯ ಹಾಗೂ ವಿನೀಶ್ ತೃತೀಯ ಬಹುಮಾನ ಪಡೆದುಕೊಂಡರು.
ಭಟ್ಕಳ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಸಾಪದಿಂದ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.