ಸ್ವಾತಂತ್ರ್ಯಮಹಾತ್ಮಗಾಂಧಿಯ ಅಹಿಂಸಾತ್ಮಕ ಹೋರಾಟದ ಫಲ

KannadaprabhaNewsNetwork | Published : Aug 16, 2024 12:51 AM

ಸಾರಾಂಶ

ಭಾರತೀಯರ ಪಾಲಿಗೆ ೭೮ನೇ ಸ್ವಾತಂತ್ರ್ಯೋತ್ಸವ ಮರೆಯಲಾಗದ ದಿನವಾಗಿದೆ. ಭಾರತ ಇಂದು ವಿಶ್ವಕ್ಕೆ

ಕನ್ನಡಪ್ರಭವಾರ್ತೆ ಚಳ್ಳಕೆರೆ

ಭಾರತೀಯರ ಪಾಲಿಗೆ ೭೮ನೇ ಸ್ವಾತಂತ್ರ್ಯೋತ್ಸವ ಮರೆಯಲಾಗದ ದಿನವಾಗಿದೆ. ಭಾರತ ಇಂದು ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಸಂತೋಷಕ್ಕೆ ನಮ್ಮ ಪೂರ್ವಜರು ಮಾಡಿದ ತ್ಯಾಗ, ಬಲಿದಾನವೇ ಕಾರಣ. ಮಹಾತ್ಮಗಾಂಧಿಜಿಯವರ ಅಹಿಂಸಾತ್ಮಕ ಹೋರಾಟದ ಫಲವೇ ಈ ಸ್ವಾತಂತ್ರ್ಯೋತ್ಸವ. ನಾವೆಲ್ಲರೂ ಹಿರಿಯ ಸೇವೆ, ಆದರ್ಶಗಳನ್ನು ಮೈಗೂಡಿಸಿಕೊಂಡು ನವ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ಮಾಡೋಣವೆಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.

ಅವರು, ಗುರುವಾರ ನಗರ ಬಿ.ಎಂ. ಸರ್ಕಾರಿ ಪ್ರೌಢಶಾಲಾ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಾಡಿನ ಬಡ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆ ರೂಪಿಸಿದ್ದೇವೆ. ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವ ನಿಧಿ ಮುಂತಾದ ಯೋಜನೆಗಳು ಬಡ ಜನರನ್ನು ಸಂಕಷ್ಟದಿಂದ ಮುಕ್ತಗೊಳಿಸಿವೆ. ಪ್ರಸ್ತುತ ರಾಜ್ಯ ಸರ್ಕಾರ ಜನಪರ ಸರ್ಕಾರವಾಗಿ ರೂಪುಗೊಂಡಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 11 ಜನರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕ್ಷೇತ್ರದಿಂದ ಸುಧಾಮೂರ್ತಿ, ಕ್ರೀಡೆಯಿಂದ ಖೋ-ಖೋ ಪ್ರಶಾಂತ್, ಕೃಷಿ ಕ್ಷೇತ್ರ ದೇವರಪಾಲಯ್ಯ, ಮಾಧ್ಯಮ ಕ್ಷೇತ್ರ ಕೆ.ಎಂ. ಶಿವಸ್ವಾಮಿ, ತಾಲೂಕು ಪಂಚಾಯಿತಿ ಕಚೇರಿಯ ನರಸಿಂಹಪ್ಪ, ಆರೋಗ್ಯ ಇಲಾಖೆ ಡಾ. ಎನ್. ಕಾಶಿ, ಕಂದಾಯ ಇಲಾಖೆಯ ಗಿರೀಶ್, ಕುಡಿಯುವ ನೀರು ಇಲಾಖೆ ತಿಪ್ಪೇಸ್ವಾಮಿ, ಪೌರಕಾರ್ಮಿಕರಾದ ತಿಪ್ಪೇಸ್ವಾಮಿ, ನಾಗರಾಜು, ಉಮೇಶ್, ಪಾರ್ವತಮ್ಮ, ತಿಪ್ಪೇಸ್ವಾಮಿ, ಸಮಾಜ ಸೇವೆ ಸಿ. ಶಶಿಧರ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಇಒ ಶಶಿಧರ, ಬಿಇಒ ಕೆ. ಎಸ್. ಸುರೇಶ್, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಪೌರಾಯುಕ್ತ ಎಚ್. ಜಿ. ಜಗರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಎಲ್. ಲಿಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಯ್ಯ, ನಗರಸಭಾ ಸದಸ್ಯರಾದ ವೈ. ಪ್ರಕಾಶ್, ಟಿ. ಮಲ್ಲಿಕಾರ್ಜುನ್, ಎಸ್. ಜಯಣ್ಣ, ಶಿವಕುಮಾರ್, ಕವಿತಾ, ಸುಜಾತ, ಪ್ರಮೋದ್, ಶ್ರೀನಿವಾಸ್, ಎಂ. ನಾಗಮಣಿ, ಎಂ.ಜೆ. ರಾಘವೇಂದ್ರ, ಸಾವಿತ್ರಮ್ಮ, ಚಳ್ಳಕೆರೆಯಪ್ಪ, ಪಾಲಮ್ಮ, ನಾಮಿನಿ ಸದಸ್ಯರಾದ ಬಡಗಿಪಾಪಣ್ಣ, ಮಹಮ್ಮದ್ ಅನ್ವರ್, ನೇತಾಜಿ ಪ್ರಸನ್ನ, ಆರ್. ವೀರಭದ್ರಪ್ಪ, ನಟರಾಜು, ಕೃಷಿ ಅಧಿಕಾರಿ ಅಶೋಕ್, ಕಾರ್ಮಿಕ ಅಧಿಕಾರಿ ಕುಸುಮ, ಪಶುವೈದ್ಯಾಧಿಕಾರಿ ರೇವಣ್ಣ ಮುಂತಾದವರು ಉಪಸ್ಥಿತರಿದ್ದರು.

Share this article