ಕನ್ನಡಪ್ರಭ ವಾರ್ತೆ ಅರಕಲಗೂಡು
ಶಾಲಾ ಸಮಾಜ ವಿಜ್ಞಾನ ಶಿಕ್ಷಕರಾದ ರಮೇಶ್ ಮಾತನಾಡುತ್ತಾ, ಸ್ವಾತಂತ್ರ್ಯಕ್ಕಾಗಿ ಮಡಿದ ಯೋಧರ ಬಗ್ಗೆ ಮತ್ತು ಸ್ವಾತಂತ್ರ್ಯ ಗಳಿಸಿದ ವಿವರವನ್ನು ತಿಳಿಸಿದರು. ಈ ಮಧ್ಯೆ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಿನದ ಮಹತ್ವ ಕುರಿತು ಮಾತನಾಡಿದರು ಮತ್ತು ಸ್ವಾತಂತ್ರ್ಯ ದಿನಕ್ಕೆ ಸಂಬಂಧಿಸಿದ ನೃತ್ಯ ಮತ್ತು ಹಾಡುಗಾರಿಕೆ ನಡೆಯಿತು.
ಶಾಲಾ ತೋಟಗಾರಿಕಾ ಶಿಕ್ಷಣ ಶಿಕ್ಷಕರಾದ ಸಿದ್ದಮಲ್ಲಪ್ಪರವರು ಮಾತನಾಡುತ್ತಾ, ನಮಗೆ ದೊರಕಿರುವ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿ ಸ್ವಾತಂತ್ರದ ಬಗ್ಗೆ ಸ್ವರಚಿತ ಹಾಡನ್ನು ಕೂಡ ಹಾಡಿದರು. ಕನ್ನಡ ಭಾಷಾ ಶಿಕ್ಷಕರಾದ ನಾಗರಾಜ್ ಕೋಟೆಕರ್‌ರವರು ಮಾತನಾಡುತ್ತಾ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆಂತರಿಕ ಸ್ವಾತಂತ್ರ್ಯವೂ ಅಗತ್ಯವಿದೆ ಎಂದರು.ನಂತರ ಶಾಲೆಯಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮತ್ತು ಹಿಂದಿ ಭಾಷಾ ಅತಿಥಿ ಶಿಕ್ಷಕರನ್ನು ಹಾಗೂ ಇಲ್ಲಿಯ ತನಕ ಅಡುಗೆ ಮಾಡುತ್ತಿದ್ದ ಜಯಮ್ಮರವರನ್ನು ಹಾಗೂ ಶಾಲಾ ಆಯ ಆಗಿದ್ದ ಪಾರ್ವತಮ್ಮರವರನ್ನ ಮತ್ತು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟ ನಾಲ್ಕು ವಿದ್ಯಾರ್ಥಿ, ವಿದ್ಯಾರ್ಥಿನಿ ಯರನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಘವೇಂದ್ರರವರು ಮಾತನಾಡುತ್ತಾ ಕರ್ನಾಟಕದಲ್ಲಿ ಕನ್ನಡ ಭಾಷಾ ಮೀಸಲಾತಿಯನ್ನು ಹೆಚ್ಚಿಸಿ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರಕುವ ನಿಟ್ಟಿನಲ್ಲಿ ಹೋರಾಡಲಾಗುತ್ತಿದೆ ಎಂದರು.