- 2,12,000 ಗಾಳಿಕೆರೆ , ನಾರಾಯಿಣಿ ತಳಿ ಸೇಲ್ । ಒಟ್ಟು 200 ರಾಸುಗಳು ಹರಾಜಿಗೆ । 1ಕೋಟಿ ಸರ್ಕಾರಕ್ಕೆ ಆದಾಯ ನಿರೀಕ್ಷೆ
ಪಟ್ಟಣದ ಅಮೃತಮಹಲ್ ತಳಿ ಸಂವರ್ಧನ ಕೇಂದ್ರದಲ್ಲಿ ಬುಧವಾರ ರಾಸುಗಳ ಹರಾಜು ಪ್ರಕ್ರಿಯೆ ನಡೆಯಿತು.
ರಾಜ್ಯದ ಹಾವೇರಿ, ರಾಣಿಬೆನ್ನೂರು, ಶಿಕಾರಿಪುರ, ಚಿತ್ರದುರ್ಗ ಶಿವಮೊಗ್ಗ ಚಿಕ್ಕಮಗಳೂರು ಹಾಗೂ ಹಾಸನ ಮತ್ತಿತರ ಕಡಯಿಂದ ಆಗಮಿಸಿದ್ದ ನೂರಾರು ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.ಬೆಳಗಿನಿಂದ ಆರಂಭವಾದ ಈ ಹರಾಜು ಪ್ರಕ್ರಿಯೆಯಲ್ಲಿ ಅಜ್ಜಂಪುರ, ಲಿಂಗದಹಳ್ಳಿ ಬಾಸೂರು, ಚಿಕ್ಕಎಮಿಗನೂರು, ರಾಮಗಿರಿ, ಹಬ್ಬನಘಟ್ಟ, ಬಿಳುವಾಲ, ಬಿದರೆ ಕಾವಲು, ರಾಯಸಂದ್ರ ಈ 9 ಅಮೃತಮಹಲ್ ಕೇಂದ್ರಗಳಿಂದ ಇಲ್ಲಿಗೆ ಆಗಮಿಸಿದ್ದ ನೂರಾರು ರಾಸುಗಳನ್ನು ಕ್ರಮವಾಗಿ ವಿಂಗಡಿಸುವ ಮೂಲಕ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಎಲ್19 ಮತ್ತು 15 ಎಂಬ ಬೀಜದ ಓಬಳಾದೇವಿ ಹೋರಿಕರು 1,52,000ಸಾವಿರಕ್ಕೆ ಸೊರಬ ತಾಲೂಕಿನ ಹಿರೇಚೌಟಿಯ ರಾಜುಗೌಡರು ಪಡೆದುಕೊಂಡರು. ಒಟ್ಟು ಈಬಾರಿ 200 ಹೋರಿ ಕರುಗಳು, 16 ಬೀಜದ ಹೋರಿ ಹಾಗೂ 4 ಎತ್ತುಗಳನ್ನು ಹರಾಜು ಮಾಡಲಾಯಿತು.
ಪತ್ರಿಕೆಯೊಂದಿಗೆ ಮಾತನಾಡಿದ ಬೆಂಗಳೂರಿನ ಪಶುವೈದ್ಯ ಇಲಾಖೆ ನಿರ್ದೇಶಕ ಪಿ.ಶ್ರೀನಿವಾಸ್ ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ 3 ವರ್ಷದನ್ನು ಒಂದೇ ಬಾರಿ ಹರಾಜು ನಡೆಸಿದ್ದೆವು. ಅದರಲ್ಲಿ 406 ರಾಸುಗಳನ್ನು ಹರಾಜು ನಡೆಸಿದ್ದು ಅದರಲ್ಲಿ 2ಕೋಟಿ 6ಲಕ್ಷ ಆದಾಯ ಬಂತಿತ್ತು, ಈ ಬಾರಿ 200ರಾಸುಗಳನ್ನು ಹರಾಜು ನಡೆಸಲಾಗಿದ್ದು ಇದರಲ್ಲಿ 90ಲಕ್ಷದಿಂದ 1ಕೋಟಿ ವರೆಗೂ ಆದಾಯ ಬರುವ ನಿರೀಕ್ಷೆ ಇದೆ.
ರೈತರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹೆಚ್ಚಿನ ದರಗಳಿಗೆ ತಮ್ಮ ನೆಚ್ಚಿನ ರಾಸುಗಳನ್ನು ಖರೀದಿಸುವ ಮೂಲಕ ಈ ತಳಿ ಮಹತ್ವ ಹಾಗೂ ಕೃಷಿ ಚಟುವಟಿಕೆಯಲ್ಲಿ ಈ ತಳಿ ನೀಡುವ ಹೆಚ್ಚಿನ ಸಹಕಾರದ ಬಗ್ಗೆ ಅಭಿಪ್ರಾಯ ತಿಳಿಸಿದರು.ಹರಾಜು ಪ್ರಕ್ರಿಯೆಯಲ್ಲಿ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ಅಧಿಕಾರಿ ಡಾ.ರಾಘವೇಂದ್ರ, ಕ್ಷೇತ್ರದ ಅಧಿಕಾರಿ ಡಾ.ಪ್ರಭಾಕರ್, ರಾಜ್ಯ ವಲಯ ಜಂಟಿ ನಿರ್ದೇಶಕ ಡಾ.ವೀರಭದ್ರಯ್ಯ, ಚಿಕ್ಕಮಗಳೂರು ಜಿಲ್ಲೆಯ ಡಾ.ಮೋಹನ್, ಕಡೂರು ತಾಲೂಕು ಸಹಾಯಕ ನಿರ್ದೇಶಕ ಎಸ್.ಬಿ.ಉಮೇಶ್, ಅಜ್ಜಂಪುರ-ಕಡೂರು ತಾಲೂಕಿನ ಪಶು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
24ಬೀರೂರು1