ಅ.27ರಿಂದ ಧರೆಗೆ ದೊಡ್ಡವರು ಮಂಟೇಸ್ವಾಮಿ ಕಾವ್ಯ ವಾಚನ

KannadaprabhaNewsNetwork |  
Published : Oct 25, 2025, 01:00 AM IST
24ಕೆಎಂಎನ್ ಡಿ13 | Kannada Prabha

ಸಾರಾಂಶ

ನೀಲಗಾರರ ಪರಂಪರೆಯ ಶ್ರೇಯಸ್ಸು, ಸಂಸ್ಕೃತಿಯ ಉಳಿವು ಹಾಗೂ ಪರಂಜ್ಯೋತಿ ಮಂಟೇಸ್ವಾಮಿವರ ಕೃಪೆಗೆ ಈ ಸೇವೆಯನ್ನು ಅರ್ಪಿಸಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಧರೆಗೆ ದೊಡ್ಡವರು ಮಂಟೇಸ್ವಾಮಿ ಮಹಾಕಾವ್ಯ ಹಾಗೂ ಗುರು ಪರಂಪರೆಯನ್ನು ನಾಡಿಗೆ ಮತ್ತಷ್ಟು ಫಸರಿಸುವ ಹಿನ್ನೆಲೆಯಲ್ಲಿ ದೀಪಾವಾಳಿ ಕಾರ್ತಿಕ ಮಾಸದ ಅಂಗವಾಗಿ ಶ್ರೀರಾಚಪ್ಪಾಜಿ ಟ್ರಸ್ಟ್‌ನಿಂದ ಅ.27ರಿಂದ ನ.17ರವರಗೆ ಮಂಟೇಸ್ವಾಮಿ ಸಂಬಂಧಿಸಿದ ಮಠಗಳಲ್ಲಿ ಜಾನಪದ ಕಲಾವಿದರಿಂದ ಮಂಟೇಸ್ವಾಮಿ ಕಾವ್ಯ ವಾಚನ ನಡೆಯಲಿದೆ ಎಂದು ಆದಿ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಹಾಗೂ ಶ್ರೀಕಪ್ಪಡಿ ಕ್ಷೇತ್ರದ ಮಠಾಧೀಪತಿ ವರ್ಚಸ್ವಿ ಸಿದ್ದಲಿಂಗರಾಜೇ ಅರಸು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಅ.27,ನ.3, ನ.10, ನ.17ರ ನಾಲ್ಕು ಕಾರ್ತಿಕ ಸೋಮವಾರದಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆರೆಗೆ ಮಂಟೇಸ್ವಾಮಿ ಮಹಾಕಾವ್ಯವನ್ನು ಅದರ ಮೂಲ ಸ್ವರೂಪದಲ್ಲಿಯೇ ತಂಬೂರಿ ಶೈಲಿಯಲ್ಲಿ ಕಥೆ ವಾಚನ ಹಮ್ಮಿಕೊಳ್ಳಲಾಗಿದೆ.ಮಳವಳ್ಳಿ ಮಂಟೇಸ್ವಾಮಿ ಮಠದಲ್ಲಿ ಮಳವಳ್ಳಿ ಮಹದೇವಸ್ವಾಮಿ ತಂಡ, ಬಿಜಿಪುರ ಮಂಟೇಸ್ವಾಮಿ ಮಠದಲ್ಲಿ ಪೂರಿಗಾಲಿ ಮಹದೇವಸ್ವಾಮಿ ಮತ್ತು ತಂಡ, ಕಪ್ಪಡಿ ಕ್ಷೇತ್ರ ಮೈಸೂರು ಗುರುರಾಜ್‌ ತಂಡ, ಚಿಕ್ಕಲೂರು ಕ್ಷೇತ್ರದಲ್ಲಿ ಕೆಚ್ಚೇಪುರ ಸಿದ್ದರಾಜು ತಂಡ, ಆದಿ ಹೊನ್ನಾಯಕನಹಳ್ಳಿಯಲ್ಲಿ ಆಲ್ಕೆರೆ ಶಿವಕುಮಾರ್ ತಂಡ, ಕುರುಬವ ಕಟ್ಟೆಯಲ್ಲಿ ಕೈಲಾಶ್ ಮೂರ್ತಿ ತಂಡ, ಮುಟ್ಟನಹಳ್ಳಿ ತೋಪು ಕೊಳ್ಳತೂರು ನಾಗೇಶ್ ಮತ್ತು ತಂಡ, ದೊಡ್ಡಮ್ಮತಾಯಿ ತೋಪಿನಲ್ಲಿ ಬಿಜಿಪುರ ಕುಮಾರ ತಂಡ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ನೀಲಗಾರರ ಪರಂಪರೆಯ ಶ್ರೇಯಸ್ಸು, ಸಂಸ್ಕೃತಿಯ ಉಳಿವು ಹಾಗೂ ಪರಂಜ್ಯೋತಿ ಮಂಟೇಸ್ವಾಮಿವರ ಕೃಪೆಗೆ ಈ ಸೇವೆಯನ್ನು ಅರ್ಪಿಸಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವುದರ ಜೊತೆಗೆ ಕಾವ್ಯ ವಾಚನ ಸಮಯದಲ್ಲಿ ಭಕ್ತರು ಶಿಸ್ತು, ಶ್ರದ್ಧೆ, ಗೌರವದಿಂದ ಶ್ರೀಕ್ಷೇತ್ರದ ನಿಯಮ ಹಾಗೂ ಸಂಪ್ರದಾಯಗಳಿಗೆ ಗೌರವ ಕಾಪಾಡಬೇಕು ಎಂದು ಕೋರಿದ್ದಾರೆ.

ಇಂದು ವಿದ್ಯುತ್ ವ್ಯತ್ಯಯ

ಮಂಡ್ಯ:

66/11 ಕೆ.ವಿ ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಡಿ.ಸಿ.ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.25 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮರೀಗೌಡ ಬಡಾವಣೆ, ನಾಲ್ವಡಿ ಕೃಷ್ಣರಾಜ ಬಡಾವಣೆ, ಕ್ಯಾತುಂಗೆರೆ ಗ್ರಾಮ, ಕ್ಯಾತುಂಗೆರೆ ಬಡಾವಣೆ, ಸಿದ್ದೇಶ್ವರ ಬಡಾವಣೆ, ಚಾಮುಂಡೇಶ್ವರಿನಗರ, ಅನ್ನಪೂರ್ಣೇಶ್ವರಿನಗರ 1 ಮತ್ತು 2 ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮಂಡ್ಯ ಉಪವಿಭಾಗ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಬಸ್ಸುಗಳಲ್ಲಿ ಸುರಕ್ಷತೆಗೆ ಸರ್ಕಾರ ತಾಕೀತು - ಕರ್ನೂಲ್‌ ಬಸ್‌ ಬೆಂಕಿ ದುರಂತ ಎಫೆಕ್ಟ್‌
ಉದ್ಯಮಿಗಳ ಜತೆ ಡಿ.ಕೆ. ಶಿವಕುಮಾರ್‌ ಡಿನ್ನರ್‌ : ನಗರಾಭಿವೃದ್ಧಿ ಬಗ್ಗೆ ಚರ್ಚೆ