ನೀತಿ ಸಂಹಿತೆ ಹಿನ್ನೆಲೆ ನಗದು ವ್ಯವಹಾರಕ್ಕಿರಲಿ ಕಡಿವಾಣ:

KannadaprabhaNewsNetwork |  
Published : Mar 27, 2024, 01:07 AM IST
ಹೊಸದುರ್ಗದ ತಾಲೂಕು ಕಛೇರಿ  ಸಭಾಂಗಣದಲ್ಲಿ ಮಂಗಳವಾರ  ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬ್ಯಾಂಕರ್ಸ್‌, ಆಭರಣ ತಯಾರಕರು, ಮಾರಾಟಗಾರರು,  ಹೋಟೆಲ್‌, ಸಮುದಾಯಭವನ, ಪೆಟ್ರೋಲ್‌ ಬಂಕ್‌,  ಹಾಗೂ ಗಿರವಿ ದಲ್ಲಾಳಿಗಳ ಸಭೆ ಸಹಾಯಕ ಚುನಾವಣಾಧಿಕಾರಿ ಮಹೇಂದ್ರಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಹೊಸದುರ್ಗ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಬ್ಯಾಂಕರ್ಸ್‌, ಆಭರಣ ತಯಾರಕರು, ಮಾರಾಟ ಗಾರರು, ಹೋಟೆಲ್‌, ಸಮುದಾಯ ಭವನ, ಪೆಟ್ರೋಲ್‌ ಬಂಕ್‌ ಹಾಗೂ ಗಿರವಿ ದಲ್ಲಾಳಿಗಳ ಸಭೆಯು ಸಹಾಯಕ ಚುನಾವಣಾಧಿಕಾರಿ ಮಹೇಂದ್ರಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಆದೇಶದಂತೆ ಸಾಮಾನ್ಯ ವ್ಯಕ್ತಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಇಟ್ಟುಕೊಂಡು ಓಡಾಡುವಂತಿಲ್ಲ ಎಂದು ಹೊಸದುರ್ಗ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಹೇಂದ್ರಕುಮಾರ್‌ ತಿಳಿಸಿದರು.

ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಬ್ಯಾಂಕರ್ಸ್‌, ಆಭರಣ ತಯಾರಕರು, ಮಾರಾಟಗಾರರು, ಹೋಟೆಲ್‌, ಸಮುದಾಯ ಭವನ, ಪೆಟ್ರೋಲ್‌ ಬಂಕ್‌ ಹಾಗೂ ಗಿರವಿ ದಲ್ಲಾಳಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರು ನಗದು ವ್ಯವಹಾರಕ್ಕೆ ಕಡಿವಾಣ ಹಾಕಬೇಕು. ಬ್ಯಾಂಕ್‌ ಮೂಲಕವೇ ವ್ಯವಹಾರ ನಡೆಸಬೇಕು. ಚುನಾವಣಾ ಆಯೋಗ ವಿವಿಧ ಹಂತದಲ್ಲಿ ತನಿಖಾ ತಂಡಗಳನ್ನು ನಿಯೋಜನೆ ಮಾಡಿದ್ದು, ಎಲ್ಲಾ ಕಡೆಗಳಲ್ಲಿಯೂ ವೀಕ್ಷಣೆಯಲ್ಲಿರುತ್ತಾರೆ. ಹೆಚ್ಚಿನ ಹಣ ಇರುವುದು ಕಂಡು ಬಂದರೆ ಅಂಥ ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಅನಿಸಿದರೂ ಇದು ಆಯೋಗದ ಕ್ರಮವಾಗಿದೆ ಎಂದರು.

ಬ್ಯಾಂಕುಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ವರ್ಗಾವಣೆ ಮಾಡುವಾಗ, ವರ್ಷದಲ್ಲಿ ವಿರಳವಾಗಿ ವ್ಯವಹರಿಸುವ, ಶೂನ್ಯ ಠೇವಣಿಯ ಖಾತೆಗಳಿಗೆ ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ಹಣ ವರ್ಗಾವಣೆಯಾದರೆ ಅಂತಹ ಮಾಹಿತಿಯನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕಾದದ್ದು ಬ್ಯಾಂಕುಗಳ ಮುಖ್ಯಸ್ಥರ ಜವಾಬ್ದಾರಿಯಾಗಿದೆ ಸಭೆಯಲ್ಲಿದ್ದ ಬ್ಯಾಂಕುಗಳ ಮುಖ್ಯಸ್ಥರಿಗೆ ತಿಳಿಸಿದರು.

ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ಚುನಾವಣಾ ಕಾರ್ಯಕ್ರಮ ಅಥವಾ ಪಕ್ಷಗಳ ಸಭೆಗಳನ್ನು ನಡೆಸಲು ಅವಕಾಶ ನೀಡುವಾಗ ಕಲ್ಯಾಣ ಮಂಟಪದ ಮುಖ್ಯಸ್ಥರು ಕಾರ್ಯಕ್ರಮದ ಆಯೋಜಕರು ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಅಲ್ಲದೆ ಬಾಡಿಗೆಯನ್ನು ನಗದು ರೂಪದಲ್ಲಿ ಪಡೆಯದೆ ಚೆಕ್‌ ಅಥವಾ ಬ್ಯಾಂಕಿಂಗ್‌ ವರ್ಗಾವಣೆಯ ಮೂಲಕ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪೆಟ್ರೋಲ್‌ ಬಂಕ್‌ಗಳಲ್ಲಿ ಟೋಕನ್‌ ಪಡೆದು ವಾಹನಗಳಿಗೆ ಪೆಟ್ರೋಲ್‌, ಡಿಸೇಲ್‌ ಹಾಕುವುದು, ಪಕ್ಷಗಳ, ಅಥವಾ ಸ್ಪರ್ಧಿಗಳ ಬಾವುಟಗಳನ್ನು ವಾಹನಗಳಿಗೆ ಕಟ್ಟಿ ಕೊಂಡು ಗುಂಪಾಗಿ ಪೆಟ್ರೋಲ್‌, ಡಿಸೇಲ್‌ ಹಾಕಿಸುವುದು ಅಪರಾಧವಾಗುತ್ತದೆ. ಈ ನಿಟ್ಟಿನಲ್ಲಿ ಪೆಟ್ರೋಲ್‌ ಬಂಕ್‌ ಮಾಲೀಕರೂ ಎಚ್ಚರಿಕೆ ವಹಿಸಬೇಕು. ಹಾಗೆಯೇ ಲಾಡ್ಜ್ ಮಾಲೀಕರು ಮತದಾನ ನಡೆಯುವ ಹೊರಗಿನಿಂದ ಯಾರಾದರೂ ಬಂದವರು ಅಲ್ಲೇ ತಂಗಿದ್ದರೆ 48 ಗಂಟೆಯೊಳಗೆ ಅಂತವರನ್ನು ಲಾಡ್ಜ್‌ನಿಂದ ಕಳುಹಿಸ ಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಎಂಸಿಸಿ ನೋಡಲ್‌ ಅಧಿಖಾರಿಗಳು, ಸಹಾಯಕ ವೆಚ್ಚ ಪರಿವೀಕ್ಷಕರು, ಪುರಸಭೆ ಮುಖ್ಯಾಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರು, ಆಭರಣ ತಯಾರ ಕರು, ಮಾರಾಟಗಾರರು, ಹೋಟೆಲ್‌, ಸಮುದಾಯ ಭವನ, ಪೆಟ್ರೋಲ್‌ ಬಂಕ್‌ ಮಾಲೀಕರು ಹಾಗೂ ಗಿರವಿ ದಲ್ಲಾಳಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ