ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ಕ್ಕೂ ಮೊದಲು ಯುಪಿಎ ಸರ್ಕಾರದ ಅವಧಿಯಲ್ಲಿ ರೈತರು ಕಬ್ಬಿನ ಹಣ ಪಡೆಯಲು ವರ್ಷಗಟ್ಟಲೆ ಕಾಯಬೇಕಿತ್ತು. ಅಲ್ಲದೆ, ಸಕ್ಕರೆ ಕಾರ್ಖಾನೆಗಳು ಎಕ್ಸ್ ಮಿಲ್ ದರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದವು ಎಂದರು.ಈ ವರ್ಷವೂ ಎಫ್‌ಆರ್‌ಪಿ ಹೆಚ್ಚಳವಾಗಲಿದ್ದು, 2026ರ ಮೇ ತಿಂಗಳಲ್ಲಿ ಇದನ್ನು ₹365ಕ್ಕೆ ಹೆಚ್ಚಿಸಲಾಗಿದೆ. ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಬಲತೆಗಾಗಿ ಎಥೆನಾಲ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಈ ಹಿಂದೆ ಕೇವಲ 38 ಕೋಟಿ ಲೀಟರ್ ಇದ್ದ ಎಥೆನಾಲ್ ಖರೀದಿ ಈಗ 1200 ಕೋಟಿ ಲೀಟರ್‌ಗೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಕಬ್ಬು ಬೆಳೆಗಾರರಿಗೆ ಒಂದು ತಿಂಗಳಲ್ಲೇ ಹಣ ಪಾವತಿಯಾಗುತ್ತಿದೆ ಎಂದು ವಿವರಿಸಿದರು.ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಎಂದರೆ ಮಿನಿಮಮ್ ಸೆಲ್ಲಿಂಗ್ ಪ್ರೈಸ್ (ಕನಿಷ್ಠ ಮಾರಾಟ ಬೆಲೆ) ಎಂಬ ತಪ್ಪು ಅಭಿಪ್ರಾಯವಿದ್ದು, ಎಂಎಸ್‌ಪಿಗೂ ಹಾಗೂ ಎಫ್‌ಆರ್‌ಪಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಕ್ಟೋಬರ್ 12ರಂದು ಕೇಂದ್ರ ಸಚಿವಾಲಯ, ಪೆಟ್ರೋಲಿಯಂ ಸಚಿವಾಲಯ ಹಾಗೂ ರೈತ ಮುಖಂಡರು ಮತ್ತು ರಾಜ್ಯ ಸರ್ಕಾರದೊಂದಿಗೆ ಮಹತ್ವದ ಸಭೆ ನಡೆಯುವ ನಿರೀಕ್ಷೆಯಿದೆ. ರೈತರು ಪ್ರತಿಭಟನೆ ನಡೆಸುವ ಅಗತ್ಯವಿಲ್ಲದೆ, ದೆಹಲಿಗೆ ಬಂದು ಮುಕ್ತ ಚರ್ಚೆಯಲ್ಲಿ ಭಾಗವಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿದ ಅವರು, ಕರ್ನಾಟಕ ಸರ್ಕಾರವೂ ಎಫ್‌ಆರ್‌ಪಿ ಜತೆಗೆ ಎಸ್‌ಎಪಿ (ರಾಜ್ಯ ಸಲಹಾ ಬೆಲೆ)ಜಾರಿಗೆ ಗೊಳಿಸಬೇಕು ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಮೇಯರ್ ಪ್ರೀತಿ ಕಾಮಕರ್, ಉಪ ಮೇಯರ್ ಹನುಮಂತ ಕೊಂಗಾಲಿ, ಪಕ್ಷದ ಮುಖಂಡರಾದ ಗೀತಾ ಸುತಾರ ಇತರರಿದ್ದರು.