ದಾವಣಗೆರೆ: ಪ್ರತಿ ವರ್ಷ ಸೆ.4ರಂದು ವಿಶ್ವ ಪತ್ರಿಕಾ ವಿತರಕರ ದಿನ ಆಚರಣೆ ಮಾಡಲಾಗುತ್ತಿದೆ. ಆದರೆ, ಪತ್ರಿಕಾ ವಿತರಕರಿಗೆ ಅವಶ್ಯಕತೆ ಇರುವ ಸವಲತ್ತುಗಳು ಮಾತ್ರ ಸಿಗುತ್ತಿಲ್ಲ ಎಂದು ಹಿರಿಯ ಪತ್ರಿಕಾ ವಿತರಕ ಎ.ಎನ್.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ವಿತರಕರಾದ ನಾವು ಪ್ರತಿದಿನ ಮುಂಜಾನೆ ಕತ್ತಲು, ಮಳೆ, ಗಾಳಿ, ಚಳಿ ಎನ್ನದೇ ಪತ್ರಿಕೆಗಳನ್ನು ಮನೆ, ಕಚೇರಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುತ್ತಿದ್ದೇವೆ. ಕೋವಿಡ್ ಹಾವಳಿ ಸಮಯದಲ್ಲಿಯೂ ಜೀವದ ಹಂಗು ಲೆಕ್ಕಿಸದೇ ಮನೆಗಳಿಗೆ, ಕಚೇರಿಗಳಿಗೆ ಪತ್ರಿಕೆ ವಿತರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಪತ್ರಿಕಾ ವಿತರಕರಿಗೆ ₹10 ಕೋಟಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಎಲೆಕ್ಟ್ರಿಕಲ್ ಬೈಕ್ ಉಚಿತವಾಗಿ ನೀಡಬೇಕು. ದಾವಣಗೆರೆಯಲ್ಲಿ ವಿತರಕರಿಗೆ ಪತ್ರಿಕೆಗಳನ್ನು ವಿಂಗಡಿಸುವುದಕ್ಕೆ ಸರಿಯಾದ ಸೂಕ್ತ ಜಾಗವಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಸೂಕ್ತ ಸ್ಥಳ ಕಲ್ಪಿಸಿಕೊಡಬೇಕೆಂದು ಪತ್ರಿಕಾ ವಿತರಕರ ಪರವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
- - - -3ಕೆಡಿವಿಜಿ40ಃ: ಎ.ಎನ್.ಕೃಷ್ಣಮೂರ್ತಿ