ಕನ್ನಡಪ್ರಭ ವಾರ್ತೆ ವಿಜಯಪುರ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಆರ್ಥಿಕ ನೆರವು ಹಾಗೂ ಉತ್ತಮ ಗೌರವಧನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ರೈತ ಭಾರತ ಪಕ್ಷದ ಬೆಂಬಲ ಸೂಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಸಾವಿರಾರು ಆಶಾ ಕಾರ್ಯಕರ್ತೆಯರ ಹೋರಾಟವು ಈಗಾಗಲೇ ಏಳೆಂಟು ದಿನಗಳಿಂದ ಮುಂದುವರೆದಿದೆ. ಹೋರಾಟದಲ್ಲಿ ಭಾಗಿಯಾದ ಸುಮಾರು 18 ಕಾರ್ಯಕರ್ತೆಯರು ಅಸ್ವಸ್ಥರಾಗಿರುವ ವರದಿಗಳಿದ್ದು, ಸರ್ಕಾರ ಈಗಲಾದರೂ ತನ್ನ ಮೊಂಡುತನ ಮುಂದುವರೆಸದೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಶೀಘ್ರ ಪರಿಹಾರ ಘೋಷಿಸಬೇಕು. ನಿಮ್ಮ ಗ್ಯಾರಂಟಿಗಳ ಜೊತೆಗೆ ಆಶಾಕಾರ್ಯಕರ್ತೆಯರ ಬೇಡಿಕೆಯೂ ಒಂದು ಗ್ಯಾರಂಟಿಯಾಗಿ ಘೋಷಿಸಿ ಬಹುದಿನದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಬೃಹತ್ ಮಾನವ ಸರಪಳಿ ಸೇರಿದಂತೆ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದರೂ ಈ ಮೊಂಡುತನದ ಸರ್ಕಾರ ಕಾಟಾಚಾರಕ್ಕೆ ಮಾತ್ರ ಎರಡ್ಮೂರು ಸುತ್ತಿನ ಮಾತುಕತೆ ಮಾಡಿ ಕೈ ತೊಳೆದುಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಯಾವುದೇ ಆಶ್ವಾಸನೆ ನೀಡದೇ ಹಾರಿಕೆ ಉತ್ತರಗಳಿಂದ ಮಾತ್ರ ಅವರ ಬದುಕು ಹಸನಾಗುವುದಿಲ್ಲ. ನ್ಯಾಯಸಮ್ಮತವಾಗಿರುವ ಅವರ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.ಬೇಡಿಕೆಗಳಿಗೆ ಈಡೇರಿಸಬೇಕಾದ ಸರ್ಕಾರದ ಜವಾಬ್ದಾರಿಯಾಗಿದ್ದು, ವಿಳಂಬ ಏಕೆ ಮಾಡುತ್ತಿದೆ?. ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಇಲ್ಲಿಯವರೆಗೆ ಯಾವ ಕ್ರಮ ಕೈಗೊಳ್ಳಬೇಕೆನ್ನುವ ಸಾಮಾನ್ಯ ಜ್ಞಾನವಿಲ್ಲದಂತೆ ವರ್ತಿಸುತ್ತಿದೆ. ಹೋರಾಟ ತೀವ್ರಗೊಂಡರೂ ಸರ್ಕಾರ ಯಾವುದನ್ನು ತಲೆಕೆಡಿಸಿಕೊಳ್ಳದೇ ಗಾಡನಿದ್ರೆಗೆ ಜಾರಿದೆ. ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.ಆಶಾ ಕಾರ್ಯಕರ್ತೆಯರ ಹೋರಾಟ ಸರ್ಕಾರದ ವಿರುದ್ಧವಲ್ಲ, ಅವರ ಸಮಸ್ಯೆ, ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು. ಬೆಲೆ ಏರಿಕೆಯಿಂದ ಬದುಕು ನಡೆಸಲು ಕೇವಲ ₹5 ಸಾವಿರ ಸಾಲದು. ಅದಕ್ಕಾಗಿ ₹15 ಸಾವಿರ ಮಾಸಿಕ ಗೌರವಧನ ನೀಡಬೇಕೆನ್ನುವುದು ನ್ಯಾಯಸಮ್ಮತ ಬೇಡಿಕೆಯಾಗಿದೆ. ಇದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಹೋರಾಟದಿಂದ ಕಾರ್ಯಕರ್ತೆಯರ ಆರೋಗ್ಯದಲ್ಲಿ ಭಾರಿ ವ್ಯತ್ಯಾಸಗಳು ಆಗತ್ತಿವೆ. ಹೀಗೆ ಮುಂದುವರೆದರೇ ಚಳಿಗೆ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಲಿದ್ದು, ಸರ್ಕಾರದ ವಿರುದ್ಧ ಆಕ್ರೋಶಗಳು ಎದ್ದೇಳುವುದು. ಇದರಿಂದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬಿರಲಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಮಸ್ಯೆ ಬಗೆಹರಿಸಬೇಕು. ಈ ರೀತಿ ವಿಳಂಬ ಮಾಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವಂತದಲ್ಲ ಎಂದು ಎಚ್ಚರಿಸಿದರು.ರಾಜ್ಯದ ನಾನಾ ಭಾಗದಿಂದ ಬಂದಿರುವ ಆಶಾ ಕಾರ್ಯಕರ್ತೆಯರು ತಮ್ಮೊಂದಿಗೆ ಮಕ್ಕಳನ್ನು ಕರೆತಂದು ಪ್ರತಿಭಟನೆ ಮಾಡುತ್ತಿದ್ದಾರೆ. ಫುಟ್‌ಪಾತ್ ಮೇಲೆ ದಿನವಿಡೀ ಕಾಲಕಳೆಯುತ್ತಿರುವ ಆಶಾಕಾರ್ಯಕರ್ತೆಯರ ಆರೋಗ್ಯದಲ್ಲಿ ಭಾರಿ ವ್ಯತ್ಯಾಸಗಳಾತ್ತಿದ್ದು, ಚಳಿಯಿಂದಾಗಿ ಶೀತ, ಜ್ವರ, ಗಂಟಲುನೋವು, ಕೆಮ್ಮು, ತಲೆನೋವು, ಹೊಟ್ಟೆನೋವು, ಮೈಕೈ ನೋವುಗಳಿಂದ ಬಳುತ್ತಿದ್ದಾರೆ. ಹೆಚ್ಚುಕಮ್ಮಿಯಾದರೇ ಇದಕ್ಕೆ ಸರ್ಕಾರವೇ ನೇರ ಹೊಣೆ. ಹೋರಾಟಗಾರರಿಗೆ ಮೊದಲು ಚಳಿಯಿಂದ ರಕ್ಷಿಸುವ ಕೆಲಸವಾಗಬೇಕಾಗಿದ್ದು, ಸರ್ಕಾರ ಕೂಡಲ ಸಕಲ ವ್ಯವಸ್ಥೆ ಮಾಡಬೇಕು. ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಆಶಾಕಾರ್ಯಕರ್ತೆಯರಿಗೆ ಜೀವ ಭದ್ರತೆ ನೀಡದೇ ಹೋದರೇ ರೈತ ಭಾರತ ಪಕ್ಷ ರಾಜ್ಯಾದ್ಯಂತ ಉಗ್ರವಾಗಿ ಹೋರಾಟ ಮಾಡುವುದು.
-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ.