ಕನ್ನಡಪ್ರಭ ವಾರ್ತೆ, ಬೀರೂರು
ಮಾಯಕೊಂಡದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಬೀರೂರಿನ ಮಾರ್ಗಮಧ್ಯೆ ಕಾಂಗ್ರೆಸ್ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯ ಸರ್ಕಾರ ನನಗೆ ಮುಜರಾಯಿ ಮತ್ತು ಬಂದರು ಖಾತೆ ನೀಡಿದ್ದು, ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಮುಜ ರಾಯಿ ಇಲಾಖೆಗೆ ಒಳಪಟ್ಟ ದೇಗುಲಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಎಲ್ಲಿ ನಮ್ಮ ಹಿಂದುಳಿದ ದೇಗುಲಗಳು ಜಿರ್ಣೋದ್ದಾ ರದಲ್ಲಿ ಹಿಂದಿವೆ ಎಂದು ತಿಳಿದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಹ ದೇಗುಲಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ನಿಮ್ಮ ಕಡೂರು ಕ್ಷೇತ್ರದ ದೇಗುಲ ಗಳಿಗೆ ಮುಂದಿನ ದಿನಗಳಲ್ಲಿ ಭೇಟಿ ನೀಡಿ ಅಂತಹ ದೇಗುಲ ಗಳ ಜಿರ್ಣೋದ್ದಾರಕ್ಕಾಗಿ ಸರ್ಕಾರದಿಂದ ಅನುದಾನ ಒದಗಿಲಾಗುವುದು ಎಂದು ಭರವಸೆ ನೀಡಿದರು.ಪುರಸಭಾ ಆಶ್ರಯ ಸಮಿತಿ ಸದಸ್ಯರಾದ ಎನ್.ಮುಬಾರಕ್, ಬಿ.ಟಿ.ಚಂದ್ರಶೇಖರ್, ಬಿ.ಜಿ.ಮೈಲಾರಪ್ಪ, ಕಾಂಗ್ರೆಸ್ ಅಲ್ಪ ಸಂಖ್ಯಾತ ಮುಖಂಡ ಆರೀಫ್, ಮಾಜಿ ಪುರಸಭಾ ಸದಸ್ಯರಾದ ಮಾನಿಕ್ ಭಾಷ, ಕಡೂರು ತಾಲ್ಲೂಕು ಮಾದಾರ ಮಹಾಸಭಾದ ಅಧ್ಯಕ್ಷಮಲ್ಲಿಕಾರ್ಜುನ್, ಗಂಟೆ ಕುಮಾರ್ ಸೇರಿದಂತೆ ಮತ್ತಿತರರಿದ್ದರು.
ಮಾಯಕೊಂಡಕ್ಕೆ ತೆರಳುತ್ತಿದ್ದ ಮುಜರಾಯಿ ಮತ್ತು ಬಂದರು ಸಚಿವ ಬಸವಂತಪ್ಪರನ್ನು ಬೀರೂರಿನ ಮಾರ್ಗಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು. ಪುರಸಭಾ ಆಶ್ರಯ ಸಮಿತಿ ಸದಸ್ಯರಾದ ಎನ್.ಮುಬಾರಕ್, ಬಿ.ಟಿ.ಚಂದ್ರಶೇಖರ್, ಸೇರಿದಂತೆ ಮತ್ತಿತರರಿದ್ದರು.